ಕರಾವಳಿ

ವೇಶ್ಯಾವಾಟಿಕೆ ನಡೆಸುತ್ತಿದ್ದ ಮಸಾಜ್ ಪಾರ್ಲರ್‌ಗೆ ಪೊಲೀಸ್ ದಾಳಿ : ಓರ್ವ ಸೆರೆ -ಓರ್ವ ಮಹಿಳೆಯ ರಕ್ಷಣೆ

Pinterest LinkedIn Tumblr

ಮಂಗಳೂರು : ಮಸಾಜ್ ಪಾರ್ಲರ್ ಮತ್ತು ಆಯುರ್ವೇದಿಕ್ ಥೇರಫಿ ಎಂಬ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಶೋಕನಗರದ ಮಸಾಜ್ ಪಾರ್ಲರ್‌ಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಮತ್ತು ಉರ್ವ ಪೊಲೀಸರು ಓರ್ವ ಯುವಕನನ್ನು ಬಂಧಿಸಿ,ಓರ್ವ ಯುವತಿಯನ್ನು ರಕ್ಷಿಸಿದ್ದಾರೆ.

ಮಂಗಳೂರು ನಗರದ ಅಶೋಕನಗರದ ಮಂಜೆಶ ಆರ್ಕೇಡ್ ಕಟ್ಟಡದ 2 ನೇ ಅಂತಸ್ತಿನ ಕೊಠಡಿಯಲ್ಲಿ ಸ್ಪರ್ಶ್ ಮಸಾಜ್ ಪಾರ್ಲರ್ ಮತ್ತು ಆಯುರ್ವೇದಿಕ್ ಥೇರಫಿ ಎಂಬ ಮಸಾಜ್ ಪಾರ್ಲರ್ ನಲ್ಲಿ ಯುವತಿಯರನ್ನು ಗ್ರಾಹಕರಿಗೆ ಒದಗಿಸುತ್ತಿದ್ದು, ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ದಾಳಿ ನಡೆಸಿ ಓರ್ವ ಯುವತಿಯನ್ನು ರಕ್ಷಿಸಲಾಗಿದ್ದು, ಯುವಕನನ್ನು ಮಂಗಳೂರು ಸಿಸಿಬಿ ಮತ್ತು ಉರ್ವ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ಮಂಗಳೂರು ನಗರದ ಅಶೋಕನಗರದ ಮಂಜೆಶ ಆರ್ಕೇಡ್ ಕಟ್ಟಡದ 2 ನೇ ಅಂತತ್ತಿನ ಕೊಠಡಿಯಲ್ಲಿ ಸ್ಪರ್ಶ್ ಮಸಾಜ್ ಪಾರ್ಲರ್ ಮತ್ತು ಆಯುರ್ವೇದಿಕ್ ಥೇರಫಿ ಎಂಬ ಮಸಾಜ್ ಪಾರ್ಲರ್ ನಲ್ಲಿ ಯುವತಿಯರನ್ನು ವೇಶ್ಯಾವಾಟಿಕೆಗೆ ಗ್ರಾಹಕರಿಗೆ ಒದಗಿಸುತ್ತಿದ್ದ ಬಗ್ಗೆ ದಾಳಿ ನಡೆಸಿ ವೇಶ್ಯಾವಾಟಿಕೆಗೆ ಯುವತಿಯರನ್ನು ಒದಗಿಸುತ್ತಿದ್ದ ದಲ್ಲಾಳಿ (ಪಿಂಪ್) ಸುಶೀಲ ಗಂಡ: ಹೆಚ್ ಎಂ ನಾಗರಾಜ್ ವಾಸ: ಅಶೋಕನಗರ ಮಂಗಳೂರು ಎಂಬಾಕೆಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ವೇಶ್ಯಾವಾಟಿಕೆಯಿಂದ ಗಳಿಸಿದ ರೂಪಾಯಿ 2,000/ ನ್ನು ವಶಪಡಿಸಲಾಗಿದೆ. ದಲ್ಲಾಳಿ (ಪಿಂಪ್) ಸುಶೀಲ ಎಂಬಾಕೆಯು ತಲೆಮರೆಸಿಕೊಂಡಿರುತ್ತಾಳೆ.

ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶ್ರೀ ಶಾಂತಾರಾಮ, ಉರ್ವ ಠಾಣೆಯ ಇನ್ಸ್ ಪೆಕ್ಟರ್ ಕೆ.ಎಂ. ಶರೀಫ್ ಸಿಸಿಬಿ ಘಟಕದ ಪಿಎಸ್ಐ ಕಬ್ಬಳರಾಜ್ ಮತ್ತು ಸಿಬ್ಬಂದಿಗಳು ಮತ್ತು ಉರ್ವ ಠಾಣಾ ಸಿಬ್ಬಂದಿಗಳು ಭಾಗವಹಿಸಿದ್ದರು.

Comments are closed.