ಕರಾವಳಿ

ಪದವಿನಂಗಡಿ ಪರಿಸರದಲ್ಲಿ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಇಬ್ಬರ ಸೆರೆ : ನಗದು ವಶ

Pinterest LinkedIn Tumblr

ಮಂಗಳೂರು: ನಗರದ ಯೆಯ್ಯಾಡಿ ಸಮೀಪದ ಪದವಿನಂಗಡಿ ಪರಿಸರದಲ್ಲಿ ಅಕ್ರಮವಾಗಿ ಮಟ್ಕಾ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಮತ್ತು ಕಾವೂರು ಪೊಲೀಸರು ನಗದು ಸಹಿತಾ ಸುಮಾರು 32450 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಕಾವೂರು ಗ್ರಾಮದ ಮೈಂದ ಪೂಜಾರಿ (55) ಹಾಗೂ ಕುಳಾಯಿಯ ಸುಭಾಷ್ ನಗರ ನಿವಾಸಿ ಪ್ರಶಾಂತ(35)ಎಂದು ಗುರುತಿಸಲಾಗಿದೆ.

ಆರೋಪಿಗಳು ನಗರದ ಪದವಿನಂಗಡಿ ಪರಿಸರದ ಕೊರಗಜ್ಜ ಕಟ್ಟೆಯ ಯಶಸ್ವಿ ವೆಜ್ & ಫ್ರೂಟ್ ಎಂಬ ಅಂಗಡಿಯ ಬಳಿ ಅಕ್ರಮವಾಗಿ ಮಟ್ಕಾ ದಂಧೆ ನಡೆಸುತ್ತಿದ್ದ ಸಂದರ್ಭ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಆರೋಪಿಗಳ ವಶದಿಂದ ಮಟ್ಕಾ ಆಟಕ್ಕೆ ಬಳಸಿದ 17,450 ರೂ. ನಗದು, ಮಟ್ಕಾ ಸಂಖ್ಯೆಗಳನ್ನು ಬರೆದ ಚೀಟಿಗಳು ಹಾಗೂ ಮೊಬೈಲ್ ಫೋನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 32450 ರೂ. ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.