ಕರಾವಳಿ

ಏರ್ ಸ್ಟ್ರೈಕ್; ಕುಂದಾಪುರದಲ್ಲಿ ಭಾ.ಜ.ಪಾ. ಸಂಭ್ರಮಾಚರಣೆ

Pinterest LinkedIn Tumblr

ಕುಂದಾಪುರ: ಪುಲ್ವಾಮದಲ್ಲಿ ಸೈನಿಕರ ಮೇಲೆ ಅಮಾನವೀಯ ದಾಳಿ ನಡೆಸಿ, ಯೋಧರ ಹತ್ಯೆಗೆ ಪ್ರತಿಕಾರವಾಗಿ ಏರ್ ಸ್ಟ್ರೈಕ್ ದಾಳಿ ನಡೆಸಿ ಉಗ್ರರ ಹಾಗೂ ಅಡಗು ತಾಣ ನಾಶ ಮಾಡಿದ ಹಿನ್ನೆಲೆಯಲ್ಲಿ ಕುಂದಾಪುರ ಬಿಜೆಪಿ ಕಾರ್‍ಯಕರ್ತರು ಹಾಗೂ ಪದಾಧಿಕಾರಿಗಳು ಮಂಳವಾರ ಸಂಜೆ ಪಟಾಕಿ ಸಿಡಿಸಿ, ಸಹಿ ಹಂಚಿ ಸಂಭ್ರಮಿಸಿದರು.

ಕುಂದಾಪುರ ಬಿಜೆಪಿ ಕಚೇರಿಯಂದ ಹೊರಟ ಬಿಜೆಪಿ ಕಾರ್‍ಯಕರ್ತರು ಶಾಸ್ತ್ರಿ ವೃತ್ತದ ಬಳಿ ಜೈಹಿಂದ್ ಘೋಷಣೆ ಹಾಗೂ ವಂದೇ ಮಾತರಂ ಗೀತೆ ಹಾಡಿ ಸಂಭ್ರಮಿಸಿದರು. ಭಾರತ್ ಮಾತಾಕಿ ಜೈ, ಮೋದಿಗೆ ಜೈ ಘೋಷಣೆ ಕೂಗಿ, ಸಂಭ್ರಮಿಸಿದರು.

ಬಿಜೆಪಿ ಕುಂದಾಪುರ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಪ್ರಧಾನ ಕಾರ್‍ಯದರ್ಶಿ ಭಾಸ್ಕರ ಬಿಲ್ಲವ ಪುರಸಭಾ ಸದಸ್ಯ ಮೋಹನ್ ದಾಸ್ ಶೆಣೈ, ಮಾಜಿ ಪುರಸಭೆ ಸದಸ್ಯರಾದ ಸತೀಶ್ ಶೆಟ್ಟಿ, ರವಿರಾಜ್ ಖಾರ್ವಿ, ಉದ್ಯಮಿ ಅನಂತಕೃಷ್ಣ ಕೊಡ್ಗಿ ಮುಂತಾದವರು ಇದ್ದರು. ಮೋದಿ ಟೀಮ್ ಕೂಡಾ ದ್ವಜ ಹಿಡಿದು ಮುಖ್ಯರಸ್ತೆಯಲ್ಲಿ ಸಂಭ್ರಮಾಚರಣೆ ನಡೆಸಿದರು.

Comments are closed.