ಕರಾವಳಿ

ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರ ಬಂಧನ

Pinterest LinkedIn Tumblr

ಮಂಗಳೂರು : ನಗರದ ವಿವಿಧೆಡೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವನೆ ಮಾಡುತಿದ್ದ ಇಬ್ಬರು ಯುವಕರನ್ನು ಬರ್ಕೆ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕುದ್ರೋಳಿ ನಡುಪಳ್ಳಿ ಮಸೀದಿಯ ಬಳಿ ನಿವಾಸಿ ಮೊಹಮ್ಮದ್ ರಿಜ್ವಾನ್ (22) ಹಾಗೂ ಡೊಂಗರಕೇರಿ ಸಮೀಪದ ಪ್ರಗತಿ ಸರ್ವಿಸ್ ಸ್ಟೇಷನ ಬಳಿ ನಿವಾಸಿ ರಾಹುಲ್ ಗಟ್ಟಿ (20) ಬಂಧಿತ ಆರೋಪಿಗಳು.

ನಗರದ ಬರ್ಕೆ ಠಾಣಾ ವ್ಯಾಪ್ತಿಯ ಕರ್ನಲ್ ಗಾರ್ಡನ ಬೋಟ್ ಯಾರ್ಡ ಮತ್ತು ಬೋಳೂರು ಸುಲ್ತಾನ ಬತ್ತೇರಿ ಬಳಿ ಗಾಂಜಾ ಸೇವನೆ ಮಾಡುತಿದ್ದ ಸಂದರ್ಭ ಈ ಇಬ್ಬರು ಯುವಕರನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರ ವಿರುದ್ದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬರ್ಕೆ ಠಾಣಾ ಪೊಲೀಸ್ ನಿರೀಕ್ಷರಾದ ಉಮೇಶ್.ಯು ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಚರಣೆಯಲ್ಲಿ ಬರ್ಕೆ ಪೊಲೀಸ್ ಠಾಣೆಯ ಪಿ.ಎಸ್.ಐ ಶೋಭಾ, ಹೆಚ್.ಸಿ ಗಣೇಶ್ ಮತ್ತು ಕೇಂದ್ರ ರೌಡಿ ನಿಗ್ರಹ ದಳದ ಸಿಬ್ಬಂದಿಗಳಾದ ಸಂತೋಷ, ವೆಲೇಸ್ಟೀನ್ ಜಾರ್ಜ ಡಿ’ಸೋಜಾ, ಕಿಶೋರ್, ಪ್ರಮೋದ್, ನಾಗರಾಜ್ ಮತ್ತು ಬಸವರಾಜ ರವರು ಪಾಲ್ಗೊಂಡಿದ್ದರು.

Comments are closed.