ಕರಾವಳಿ

ರಕ್ತ ಶುದ್ಧಿ,ಕೇಶ ವೃದ್ಧಿ,ನೇತ್ರ ಪುಷ್ಪಗೆ ಸೊಗದೆ ಬೇರಿನ ಸರಳ ಚಿಕಿತ್ಸೆ

Pinterest LinkedIn Tumblr

ತೆಳ್ಳಗಿರುವ ಬಳ್ಳಿ ಹಳ್ಳಿಯ ಜನರಿಗೆ ತೀರ ಪರಿಚಯವಿರುವ ವನಮೂಲಿಕೆ. ಎಲೆಗಳು ದಾಳಿಂಬೆ ಗಿಡದ ಎಲೆಗಳನ್ನು ಹೋಲುತ್ತದೆ ಮತ್ತು ಸ್ವಲ್ಪ ಉದ್ದವಾಗಿರುತ್ತವೆ. ಪ್ರತಿ ಎಲೆಯ ಮಧ್ಯೆ ಬಿಳಿ ನಾಮವಿರುವುದು. ಆದುದರಿದಂದಲೆ ಈ ಬಳ್ಳಿಗೆ ನಾಮದ ಬಳ್ಳಿಯೆಂದು ಕರೆಯುತ್ತಾರೆ. ಈ ಬಳ್ಳಿಯ ಬೇರುಗಳಿಗೆ ಸುಗಂಧವಿರುವುದು. ಆದುದರಿಂದಲೇ ಸುಗಂಧಿ ಬೇರು ಎಂದು ಸಹ ಕರೆಯುವರು. ಮರಗಿಡಗಳ ಬೇರನ್ನು ತುಂಡು ಮಾಡಿದಾಗ ಪರಿಮಳವುಳ್ಳ ಹಾಲು ಸೋರುತ್ತದೆ. ಈ ಬಳ್ಳಿಯು ಆಶ್ರಯವಿಲ್ಲವಾದಗ ನೆಲದ ಮೇಲೆ ಹರಡಿರುತ್ತದೆ. ಬೇರುಗಳು ಭೂಮಿಯಲ್ಲಿ ಆಳವಾಗಿ ಇಳಿದಿರುತ್ತದೆ.

ಸೊಗದೆ ಬೇರಿನ ಸರಳ ಚಿಕಿತ್ಸೆಗಳು:
* ರಕ್ತ ಶುದ್ಧಿ ಕಜ್ಜಿ, ತುರಿ, ಇಸುಬು ಮತ್ತು ಎಲ್ಲಾ ಚರ್ಮ ವ್ಯಾಧಿಗಳು :
ಸೊಗದೆ ಬೇರು, ಶುದ್ಧಿ ಮಾಡಿದ ಹಿರೇಮದ್ದಿನ ಗಡ್ಡೆ, ಕೊತ್ತಂಬರಿ ಕಾಳು ಇವುಗಳನ್ನು 10-10 ಗ್ರಾಂ ಮಿಶ್ರಮಾಡಿ, ನಯವಾಗಿ ಚೂರ್ಣೆಸುವುದು. 10 ಗ್ರಾಂ ಚೂರ್ಣವನ್ನು ಎರಡು ಲೋಟ ನೀರಿಗೆ ಹಾಕಿ 1/2 ಲೋಟದಷ್ಟು ಕಷಾಯ ಮಾಡಿ,ನಯವಾಗಿ ಚೂರ್ಣಸುವುದು. 10ಗ್ರಾಂ ಚೂರ್ಣವನ್ನು ಎರಡು ಲೋಟ ನೀರಿಗೆ ಹಾಕಿ 1/2 ಲೋಟದಷು ಕಷಾಯ ಮಾಡಿ, ತಣ್ಣಗಾದ ಮೇಲೆ ಬಟ್ಟೆಯಲ್ಲಿ ಶೋಧಿಸುವುದು. ಈ ಶೋಧಿಸಿದ ಕಷಾಯಕ್ಕೆ ಕೆಂಪು ಕಲ್ಲು ಸಕ್ಕರೆ ಪುಡಿ ಮತ್ತು ಹಾಲು ಸೇರಿಸಿ ಕುಡಿಸುವುದು. ವೇಳೆಗೆ 1/4 ಟೀ ಚಮಚ ಪ್ರತಿನಿತ್ಯ ಎರಡು ವೇಳೆ. ಬೆಂಕಿಯಿಂದ ಸುಟ್ಟ ಗಾಯಗಳಿಗೆ ಚಕಿತ್ಸೆ ಪಡೆಯುವಾಗ ಈ ಕಷಾಯವು ಬಹಳ ಪರಿಣಾಮಕಾರಿ.

* ಕೇಶ ವೃದ್ಧಿ, ಕೂದಲು ಸೊಂಪಾಗಿ ಬೆಳೆಯಲು
ಸೊಗದ ಬೇರಿನ ತೊಗಟೆಯನ್ನು ನುಣ್ಣಗೆ ಚೂರ್ಣ ಮಾಡಿ, ಭರಣಿಯಲ್ಲಿ ಶೇಖರಿಸುವುದು. 5ಗ್ರಾಂ ಚೂರ್ಣವನ್ನು ಒಂದು ಬಟ್ಟಲು ನೀರಿನಲ್ಲಿ ಕದಡಿ, ಪ್ರತಿ ನಿತ್ಯ ಎರಡು ವೇಳೆಸೇವಿಸುವುದು.

* ಕಾಮಾಲೆ ರೋಗದಲ್ಲಿ:
50ಗ್ರಾಂ ಸೋಗದೆ ಬೇರು ಮತ್ತು 5ಗ್ರಾಂ ಕಾಳುಮೆಣಸಿನ ಪುಡಿ, ನಯವಾಗಿ ಕುಟ್ಟಿ ಚೂರ್ಣ ಮಾಡುವುದು. ದಿವಸಕ್ಕೆ ಒಂದೇ ವೇಳೆ ಬೆಳಗಿನ ಹೊತ್ತು ಮಾತ್ರ.

* ಹೊಸದಾಗಿ ಕಣ್ಣಿನಲ್ಲಿ ಬಂದಿರುವ ಹೂವು (ನೇತ್ರ ಪುಷ್ಪ)
ಸೊಗದೆಬೇರನ್ನು ನೀರಿನಲ್ಲಿ ತೇದು ಗಂಧವನ್ನು ಕಣ್ಣುಗಳಿಗೆ ಅಂಜನವಿಕ್ಕುವುದು. ಅಥವಾ ಸೊಗದೆ ಬೇರಿನ ಒಣಗಿದ ಎಲೆಗಳನ್ನು ಮಣ್ಣಿನ ಪಾತ್ರೆಯಲ್ಲಿ ಸುಟ್ಟು ಬೂದಿಯನ್ನು ಶೇಖರಿಸುವುದು. ಒಂದು ಚಿಟಿಕೆ ಬೂದಿಯನ್ನು ಜೇನುತುಪ್ಪದಲ್ಲಿ ಕಲೆಸಿ ಕಣ್ಣುಗಳಿಗೆ ಹಚ್ಚುವುದು. (ಅಥವಾ) ನಾಮದ ಬೇರನ್ನು ನೀರಿನಲ್ಲಿ ಅಥವಾ ಜೇನುತುಪ್ಪ ತೇದು ಕಣ್ಣುಗಳಿಗೆ ಹಚ್ಚುವುದು.

* ಮೂತ್ರದಲ್ಲಿ ಉರಿ ಮತ್ತು ನೋವು
ಸೊಗದ ಬೇರು 20ಗ್ರಾಂ, ಹಸಿಯ ಅಮೃತಬಳ್ಳಿ 10ಗ್ರಾಂ, ಹುರಿದ ಜೀರಿಗೆ ಎರಡೂವರೆ ಗ್ರಾಂ ಮಂಜಿಷ್ಟಯನ್ನು ಸೇರಿಸಿ, ಚೆನ್ನಾಗಿ ಕುಟ್ಟಿ ಎರಡು ಬಟ್ಟಲು ನೀರಿಗೆ ಹಾಕಿ ಕಷಾಯ ಮಾಡಿ ಹೊತ್ತಿಗೆ 1/4 ತೊಲ ಭಾಗ ಸೇವಿಸುವುದು.

* ಸೊಗದೆ ಬೇರಿನ ಟೀ, ಪಾನೀಯ
ರಕ್ತವಿಕಾರಗಳನ್ನು ಹೋಗಲಾಡಿಸಿ ಚರ್ಮವ್ಯಾಧಿಗಳನ್ನು ಗುಣಪಡಿಸುತ್ತದೆ. ಸೊಗದೆ ಬೇರಿನ ಚೂರ್ಣ ಒಂದು ಟೀ ಚಮಚ, ಸೌಂಪಿನ ಪುದಿ 1/2 ಟೀ ಚಮಚ ಮತ್ತು ದಾಲ್ಚಿನ್ನಿ ಪುಡಿ ಎರಡು ಚಿಟಿಕೆ ಎರಡು ಬಟ್ಟಲು ನೀರಿಗೆ ಹಾಕಿ ಕಷಾಯ ಮಾಡುವುದು. ಕಷಾಯವನ್ನ ಕಾಫಿ, ಟೀಯಂತೆ ಶೋಧಿನಿ, ಸಕ್ಕರೆ ಮತ್ತು ಹಾಲಿಗೆ ಸೇರಿಸಿ ಕುಡಿಯುವುದು. ಅತ್ಯಂತ ಸುವಾಸನೆವುಳ್ಳದ್ದು ಮತ್ತು ತ್ರಾಣನೀಡುವಂತಹ ಪಾನೀಯ, ಆರೋಗ್ಯವನ್ನು ಕಾಪಾಡುವುದು.

Comments are closed.