ಕರಾವಳಿ

ಜೆಡಿಎಸ್ ನಿಯೋಗದಿಂದ ಕಿಡಿಗೇಡಿಗಳು ನಾಶಗೊಳಿಸಿದ ಪಾವೂರು ಸೇತುವೆ ಪರಿಶೀಲನೆ

Pinterest LinkedIn Tumblr

ಉಳ್ಳಾಲ .ಫೆಬ್ರವರಿ.05:ಪಾವೂರು ಗ್ರಾಮದ ನದಿ ನಡುವಿನಲ್ಲಿರುವ ಉಳಿಯ ದ್ವೀಪದಿಂದ ಹೊರ ಜಗತ್ತಿಗೆ ಸಂಪರ್ಕ ಕಲ್ಪಿಸಲು ಸ್ಥಳೀಯ ಜನರೇ ಸುಮಾರ 18 ಲಕ್ಷ ವೆಚ್ಚ ಮಾಡಿ, ಕಬ್ಬಿಣದ ಪೈಪ್ ಮತ್ತು ಮರದ ಹಲಗೆಯಿಂದ ರಚಿಸಿದ ಸೇತುವೆಯನ್ನು ಕೆಲವು ದಷ್ಕರ್ಮಿಗಳು ನಾಶಗೊಳಿಸಿದ ಪ್ರದೇಶಕ್ಕೆ ಜಾತ್ಯಾತೀತ ಜನತಾದಳ ದ ಮಂಗಳೊರು ಕ್ಷೇತ್ರ ಸಮಿತಿಯ ನಿಯೋಗ ಬೇಟಿ ನೀಡಿ ಪರಿಶೀಲಿಸಿತು.

ಸ್ಥಳೀಯರ ಈ ರಚನಾತ್ಮಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನಿಯೋಗ ಸೇತುವೆಗೆ ಹಾನಿಗೊಳಿಸಿದ ದುಷ್ಕೃತ್ಯವನ್ನು ಖಂಡಿಸಿತು.

ಸೇತವೆಗೆ ಹಾನಿಮಾಡಿದ ದುಷ್ಕರ್ಮಿಗಳನ್ನ ಪತ್ತೆಹಚ್ಚಿ ಶಿಕ್ಷಿಸಬೇಕು.ಈ ಪ್ರದೇಶದ ಮತ್ತುಜನರ ಸುರಕ್ಷೆತೆಗಾಗಿ ತಡೆಗೋಡೆಗಳನ್ನು ರಚಿಸಬೇಕು. ಪ್ರವಾಸೋಧ್ಯಮ ಧೃಷ್ಟಿಯಿಂದ ಈ ಪ್ರದೇಶವನ್ನು ಅಭಿವೃಧ್ಧಿಗೊಳಿಸಬೇಕೆಂಬ ಸರಕಾರವನ್ನು ಒತ್ತಾಯಿಸುವ ಭರವಸೆಯನ್ನು ನೀಡಿತು.

ನಿಯೋಗದಲ್ಲಿ ರಾಜ್ಯ ಜನತಾದಳ ನಾಯಕರುಗಳಾದ ಹಾಜಿ ಅಬೂಬಕ್ಕರ್ ನಾಟೆಕಲ್.ನಝೀರ್ ಉಳ್ಳಾಲ್.ಕ್ಷೇತ್ರ ಕಾರ್ಯದರ್ಶಿ, ಮಾಜಿ ಕೌನ್ಸಿಲರ್ ಯು.ಯಚ್.ಫಾರೂಕ್.,ಜಿಲ್ಲಾ ಉಪಾಧ್ಯಕ್ಷ,ಪಂಚಾತ್ ಸದಸ್ಯ ಸಾಲಿಹ್ ಹರೇಕಳ,ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಮಾಜಿ ಕೌನ್ಸಿಲರ್ ಅಲ್ಪೃಡ್.ಡಿ.ಸೋಜ,ಪಾವೂರು ಪಂಚಾಯತ್ ಮಾಜಿ ಉಪಾಧ್ಯ ಕ್ಷ ವಲೇರಿಯನ್.ಡಿ.ಸೋಜ,ಬಾಲಕೃಷ್ಣ ನಿಯೋಗದಲ್ಲಿ ಇದ್ದರು.

ಸ್ಥಳೀಯ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಗಿಲ್ಬರ್ಟ್.ಡಿ.ಸೋಜ, ಬೆನ್ನ.ಡಿ.ಸೋಜ, ಡೇನಿಯಲ್.ಡಿ.ಸೋಜ, ಸಂತೋಷ. ಡಿ.ಸೋಜ, ಹಿಲೆರಿ .ಡಿ.ಸೋಜ ಉಪಸ್ಥಿತರಿದ್ದು ನಿಯೋಗಕ್ಕೆ ಮಾಹಿತಿ ನೀಡಿದರು.

Comments are closed.