ಕರಾವಳಿ

ತಿರುಮಲ ಶ್ರೀ ಕಾಶಿ ಮಠ ಚಾತುರ್ಮಾಸ ವ್ರತದ ” ಸ್ಮರಣ ಸಂಚಿಕೆ ” ಬಿಡುಗಡೆ

Pinterest LinkedIn Tumblr

ಮಂಗಳೂರು : ಶ್ರೀ ಕಾಶಿ ಮಠ ಸಂಸ್ಥಾನ ವಾರಾಣಸಿ ಇದರ ಶಾಖಾ ಮಠ ವಾದ ತಿರುಮಲ ಶ್ರೀ ಕಾಶಿ ಮಠದಲ್ಲಿ ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ವಿಳಂಬಿ ನಾಮ ಸಂವತ್ಸರದ ಚಾತುರ್ಮಾಸ ವ್ರತದ ” ಸ್ಮರಣ ಸಂಚಿಕೆ”ಯು ಶ್ರೀಗಳವರ ದಿವ್ಯ ಹಸ್ತಗಳಿಂದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬಿಡುಗಡೆ ಗೊಂಡಿತು.

ಈ ಸ್ಮರಣ ಸಂಚಿಕೆಯಲ್ಲಿ ವಿವಿಧ ಲೇಖನಗಳು , ಚಾತುರ್ಮಾಸದ ಚಿತ್ರಗಳೂ ಒಳಗೊಂಡಿವೆ.  ಈ ಸಂದರ್ಭದಲ್ಲಿ ತಿರುಮಲ ಶ್ರೀ ಕಾಶಿ ಮಠದ ಯೋಗೇಶ್ ಕಾಮತ್ , ಜಗನ್ನಾಥ್ ಶೆಣೈ ಮೈಸೂರ್ , ಸುಕೃತೀಂದ್ರ ತೀರ್ಥ ಸ್ವಾಮಿ ಸೇವಾ ಪ್ರತಿಷ್ಠಾನದ ಸಿ ಎ ಜಗನ್ನಾಥ್ ಕಾಮತ್ , ಕೋಟೇಶ್ವರ ದಿನೇಶ್ ಕಾಮತ್ , ರಾಘವೇಂದ್ರ ಭಕ್ತ ಸೋಮೇಶ್ವರ , ಶ್ರೀಧರ್ ಕಾಮತ್ ಕೋಟೇಶ್ವರ , ರಘುವೀರ್ ಭಂಡಾರ್ಕರ್ ಪಾಣೆಮಂಗಳೂರು , ಸಿ ಎಲ್ ಶೆಣೈ , ಕಾಪು ಮಂಜುನಾಥ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು .

Comments are closed.