ಕರಾವಳಿ

ಕೊಡಿಯಾಲ ತೇರು ಸಂಪನ್ನ : ಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಓಕುಳಿಯಾಟ ಸಂಭ್ರಮ

Pinterest LinkedIn Tumblr

ಶ್ರೀ ವೀರ ವೆಂಕಟೇಶ ದೇವರ ರಥೋತ್ಸವದ ಸಂಭ್ರಮಕ್ಕೆ ಓಕುಳಿಯಾಟದ ತೆರೆ

ಮಂಗಳೂರು, ಫೆಬ್ರವರಿ,14: ಮಂಗಳೂರು ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕೊಡಿಯಾಲ ತೇರು ಎಂದೇ ಪ್ರಸಿದ್ಧವಾದ ಶ್ರೀ ವೀರ ವೆಂಕಟೇಶ ದೇವರ ರಥೋತ್ಸವದ ಅಂಗವಾಗಿ ಬುಧವಾರ ಓಕುಳಿ ಉತ್ಸವ ನಡೆಯಿತು.

ರಥಬೀದಿಯಲ್ಲಿ ನೆರಿದಿದ್ದ ಸಮಾಜಬಾಂಧವರು ಪರಸ್ಪರ ಬಣ್ಣಗಳನ್ನು ಸಿಂಪಡಿಸಿಕೊಂಡು ಓಕುಳಿ ನೀರಿನಲ್ಲಿ ಮಿಂದು ಸಂಭ್ರಮಿಸಿದರು. ವಿವಿಧ ಧಾರ್ಮಿಕ ವಿದಿವಿಧಾನಗಳೊಂದಿಗೆ ಐದು ದಿನಗಳ ಕಾಲ ನಡೆದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಆರನೆಯ ದಿನವಾದ ಬುಧವಾರ ನಡೆದ ಓಕುಳಿ ಕಾರ್ಯಕ್ರಮದಲ್ಲಿ ಪುರುಷರು ಮಕ್ಕಳು, ಮಹಿಳೆಯರೆನ್ನದೆ ನೂರಾರು ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು.

ವರ್ಷಂಪ್ರತಿ ಆರನೇ ದಿನ ನಡೆಯುವ ಈ ಓಕುಳಿಯಾಟದಲ್ಲಿ ನಗರದಿಂದ ಮಾತ್ರವಲ್ಲದೆ ರಾಜ್ಯದಾದ್ಯಂತ ಆಗಮಿಸಿದ ಭಕ್ತರು ಯಾವುದೇ ರೀತಿಯ ಧರ್ಮ ಭೇದವಿಲ್ಲದೆ ಎಲ್ಲರೂ ಪಾಲ್ಗೊಂಡು ಸಂಭ್ರಮಿಸುವ ದಿನವಾಗಿದೆ. ಬೆಳಿಗ್ಗೆ ಸುಮಾರು 10 ಗಂಟೆಗೆ ಪ್ರಾರಂಭವಾದ ಓಕುಳಿಯಾಟದಲ್ಲಿ ಕೆಲವರು ಪರಸ್ಪರ ಬಣ್ಣದ ಹುಡಿಗಳನ್ನು ಎರಚಿದರೆ ಇನ್ನು ಕೆಲವರು ಸ್ಪ್ರೇಯರ್ ಗಳಲ್ಲಿ ಬಣ್ಣದ ನೀರನ್ನು ತುಂಬಿಸಿ ಸಿಂಪಡಿಸುವ ದೃಶ್ಯ ಕಂಡುಬಂದಿತು.

ಐದು ದಿನಗಳ ಕಾಲ ನಡೆದ ವಿವಿಧ ಪೂಜೆ ಪುನಸ್ಕಾರಗಳಲ್ಲಿ ಭಕ್ತಿ ಶ್ರದ್ಧೆಯಿಂದ ಭಾಗವಹಿಸುವ ಭಕ್ತರು ಜಾತ್ರೆಯ ಸಂದರ್ಭದಲ್ಲಿ ಮಾಡಿರುವ ಕೆಲಸ ಕಾರ್ಯಗಳಿಂದಾದ ದಣಿವನ್ನು ಈ ಓಕುಳಿಯಾಟವನ್ನು ಆಡುವುದರ ಮೂಲಕ ತಮ್ಮ ದಣಿವನ್ನು ನಿವಾರಿಸಿ ಕೊಳ್ಳುತ್ತಾರೆ.

ಧರ್ಮ ಭೇದವಿಲ್ಲದೆ ಆಡುವ ಈ ಓಕುಲಳಿಯಾಟವು ಪರಸ್ಪರರ ನಡುವೆ ಸಾಮರಸ್ಯವನ್ನು ಮೂಡಿಸುವಂತ ದಿನವಾಗಿದೆ. ವಿವಿಧೆಡೆಗಳಿಂದ ಸಾವಿರಾರು ಭಕ್ತರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಈ ದಿನ ಆಗಮಿಸುತ್ತಾರೆ ಹಾಗೂ ಓಕುಳಿಯಾಟದಲ್ಲಿ ಸಂಭ್ರಮಿಸುತ್ತಾರೆ. ಯುವಕರಿಗಂತೂ ಈ ದಿನ ಬಹಳಷ್ಟು ಸಂಭ್ರಮದ ದಿನವಾಗಿದ್ದು. ಕೆಲವು ಸಂಘ ಸಂಸ್ಥೆಗಳು ನೀರಿನ ಟ್ಯಾಂಕರ್ ಗಳಲ್ಲಿ ಬಣ್ಣದ ನೀರನ್ನು ತುಂಬಿಸಿ ಪೈಪಿನ ಮೂಲಕ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದವರ ಮೇಲೆ ಸಿಂಪಡಿಸುತ್ತಿದ್ದ ದೃಶ್ಯ ಕಂಡುಬಂದಿತು.

Comments are closed.