ಕರಾವಳಿ

ಕನ್ನಡಕ್ಕೆ ಮೇರು ಸಾಹಿತಿ ಪ್ರೋ. ಎಸ್.ವಿ.ಪಿ. ಭಟ್ಟರ ಕೊಡುಗೆ ಅಪಾರ : ಡಾ. ಚಂದ್ರಶೇಖರ ಕಂಬಾರ

Pinterest LinkedIn Tumblr

ಮಂಗಳೂರು : ಕನ್ನಡ ನಾಟಕಕಾರಲ್ಲಿ ಮತ್ತು ಸಾಹಿತ್ಯ ಕೃಷಿ ಮಾಡಿದವರಲ್ಲಿ ಪ್ರೋ. ಎಸ್.ವಿ.ಪಿ. ಭಟ್ಟರು ಮೇರು ಸಾಹಿತಿಗಳು, ಅವರ ಕೊಡುಗೆ ಕನ್ನಡಕ್ಕೆ ಅಪಾರವಾಗಿದೆ ಎಂದು ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರು ಹೇಳಿದರು.

ಅವರು ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ನಡೆದ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಪ್ರೋ.ಎಸ್.ವಿ. ಪರಮೇಶ್ವರ ಭಟ್ಟ ಶತಮಾನೋತ್ಸವ ಸಂಸ್ಮರಣ ಸಮಿತಿಯ ಸಂಯೋಗದ ಪ್ರೊ.ಎಸ್.ವಿ.ಪಿ. ಭಟ್ಟರ ಸಮಗ್ರ ಸಂಪುಟಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರವು ಹಿರಿಯ ಸಾಹಿತಿಗಳ ಪುಸ್ತಕಗಳನ್ನು ಮತ್ತು ಅವರ ಕನ್ನಡಪರವಾದ ಸಾಹಿತ್ಯವನ್ನು ಪ್ರಸರಿಸುವಲ್ಲಿ ಬಹುಮುಖ್ಯವಾದ ಪಾತ್ರವಹಿಸಿದೆ ಎಂದು ಶ್ಲಾಘನೆ ಮಾಡಿದರು.

ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿಯವರು ಮಾತನಾಡಿ, ಪ್ರೊ.ಎಸ್.ವಿ.ಪಿ. ಭಟ್ಟರ ಸಮಗ್ರ ಸಾಹಿತ್ಯದ ಪುಸ್ತಕಗಳು ಇವತ್ತಿನ ಯುವ ಸಮುದಾಯಕ್ಕೆ ತಲುಪಲು ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳ ಗ್ರಂಥಾಲಯದಲ್ಲಿ ನೀಡುವುದು. ಮತ್ತು 20  ಜಿಲ್ಲೆಗಳಲ್ಲಿ ಪುಸ್ತಕ ಮೇಳ ನಡೆಸಲಾಗುವುದು.

ಆ ಮೇಳದಲ್ಲಿ ಶೇಕಡ ೫೦ರ ರಿಯಾಯಿತಿ ದರದಲ್ಲಿ ಪುಸ್ತಕಗಳ ಮಾರಾಟಕ್ಕಿವೆ. ಈಗಾಗಲೇ ಆನ್‌ಲೈನ್ ಮೂಲಕ ಪುಸ್ತಕದ ಮುಂಗಡವಾಗಿ ಬುಕ್ ಮಾಡುತ್ತಿದ್ದಾರೆ, ಒಂದು ಲಕ್ಷ ಪುಸ್ತಕಗಳು ಮಾರಾಟವಾಗಿವೆ. ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಸಮಗ್ರ ಸಂಪುಟಗಳ ಸಂಗ್ರಹಿದ ಕೃತಿ ಹಿಂದೆ ಸಂಪಾದಕೀಯ ತಂಡದ ಶ್ರಮವಿದೆ. ಮುಂದಿನ ದಿನದಲ್ಲಿ ಮಂಗಳೂರಿನಲ್ಲಿ ಬೃಹತ್ ಪುಸ್ತಕ ಮೇಳ ಮಾಡುವ ಉದ್ದೇಶವಿದೆ.

ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಸಮಗ್ರ ಸಂಪುಟವನ್ನು ಗದ್ಯ, ಕವ್ಯ, ಕುವೆಂಪು ದರ್ಶನ ಎಂದು ಏಳು ಭಾಗವಾಗಿ ವಿಂಗಡಣೆ ಮಾಡಿ ಸಮಗ್ರ ಸಂಪುಟಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಪ್ರೊ. ಬಿ.ವಿ.ವಿವೇಕ ರೈ, ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ, ಸಂತ ಅಲೋಶಿಯಸ್ ಕಾಲೇಜು ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್, ಪ್ರೊ.ಎಸ್.ವಿ.ಪಿ. ಅವರ ಪುತ್ರರಾದ ಎಸ್.ಪಿ.ರಾಮಚಂದ್ರ, ಉಪಸ್ಥಿತರಿದ್ದರು.

ಡಾ. ನಾ. ದಾಮೋದರ ಶೆಟ್ಟಿಯವರು ಸ್ವಾಗತಿಸಿದರು ಮತ್ತು ಡಾ. ನರಸಿಂಹಮೂರ್ತಿ ಆರ್. ನಿರೂಪಣೆ ಮಾಡಿದರು.

Comments are closed.