ಕರಾವಳಿ

ಕಾಪುವಿನಲ್ಲಿ ರೋಡ್ ರೋಮಿಯೋಗೆ ಚಪ್ಪಲಿಯೇಟಿನ ಜೊತೆ ಗೂಸಾ ಕೊಟ್ಟಳು ಯುವತಿ!

Pinterest LinkedIn Tumblr

ಉಡುಪಿ: ನಿರಂತರವಾಗಿ ಚುಡಾಯಿಸುತ್ತಿದ್ದ ಯುವಕನಿಗೆ ನೊಂದ ಯುವತಿಯೇ ಗೂಸಾ ನೀಡಿದ ಘಟನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ. ರೋಡ್ ರೋಮಿಯೋ ಯುವಕನಿಗೆ ಯುವತಿ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸುಲೇಮಾನ್ ಎಂಬ ಯುವಕ ಚುಡಾಯಿಸಿದ್ದು,ಆತ ಸ್ಥಳೀಯ ಯುವತಿಗೆ ಕೆಲವಾರು ದಿನಗಳಿಂದಲೂ ಚುಡಾಯಿಸುತ್ತಿದ್ದ ಎನ್ನಲಾಗಿದೆ. ಈತನ ಹಿಂಸೆಯಿಂದ ನೊಂದಿದ್ದ ಯುವತಿ ಆತನಿಗೆ ಚಪ್ಪಲಿ ಏಟು ನೀಡಿದ್ದಾಳೆ. ಯುವಕನನ್ನು ರಸ್ತೆಯಲ್ಲಿಯೇ ಕೆಳಗೆ ಕೆಡವಿ ಕಾಲಿನಿಂದ ಒದ್ದಿದ್ದಾಳೆ. ಬಳಿಕ ಕಾಲಿದ್ದ ಚಪ್ಪಲಿ (ಶೂ) ತೆಗೆದು ಹಿಗ್ಗಮುಗ್ಗಾ ಥಳಿಸಿದ್ದಾಳೆ. ಇದೆಲ್ಲವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗುತ್ತಿದೆ.

ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದಿದ್ದು, ಮಾಹಿತಿ ಪಡೆದು ವಿಚಾರಣೆ ನಡೆಸಿದ್ದಾರೆ.

Comments are closed.