ಕರಾವಳಿ

ಮಾರ್ಚ್‌ನಲ್ಲಿ ನೌಕಾ ಪಡೆಯ ಅಧಿಕಾರಿಗಳೊಂದಿಗೆ ರಕ್ಷಣಾ ಸಚಿವೆ ಮಲ್ಪೆಗೆ; ಮೀನುಗಾರರ ಜೊತೆ ಸಭೆ

Pinterest LinkedIn Tumblr

ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿ ಬೋಟ್‌ ಸಹಿತ ನಾಪತ್ತೆಯಾಗಿರುವ ಏಳು ಮಂದಿ ಮೀನುಗಾರರ ಪತ್ತೆ ಮಾಡುವಂತೆ ಉಡುಪಿ ಶಾಸಕ ಕೆ. ರಘುಪತಿ ಭಟ್‌ ನೇತೃತ್ವದ ಮೀನುಗಾರರ ನಿಯೋಗವು ಬೆಂಗಳೂರಿನಲ್ಲಿ ಭಾನುವಾರ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿ ಆಗ್ರಹಿಸಿತು.

ಈ ಬಗ್ಗೆ ಸೂಕ್ತವಾಗಿ ಸ್ಪಂದಿಸಿದ ಸಚಿವರು ಈ ಬಗ್ಗೆ ಖುದ್ದಾಗಿ ತಾನೇ ಮಾರ್ಚ್‌ 5ರೊಳಗೆ ನೌಕಾ ಪಡೆಯ ಅಧಿಕಾರಿಗಳ ಸಹಿತ ಮಲ್ಪೆಗೆ ಆಗಮಿಸಿ ಮೀನುಗಾರರೊಂದಿಗೆ ಸಭೆ ನಡೆಸಿ ಮುಂದಿನ ಕಾರ್ಯಾಚರಣೆ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ನಿಯೋಗದಲ್ಲಿ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌, ಅಖೀಲ ಭಾರತೀಯ ಮೀನುಗಾರರ ವೇದಿಕೆಯ ಪದಾಧಿಕಾರಿಗಳಾದ ದಯಾನಂದ ಸುವರ್ಣ, ಕರುಣಾಕರ ಸಾಲ್ಯಾನ್‌, ಶಶಿಧರ ತಿಂಗಳಾಯ, ಗೋಪಾಲ ಆರ್‌.ಕೆ., ಹರೀಶ್‌ ಕುಂದರ್‌ ಹಾಗೂ ನಾಪತ್ತೆಯಾದ ಮೀನುಗಾರರ ಕುಟುಂಬ ಸದಸ್ಯರಾದ ಗಣೇಶ್‌ ಕೋಟ್ಯಾನ್‌, ಪ್ರಮೋದ್‌ ಸಾಲ್ಯಾನ್‌, ಪಾಂಡು ಮೊಗೇರ ಉಪಸ್ಥಿತರಿದ್ದರು.

Comments are closed.