ಕರಾವಳಿ

ಅಬ್ಬಕ್ಕ ಉತ್ಸವ : ಜನಾಕರ್ಷಣೆ ಕಾರ್ಯಕ್ರಮಗಳಿಗೆ ಸಿದ್ಧತೆ

Pinterest LinkedIn Tumblr

ಮಂಗಳೂರು ಫೆಬ್ರವರಿ 22 : ವೀರರಾಣಿ ಅಬ್ಬಕ್ಕ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಈಗಾಗಲೇ ಜಿಲ್ಲಾಡಳಿತ ಕಾರ್ಯೋನ್ಮುಖವಾಗಿದ್ದು ಈ ಸಂಬಂಧ ಉತ್ಸವದ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಸೆಲ್ವಮಣಿ ಆರ್ ಅವರ ಅಧ್ಯಕ್ಷತೆಯಲ್ಲಿ ಕೋರ್‍ಸಮಿತಿ ಸಭೆ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಬ್ಬಕ್ಕ ಉತ್ಸವ ಸಂಬಂದ ವಿವಿಧ ಸಮಿತಿಗಳು ಕೈಗೊಂಡಿರುವ ಕ್ರಮಗಳು ಹಾಗೂ ಈ ಸಂಬಂಧ ಆಗಿರುವ ಕಾರ್ಯಯೋಜನೆಗಳ ಮಾಹಿತಿಯನ್ನು ಪಡೆದರು. ಅಬ್ಬಕ್ಕ ಉತ್ಸವ ಸರ್ವರನ್ನೂ ಒಳಗೊಂಡ ಉತ್ಸವವಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನಾಕರ್ಷಣೆಗೆ ಕಾರ್ಯಕ್ರಮ ರೂಪಿಸಲಾಗಿದೆ. ಹಿಂದಿಗಿಂತಲೂ ವಿಭಿನ್ನವಾಗಿ ಕಾರ್ಯಕ್ರಮ ನಡೆಸುವ ಮೂಲಕ ವೀರರಾಣಿ ಅಬ್ಬಕ್ಕ ಚರಿತ್ರೆಯನ್ನು ಜನಮಾನಸದಲ್ಲಿ ಅಚ್ಚು ಮೂಡಿಸಬೇಕು ಎಂದು ಅವರು ತಿಳಿಸಿದರು.

ಅಬ್ಬಕ್ಕ ಉತ್ಸವದ ಪ್ರತೀ ಕಾರ್ಯಕ್ರಮದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತಾಗಬೇಕು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.

ಆಹಾರ ಸಮಿತಿಯ ಕಾರ್ಯ ಪ್ರಗತಿಯನ್ನು ಉಳ್ಳಾಲ ನಗರಸಭೆ ಆಯುಕ್ತೆ ವಾಣಿ ವಿ ಆಳ್ವಾ ವಿವರಿಸಿದರು. ವೇದಿಕೆ ಸಮಿತಿಯ ಅಧ್ಯಕ್ಷರಾಗಿರುವ ಮೂಡಾ ಆಯುಕ್ತ ಶ್ರೀಕಾಂತ್ ರಾವ್ ಅವರು ವೇದಿಕೆ ನಿರ್ಮಾಣ ಸೌಂಡ್ ಮತ್ತು ಲೈಟ್ ಸಂಬಂಧಿ ಈಗಾಗಲೇ ಟೆಂಡರ್ ಕರೆಯಲಾಗಿದ್ದು ಉತ್ತಮ ವೇದಿಕೆ ಧ್ವನಿ, ಬೆಳಕನ್ನು ವ್ಯವಸ್ಥೆ ಮಾಡಲಾಗುವುದು ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ ತಂಡ ಈಗಾಗಲೇ ಕಾರ್ಯಕ್ರಮ ಪಟ್ಟಿಯನ್ನು ಸಿದ್ದಪಡಿಸಿ ಕಲಾತಂಡಗಳನ್ನು ಗುರುತಿಸಿದೆ ಎಂದು ಡಿಡಿಸಿಪಿ ಶಿವರಾಮಯ್ಯ ಮಾಹಿತಿ ನೀಡಿದರು.

ಮ್ಯಾರಾಥನ್ ಆಯೋಜನೆ ಬಗ್ಗೆ ಯುವ ಜನ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಾದ ಪ್ರದೀಪ್ ಡಿಸೋಜಾ ವಿವರಿಸಿದರು. ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ನಾಗರಾಜ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಸಭೆಯಲ್ಲಿ ಉಪಸ್ಥಿತರಿದ್ದರು.

Comments are closed.