ಕರಾವಳಿ

ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಹಾಗೂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಮಂಗಳೂರಿಗೆ..

Pinterest LinkedIn Tumblr

ಮಂಗಳೂರು ಜನವರಿ 31 : ಲೋಕಾಯುಕ್ತರಾದ ಪಿ. ವಿಶ್ವನಾಥ್ ಶೆಟ್ಟಿ ಹಾಗೂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಬಾಯಿ ಇವರು ಫೆಬ್ರವರಿ 1 , ಫೆಬ್ರವರಿ 2, ಫೆಬ್ರವರಿ 3ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲ್ಲಿರುವರು.

ಲೋಕಾಯುಕ್ತ ಪಿ. ವಿಶ್ವನಾಥ್ ಶೆಟ್ಟಿ ಅವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ: 

ಲೋಕಾಯುಕ್ತರಾದ ಪಿ. ವಿಶ್ವನಾಥ್ ಶೆಟ್ಟಿ ಅವರು ಫೆಬ್ರವರಿ 2 ರಂದು ಸಂಜೆ 5.30 ಗಂಟೆಗೆ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ ಸಂಜೆ 6 ಗಂಟೆಗೆ ಮಂಗಳೂರು ಸಕ್ರ್ಯೂಟ್ ಹೌಸ್‍ಗೆ ತೆರಳುವರು. 7.30 ಗಂಟೆಗೆ ಜ್ಞಾನರತ್ನ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ನಿಡ್ಡೋಡಿಯಲ್ಲಿ ಗ್ರಾಮೋತ್ಸವ-10 ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ 9 ಗಂಟೆಗೆ ಜ್ಞಾನರತ್ನ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ನಿಡ್ಡೋಡಿಯಿಂದ ಮಂಗಳೂರು ಸಕ್ರ್ಯೂಟ್ ಹೌಸ್‍ಗೆ ಆಗಮಿಸಿ ವಾಸ್ತವ್ಯ.

ಫೆಬ್ರವರಿ 3 ರಂದು ಪೂರ್ವಾಹ್ನ 7.10 ಗಂಟೆಗೆ ಸಕ್ರ್ಯೂಟ್ ಹೌಸ್‍ನಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ತೆರಳಿ 8.40 ಗಂಟೆಗೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಪ್ರವಾಸ :

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಬಾಯಿ ಇವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಇಂತಿವೆ. ಫೆಬ್ರವರಿ 1 ರಂದು ಪೂರ್ವಾಹ್ನ 8.25 ಗಂಟೆಗೆ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ ವಾಸ್ತವ್ಯ. ಫೆಬ್ರವರಿ 2 ರಂದು ಪೂರ್ವಾಹ್ನ 9 ಗಂಟೆಗೆ ನೀರುಮಾರ್ಗ ಕರಾವಳಿ ಕಾಲೇಜಿನ ಮಹಿಳಾ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ. ಪೂರ್ವಾಹ್ನ 10.30 ಗಂಟೆಗೆ ಮಂಗಳೂರಿನಿಂದ ಕಾಸರಗೋಡಿಗೆ ತೆರಳಲಿದ್ದಾರೆ. ಸಂಜೆ 5.30 ಗಂಟೆಗೆ ಮಂಗಳೂರಿಗೆ ಆಗಮಿಸಿ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಮಾಲೋಚನೆ ನಡೆಸಿ ಮಂಗಳೂರಿನಲ್ಲಿ ವಾಸ್ತವ್ಯ.

ಫೆಬ್ರವರಿ 3 ರಂದು ಮಂಗಳೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.

 

Comments are closed.