ಕರಾವಳಿ

ಫಾಸ್ಟ್‌ಪುಡ್ ಸೇವಿಸುವ ವ್ಯಕ್ತಿಗಳಿಗೆ ಸ್ಥೂಲಕಾಯ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು..ಯಾಕೆ !

Pinterest LinkedIn Tumblr

ಯಾಂತ್ರೀಕೃತವಾದ ಆಧುನಿಕ ಜಗತ್ತಿನಲ್ಲಿ ಎಲ್ಲರೂ ಒಂದಲ್ಲ ಒಂದು ಸಮಯ ಈ ಫಾಸ್ಟ್‌ಪುಡ್‍ ರುಚಿಯನು ಸವಿಯುವರೇ ಆಗಿರುತ್ತಾರೆ. ಬಹುಶ: ಎರಡು ವರ್ಷ ಮಗುವಿನಿಂದ ೬೦ ವರ್ಷ ವಯಸ್ಸಿನವರೆಗೆ ಎಲ್ಲಾ ವ್ಯಕ್ತಿಗಳು ಈ ಫಾಸ್ಟ್‌ಪುಡ್‍ ಸೇವಿಸುತ್ತಾರೆ. ಯಾಕೆಂದರೆ, ಇವು ರುಚಿಕರವಾಗಿರುತ್ತವೆ. ಸಾಕಷ್ಟು ಪ್ರಮಾಣದಲ್ಲಿ ಶೀಘ್ರವಾಗಿ ದೊರೆಯುತ್ತದೆ. ಬೆಲೆ ಕಡಿಮೆಯಾಗಿರುತ್ತದೆ. ದಿನದ ಯಾವುದೇ ಸಮಯದಲ್ಲಿ ಫಾಸ್ಟ್‌ಪುಡ್‍ ಲಭ್ಯವಿರುತ್ತದೆ. ಅಲ್ಲದೆ ಒಂದು ದೂರವಾಣಿ ಕರೆಯ ಮೂಲಕವೂ ಇವುಗಳನ್ನು ನಾವಿರುವಲ್ಲಿಗೇ ತರಿಸಬಹುದು.

ಸಾಮಾನ್ಯವಾಗಿ ಈ ಫಾಸ್ಟ್‌ಪುಡ್‍ ಸಂಸ್ಕರಿಸಿದ ಸಕ್ಕರೆ (ರಿಫೈನ್ಡ್ ಶುಗರ್) ಕೊಬ್ಬುಗಳ ಅಧಿಕ ಕ್ಯಾಲೋರಿಯನ್ನು ಹೊಂದಿರುತ್ತದೆ. ಈ ಕೊಬ್ಬನ್ನು ಸಾಮಾನ್ಯ ವಾಗಿ ಬಿಸಿಯಾಗಿರಿಸಲು ನಿರಂತವಾಗಿ ಆಹಾರ ವಸ್ತುಗಳನ್ನುಬಿಸಿಮಾಡುತ್ತಿರುತ್ತಾರೆ. ಈ ಅಹಾರಗಳು ಸಾಮಾನ್ಯವಾಗಿ ಉಪ್ಪಿನಿಂದ ಬರುವ ಸೋಡಿಯಂನ್ನು ಅತ್ಯಧಿಕ ಪ್ರಮಾಣದಲ್ಲಿ ಹೊಂದಿರುತ್ತದೆ. ಅಲ್ಲದೇ ಈ ಆಹಾರದಲ್ಲಿ ಯಾವುದೇ ನಾರಿನ ಅಂಶ ಮತ್ತು ಪೋಷಕಾಂಶಗಳನ್ನು (ವಿಟಮಿನ್ಸ್ ಮಿನರಲ್ಸ್) ಹೊಂದಿರುವುದಿಲ್ಲ. ಈ ಫಾಸ್ಟ್‌ಪುಡ್‌ನೊಂದಿಗೆ ಉಚಿತವಾಗಿ ಸಾಕಷ್ಟು ಪ್ರಮಾಣದಲ್ಲಿ ಕೋಲಾದಂತಹ ಪಾನೀಯಗಳು ಕೆಲವೊಂದು ಬಾರಿ ಸರಬರಾಜಾಗುತ್ತದೆ. ಶಾರೀರಿಕವಾಗಿ ಯಾವ ವ್ಯಕ್ತಿಯು ಯಾವುದೇ ಶ್ರಮಗಳನ್ನು ಮಾಡುವುದಿಲ್ಲವೋ ಅಂತಹವನಲ್ಲಿ ಇದು ಸ್ಥೂಲತೆಗೆ ಕಾರಣವಾಗುತ್ತದೆ. ನಿರಂತರವಾಘಿ ಇದರ ಸೇವೆನೆಯು ಅಧಿಕ ರಕ್ತದೊತ್ತಡ, ಮಧುಮೇಹ, ರಕ್ತದಲ್ಲಿ ಅಧಿಕ ಕೊಬ್ಬಿನಂಶ, ಅರ್ಬುದ ರೋಗಗಳನ್ನು ಉಂಟುಮಾಡುತ್ತದೆ.

ಇತ್ತೀಚಿನ ವೈಜ್ಞಾನಿಕ ವರದಿಯಂತೆ ಈ ಪ್ಫಾಸ್ಟ್‌ಪುಡ್‍ನಲ್ಲಿರುವ ಹೈ ಕ್ಯಾಲೋರಿಯನ್ನು ಹೊಂದಿರುವ ಕೊಬ್ಬು, ಸಂಸ್ಕರಿಸಿದ ಸಕ್ಕರೆ, ಉಪ್ಪು ಇವೆಲ್ಲ ಸೇರಿ ನಿರ್ನಾಳ  ಗ್ರಂಧಿಯಲ್ಲಿ ಹರಿಸು ಹಾಮೋನುಗಳ ಮೇಲೆ ಪರಿಣಾಮ ಬೀರುವುದರಿಂದ ಒಬ್ಬ ವ್ಯಕ್ತಿಯು ಹೆಚ್ಚು ಹೆಚ್ಚಾಗಿ ಆಹಾರವನ್ನು ಮತ್ತೆ ಮತ್ತೆ ಸೇವಿಸುವಂತೆ ಬದಲಾಗುತ್ತಾನೆ .ಕ್ರಮೇಣ ಇದೊಂದು ವ್ಯಸನವಾಗಿ ಪರಿವರ್ತನೆಯಾಗಿ ಒಬ್ಬ ವ್ಯಕ್ತಿಗೆ ಇದು ಅನಾರೋಗ್ಯಕರ ಎಂದು ತಿಳಿದು ಬಂದರೂ ಹತೋಟಿಯಲ್ಲಿಡು ವುದು ಕಷ್ಟವಾಗುತ್ತದೆ. ಇದರಿಂದ ವ್ಯಕ್ತಿಯು ಪುನಃ ಪುನಃ ಫಾಸ್ಟ್‌ಪುಡ್‍ನ ಕಡೇಗೆ ಸೆಳೆಯಲ್ಪಡುತಾನೆ. ಇದು ಮಕ್ಕಳಲ್ಲಿ ಮತ್ತು ಹಿರಿಯರಲ್ಲಿ ದುಷ್ಪರಿಣಾಮವನ್ನು ಬೀರುತ್ತದೆ. ಇವುಗಳನ್ನು ಸೇವಿಸುವ ವ್ಯಕ್ತಿಗಳು ಸ್ಥೂಲಕಾಯ ವ್ಯಕ್ತಿಗಳಾಗಿ ಬದಲಾವಣೆ ಹೊಂದುತ್ತಾರೆ.

Comments are closed.