ಕರಾವಳಿ

ಕಾಪು ಬಳಿ ಬೆಂಕಿ ಹತ್ತಿದ ಸ್ಥಿತಿಯಲ್ಲಿ ಶವ ಪತ್ತೆ: ಆತ್ಮಹತ್ಯೆಯೋ, ಕೊಲೆಯೋ ನಿಗೂಢ

Pinterest LinkedIn Tumblr

ಉಡುಪಿ: ಜಿಲ್ಲೆಯ ಕಾಪು ಸಮೀಪದ ಮಜೂರಿನಲ್ಲಿ ವ್ಯಕ್ತಿಯೊಬ್ಬನ ಶವ ಬೆಂಕಿ ಹತ್ತಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಲ್ಲಿನ ರೈಲ್ವೇ ಹಳಿ ಬಳಿಯ ಪೊದೆಯಲ್ಲಿ ಶವವನ್ನು ಸ್ಥಳೀಯರು ಗುರುತಿಸಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಶವದ ಪರಿಶೀಲನೆ ನಡೆಸಿದ್ದಾರೆ.

ಧರಿಸಿದ್ದ ಉಡುಪಿನ ಆಧಾರದಲ್ಲಿ ಇದೊಂದು ಪುರುಷನ ಶವ ಅನ್ನೋದು ಗೊತ್ತಾಗಿದೆ. ಮಧ್ಯರಾತ್ರಿಯ ವೇಳೆ ಸುಟ್ಟು ಹೋಗಿರುವ ಸಾಧ್ಯತೆಯಿದ್ದು, ಜನರು ಬೆಳಗ್ಗೆ ಶವವನ್ನು ಕಂಡಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಗೆ ಶವವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬೆಂಕಿ ಉರಿಯುತ್ತಿರುವಾಗ ಶವ ಕಂಡಿದ್ದು ಹೆಚ್ಚಿನ ತನಿಖೆಯಿಂದಷ್ಟೇ ಸತ್ಯಾಸತ್ಯತೆ ತಿಳಿಯಬೇಕಾಗಿದೆ.

Comments are closed.