ಕರಾವಳಿ

ಫೆಬ್ರವರಿ. 01: ಬಹುನಿರೀಕ್ಷಿತ “ಪುಂಡಿಪಣವು: ತುಳು ಚಲನ ಚಿತ್ರ ಜಿಲ್ಲೆಯಾದ್ಯಂತ ಬಿಡುಗಡೆ

Pinterest LinkedIn Tumblr

ಮಂಗಳೂರು : ತವಿಷ್ ಎಂಟರ್ ಪ್ರೈಸಸ್ ಲಾಂಚಾನದಲ್ಲಿ ರಾಮಕೃಷ್ಣ ಶೆಟ್ಟಿ ನಿರ್ಮಿಸಿದ ಗಂಗಾಧರ್ ಕಿರೋಡಿಯನ್ ನಿರ್ದೇಶನದ ಬಹುನಿರೀಕ್ಷಿತ “ಪುಂಡಿಪಣವು: ತುಳು ಚಲನ ಚಿತ್ರ ಫೆಬ್ರವರಿ 1ರಿಂದ ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ಗಂಗಾಧರ್ ಕಿರೋಡಿಯನ್ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ಅವರು, ಮಂಗಳೂರಿನಲ್ಲಿ ಜ್ಯೋತಿ, ಪಿವಿಆರ್, ಬಿಗ್ ಸಿನಿಮಾಸ್, ಸಿನಿಪೊಲಿಸ್, ಉಡುಪಿಯಲ್ಲಿ ಅಲಂಕಾರ್, ಮಣಿಪಾಲದಲ್ಲಿ ಐನಾಕ್ಸ್, ಬಿಗ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಮೂಡಬಿದ್ರೆಯಲ್ಲಿ ಅಮರಶ್ರೀ, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್, ಸುರತ್ಕಲ್ ನಲ್ಲಿ ನಟರಾಜ್ ಮುಂತಾದ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ ಎಂದು ಹೇಳಿದರು.

ಸಿನಿಮಾದಲ್ಲಿ ತುಳುನಾಡಿನ ಶ್ರೀಮಂತ ಸಂಸ್ಕೃತಿಯ ಸೊಬಗು ಇದೆ. ಗುತ್ತಿನ ಮನೆ ಸಹಿತಾ ಹಲವು ಜನಪದೀಯ ವಿಷಯಗಳನ್ನು ಹೊಂದಿರುವ ಈ ಚಿತ್ರದಲ್ಲಿ ತುಳುನಾಡಿನ ಮಣ್ಣಿನ ಪರಿಮಳ ಇದೆ. ಮರೆಯಾಗುತ್ತಿರುವ ಕೆಲವೊಂದು ವಿಚಾರಗಳನ್ನು ಪುಂಡಿಪಣವು ಸಿನಿಮಾ ಹೊಸ ತಲೆ ಮಾರಿನ ಯುವ ಜನತೆಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ ಎಂದು ಕಿರೋಡಿಯನ್ ಹೇಳಿದರು.

ನಿರ್ಮಾಪಕ ರಾಮಕೃಷ್ಣ ಶೆಟ್ಟಿ ಮಾತನಾಡಿ, ಪುಂಡಿಪಣವು ಸಿನಿಮಾಕ್ಕೆ ಕಾರ್ಕಳ, ಹಿರಿಯಡ್ಕದ ಶಿರೂರು ಮಠ ಮೊದಲಾದ ಕಡೆಗಳಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗಿದೆ. ತಾರಾಗಣದಲ್ಲಿ ಗೋಪಿನಾಥ್ ಭಟ್, ರಘುರಾಮ್ ಶೆಟ್ಟಿ, ಸತೀಶ್ ಶೆಟ್ಟಿ, ಸುಂದರ್ ಶೆಟ್ಟಿ, ಸೂರಜ್ ಸನಿಲ್, ಪ್ರೀತಂ ಶೆಟ್ಟಿ, ಸುವರ್ಣ ಶೆಟ್ಟಿ, ರಾಘವೇಂದ್ರ ರಾವ್, ಎಸ್.ವಿ. ಆಚಾರ್, ಆರ್.ಎನ್.ಶೆಟ್ಟಿ, ಮೋಹನ್ ಬೋಳಾರ್, ಹರೀಶ್ ಪಂಚಮಿ ಶಶಿ ಶಿರ್ಲಾಲ್, ಸೌರಭ್ ಹೆಗ್ಡೆ, ಮಾ. ಅರ್ಥ್ ಶೆಟ್ಟಿ, ಹರಿಣಿ, ಪವಿತ್ರ ಶೆಟ್ಟಿ, ಪ್ರತಿಮಾ ನಾಯ್ಕ್, ಅಕ್ಷತಾ, ರಕ್ಷಿತಾ, ಮಮತಾ ಶೆಟ್ಟಿ, ಶೋಭಾ ಶೇಖರ್ ಶೆಟ್ಟಿ ಮುಂತಾದವರು ಇದ್ದಾರೆ ಎಂದು ಹೇಳಿದರು.

ಕಥೆ-ಚಿತ್ರಕಥೆ-ಸಂಭಷಣೆ- ಕಲೆ ವಸ್ತ್ರ ವಿನ್ಯಾಸ ಮತ್ತು ನಿರ್ದೇಶನ ಗಂಗಾಧರ್ ಕಿರೋಡಿಯನ್, ನಿರ್ಮಾಣ – ತವಿಷ್ ಎಂಟರ್ ಪ್ರೈಸಸ್, ಕೆಮರಾ ಉಮಾಪತಿ, ಸಂಗೀತ ಭಾಸ್ಕರ್ ರಾವ್ ಬಿ.ಸಿ ರೋಡ್, ಹಿನ್ನೆಲೆ ಸಂಗೀತಾ ಎಸ್ಪಿ ಚಂದ್ರಕಾಂತ್, ಸಹನಿರ್ದೇಶನ ಪ್ರತಾಪ್ ಸಾಲಿಯಾನ್ ಕದ್ರಿ.

ಚಿತ್ರದ ಕಥಾ ಸಾರಂಶ:

ಮಾಲಾಡಿ, ಪೇಜಾವರ, ಬಂಗಾಡಿ, ಮುಗೇರ್ ಪಾಲೆಮಾರ್ ಈ ಐದು ಮಾಗಣೆಗಳಿಗೆ ನಾಗಲಾಡಿಯ ನಾಗದೇವರು, ದೈವ ಪಂಜುರ್ಲಿ ಮೂಲ ಶಕ್ತಿಗಳು. ಇದಕ್ಕೆ ಸಂಬಂಧ ಪಟ್ಟ ಜಾಗದಲ್ಲಿ ಯಾರೇ ವಾಸವಾಗಿದ್ದರೂ, ಅವರು ಬಾಡಿಗೆ ರೂಪದಲ್ಲಿ ಪ್ರತೀವರ್ಷ ಸೋಣ ಸಂಕ್ರಾಮಣದಂದು ಪುಂಡಿಪಣವು ದೈವದೇವರಿಗೆ ಸಲ್ಲಿಸಬೇಕು. ಒಂದು ವೇಳೆ ಏನಾದರೂ ತೊಂದರೆಗಳಿಂದ ಪುಂಡಿಪಣವು ಸಲ್ಲಿಸಲು ಅಸಾಧ್ಯವಾದಗ ದೈವದೇವರ ಕ್ಷಮೆ ಇದೆ. ಅನ್ಯಾಯ ಅಹಂಕಾರದಿಂದ ಸಲ್ಲಿಸದೇ ಹೋದಾಗ ಅವರಿಗೆ ಮಹಾಶಕ್ತಿಗಳಿಂದ ಸಿಗುವ ಶಿಕ್ಷೆಯಿಂದ ಬುದ್ಧಿ ಕಲಿತು ದೈವ ದೇವರಿಗೆ ಶರಣಾಗುವ ಕಥೆಯೇ ಪುಂಡಿಪಣವು.

ಪತ್ರಿಕಾಗೋಷ್ಟಿಯಲ್ಲಿ ಸಂಗೀತ ನಿರ್ದೇಶಕ ಭಾಸ್ಕರ್ ರಾವ್ ಬಿ.ಸಿ ರೋಡ್, ಹಿನ್ನೆಲೆ ಸಂಗೀತಾ ನೀಡಿರುವ ಎಸ್ಪಿ ಚಂದ್ರಕಾಂತ್, ನಾಯಕ ನಟ ಸೂರಜ್ ಸನಿಲ್, ನಾಯಕಿ ನಟ ಸುವರ್ಣ ಶೆಟ್ಟಿ, ಪ್ರಮುಖ ಕಲಾವಿದರಾದ ಸುಂದರ್ ಶೆಟ್ಟಿ, ರಘುನಾಥ್ ಶೆಟ್ಟಿ, ಹರಿಣಿ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

__ ಸತೀಶ್ ಕಾಪಿಕಾಡ್.

Comments are closed.