ಕರಾವಳಿ

ಮಣಿಪಾಲದ ಮನೆಯೊಂದರಲ್ಲಿ ನಡೆಯುತ್ತಿದ್ದ ಮಾಂಸದಂಧೆ: 10 ಮಂದಿ ಅರೆಸ್ಟ್

Pinterest LinkedIn Tumblr

ಉಡುಪಿ: ಮಣಿಪಾಲ ಸಮೀಪದ ರಾಜೀವ ನಗರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಪ್ರಕರರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಕಳದ ಉಪ ವಿಭಾಗದ ಸಹಾಯಕ ಪೊಲೀಸ್‌ ಅಧೀಕ್ಷಕ ಕೃಷ್ಣಕಾಂತ ನೇತೃತ್ವದಲ್ಲಿ ಮನೆಗೆ ದಾಳಿ ನಡೆಸಲಾಗಿದೆ.

ಈ ವೇಳೆ ವೇಶ್ಯಾವಾಟಿಕೆ ನಡೆಸುತ್ತಿದ್ದ ರಾಜೀವ ನಗರ ನಿವಾಸಿ ಆಶಾ(35), ಆರೂರು ಮಹೇಶ್‌ ಭಟ್‌ (24), ಕುಂದಾಪುರದ ಅಲ್ಬಾಡಿಯ ದೀಪಕ್‌ (30), ಬ್ರಹ್ಮಾವರ ಐರೋಡಿ ವಿನಯ (28), ಚಿಕ್ಕಮಗಳೂರು ಮೂಲದ ಸತೀಶ್‌ (30), ಹೆರ್ಗ ನಿವಾಸಿ ಪುನೀತ್‌ (29), ಉಡುಪಿ ಚಿಟ್ಪಾಡಿಯ ಸಚಿನ್‌ (32), ಕುಂದಾಪುರ ಅಲ್ಬಾಡಿಯ ದಿನೇಶ್‌ (30), ತಮಿಳುನಡು ಮೂಲದ ಪ್ರಸ್ತುತ ಇಂದ್ರಾಳಿ ವಾಸಿಗಳಾದ ಕಾರ್ತಿಕ್‌ (37) ಅರುಣ್‌ (25) ಅವರನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿದ ಪೊಲೀಸರು ಅವರಿಂದ 65,250 ರೂ. ನಗದು, 22 ಕಾಂಡೋಮ್ ಪ್ಯಾಕೇಟ್, ಉಪಯೋಗಿಸಿದ ಕಾಂಡೋಮ್‌-3, ಕೆಲ ಮಾತ್ರೆಗಳು, ಕಪ್ಪು ಬಣ್ಣದ ಪ್ಲಾಸ್ಟಿಕ್‌ ತೊಟ್ಟೆ, ಕಾಫಿ ಬಣ್ಣದ ಬ್ಯಾಗ್‌‌, ಹಸಿರು ಮತ್ತು ಬಿಳಿ ಬಣ್ಣದ Hari Om ಎಂದು ಬರೆದಿರುವ ಸಣ್ಣ ಪರ್ಸ್‌, ಗುಲಾಬಿ ಬಣ್ಣದ ವ್ಯಾನಿಟಿ ಬ್ಯಾಗ್‌‌, ಮೊಬೈಲ್‌ ಪೋನ್‌ಗಳು-11, ಬೆಡ್‌ ಶೀಟ್‌‌-6, ಐದು ವಾಹನಗಳು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.