ಕರಾವಳಿ

ಕಲ್ಲಂಗಡಿ ಹಣ್ಣಿನ ಜೊತೆಗೆ ಅದರ ಬೀಜದಲ್ಲಿನ ಆರೋಗ್ಯಕಾರಿ ವಿಷಯಗಳು

Pinterest LinkedIn Tumblr

ಅಬ್ಬಬ್ಬಾ ಈ ಬಾರಿಯ ಬೇಸಿಗೆ ಬಹಳಷ್ಟು ಆಘಾತಗಳನ್ನು ನೀಡುತ್ತಿದೆ, ಇಂತಹ ಈ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಿ ಬಾಯಾರಿಕೆ ನೀಗಿಸುವ ಅತ್ಯುತ್ತಮ ಹಣ್ಣು ಎಂದರೆ ಅದು ಕಲ್ಲಂಗಡಿ, ನಿಜ ದಣಿವಾದಾಗ ಒಂದು ತುಂಡು ಕಲ್ಲಂಗಡಿ ಹಣ್ಣು ತಿಂದರೆ ಸಾಕು ತೃಪ್ತಿ ಸಿಗುತ್ತದೆ, ಕಲ್ಲಂಗಡಿ ಹಣ್ಣಿನಲ್ಲಿ ಮಾತ್ರವಲ್ಲದೆ ಅದರ ಬೀಜದಲ್ಲಿ ಅನೇಕ ಆರೋಗ್ಯಕಾರಿ ಉಪಯೋಗಗಳಿಗೆ ಇಂದು ಅದರ ಬಗ್ಗೆ ತಿಳಿಯೋಣ.

ಕಲ್ಲಂಗಡಿ ಹಣ್ಣುಗಳು ಹಳದಿ ಹಾಗೂ ಕಿತ್ತಲೆ ಬಣ್ಣದಲ್ಲಿ ವಿಶ್ವದ ಎಲ್ಲಾ ಕಡೆಯಲ್ಲೂ ಲಭ್ಯವಿದೆ, ನಿಮಗೆ ಆಶ್ಚರ್ಯವಾಗಬಹುದು ಬಿಳಿಯ ಸಿಪ್ಪೆ ಯನ್ನು ಹೊಂದಿರುವ ಕಲ್ಲಂಗಡಿ ಯು ಸಹ ಇದೆ, ಚೀನಾದ ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಇತರ ಬೀಜಗಳೊಂದಿಗೆ ಸೇರಿಸಿ ಸೇವನೆ ಮಾಡುತ್ತಾರೆ, ಅಷ್ಟೇ ಅಲ್ಲದೆ ವಿಯಟ್ನಾಮ್ ಹೊಸ ವರ್ಷದ ರಜೆ ಸಂದರ್ಭದಲ್ಲೂ ಈ ಹಣ್ಣಿನ ಬೀಜಗಳನ್ನು ತಿನ್ನುತ್ತಾರೆ.

ಕಾರಣ ಈ ಹಣ್ಣಿನ ಬೀಜದಲ್ಲಿ ವಿಟಮಿನ್ ಎ, ಬಿ1, ಬಿ6, ವಿಟಮಿನ್ ಸಿ, ಪೊಟಾಶಿಯಂ ಹಾಗೂ ಮೆಗ್ನೇಶಿಯಂ ಗಳ ಸಾರವೇ ಇದೆ, ಭಾರತದಲ್ಲಿ ಹಣ್ಣುಗಳನ್ನು ತಿಂದು ಬೀಜವನ್ನು ಬಿಸಾಕುತ್ತಾರೆ ಆದರೆ ಚೀನಾ ಅಥವಾ ವಿಯಟ್ನಾಮ್ ದೇಶದಲ್ಲಿ ಬೀಜಗಳನ್ನು ಯಾವುದೇ ಕಾರಣಕ್ಕೂ ಬಿಸಾಡುವುದಿಲ್ಲ.

ಕಲ್ಲಂಗಡಿ ಹಣ್ಣಿನ ಬೀಜದ ಸೇವನೆಯಿಂದ ದೊರೆಯುವ ಉಪಯೋಗಗಳು.

ಈ ಹಣ್ಣಿನ ಬೀಜದಲ್ಲಿ ಮೆಗ್ನೇಶಿಯಂ ಅಂಶ ಹೆಚ್ಚಾಗಿರುವುದರಿಂದ ಹೃದಯವು ಸಹಜವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ, ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ವೃದ್ಧಾಪ್ಯವನ್ನು ನಿಧಾನಗೊಳಿಸುತ್ತದೆ.

ಮೊಡವೆಗಳು ಹೆಚ್ಚಾದಲ್ಲಿ ಇದೇ ಬೀಜಗಳ ಎಣ್ಣೆಯಿಂದ ಮಸಾಜ್ ಮಾಡಿದರೆ ಸೂಕ್ಷ್ಮ ರಂಧ್ರಗಳಲ್ಲಿ ಇರುವ ಕಲೆಗಳನ್ನು ಹಾಗೂ ಸತ್ತ ಜೀವಕೋಶಗಳನ್ನು ನಿವಾರಿಸುವಲ್ಲಿ ಸಹಾಯಕ.

ಎಣ್ಣೆಯಲ್ಲಿರುವ ಪ್ರೋಟಿನ್ ಹಾಗೂ ಅಮೈನೋ ಆಮ್ಲಗಳಿಂದ ಕೂದಲಿನ ಬುಡವನ್ನು ಗಟ್ಟಿ ಮಾಡುತ್ತದೆ, ಈ ಬೀಜಗಳನ್ನು ಹುರಿದು ಪುಡಿ ಮಾಡಿ ಕೂದಲಿಗೆ ಹಚ್ಚಿ ಕೊಳ್ಳುವುದರಿಂದ ಕೂದಲು ಕಾಂತಿಯುತವಾಗಿ ಬೆಳೆಯುತ್ತದೆ.

ಪೊಟ್ಯಾಶಿಯಂ ಅಂಶ ಹೆಚ್ಚಾಗಿ ಇರುವುದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಈ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಬೇಕು, ಊರಿ ಕೂತ ದಂತ ಶರೀರದ ಯಾವುದಾದರೂ ಒಂದು ಭಾಗದಲ್ಲಿ ನೋವು ಕಾಣಿಸಿಕೊಂಡರೆ ಮುಕ್ಕಾಲು ಕಪ್ ಬಿಸಿ ನೀರಿನಲ್ಲಿ ಒಂದು ಚಮಚ ಈ ಪುಡಿ 1 ಚಮಚ ಜೇನು ತುಪ್ಪ ಹಾಕಿಕೊಂಡು ಮಿಶ್ರಣ ಮಾಡಿ ದಿನಕ್ಕೆ ಎರಡು ಬಾರಿ ಕುಡಿದರೆ ನೋವು ಶಮನವಾಗುತ್ತದೆ.

Comments are closed.