ಕರಾವಳಿ

ಹೆಚ್ಚು ಬಾರಿ ಮೂತ್ರ ವಿಸರ್ಜನೆ ಸಮಸ್ಯೆಗೆ ಸರಳ ಪರಿಹಾರೋಪಾಯಗಳು

Pinterest LinkedIn Tumblr

ಋತುವಿಗೆ ಅನುಸಾರವಾಗಿ ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆಯಾಗುವುದಕ್ಕೆ ಬಹುಮೂತ್ರ ಖಾಯಿಲೆ ಅನ್ನುತ್ತಾರೆ. ಮಧುಮೇಹ, ಅತಿಯಾದ ಸಿಹಿ ಪದಾರ್ಥ ಸೇವನೆ, ಮೂತ್ರಕೋಶದ ಮಾಂಸಖಂಡಗಳ ದುರ್ಬಲತೆ, ಅಧಿಕ ದ್ರವಾಹಾರ ಸೇವನೆ, ಆತಂಕ, ಕಳವಳ, ಮಾನಸಿಕ ಮತ್ತು ದೈಹಿಕ ಒತ್ತಡಗಳೇ ಬಹುಮೂತ್ರ ಉಂಟಾಗಲು ಕಾರಣವಾಗಿವೆ.

ಮೂತ್ರಕ್ಕೆ ಸರಳ ಪರಿಹಾರೋಪಾಯಗಳು:
ಅರ್ಧ ಲೋಟ ನುಗ್ಗೆ ಸೊಪ್ಪಿನ ರಸಕ್ಕೆ 5ಗ್ರಾಂ ಸೈನ್ಧವ ಲವಣ ಸೇರಿಸಿ 1 ಚಮಚ ಮಿಶ್ರಣವನ್ನು ದಿನಕ್ಕೆ ಎರಡು ಹೊತ್ತು ಸೇವಿಸಬೇಕು.
ಬೇವಿನ ಚಕ್ಕೆಯನ್ನು ಹಾಲಿನಲ್ಲಿ ಕುಡಿಸಿ ಕಷಾಯ ಮಾಡಿ 1 ವಾರ ಸೇವಿಸಬೇಕು.

ಕರಿ ಎಳ್ಳನ್ನು ಹುರಿದು ಬೆಲ್ಲದ ಪಾಕದಲ್ಲಿ ಹಾಕಿ ಉಂಡೆಯನ್ನು ಮಾಡಿ ದಿನಕ್ಕೆರಡು ಉಂಡೆಯಂತೆ 12 ದಿನ ತಿನ್ನಬೇಕು.
ಹಸಿ ಶುಂಠಿಯ 2 ಚಮಚ ರಸಕ್ಕೆ ಅಷ್ಟೇ ಕಲ್ಲು ಸಕ್ಕರೆ ಸೇರಿಸಿ ದಿನಕ್ಕೆರಡು ಬಾರಿಯಂತೆ ಒಂದು ವಾರ ಸೇವಿಸಬೇಕು.

ಹುಣಸೆ ಸೊಪ್ಪಿನ ಎರಡು ಚಮಚ ರಸಕ್ಕೆ ಅರ್ಧ ಲೋಟ ಮಜ್ಜಿಗೆ ಸೇರಿಸಿ ಸೇವಿಸಬೇಕು.
ಬಿಳಿ ದಾಸವಾಳದ ಐದು ಮೊಗ್ಗನ್ನು ಕಲ್ಲು ಸಕ್ಕರೆಯೊಂದಿಗೆ ಸೇರಿಸಿ 1 ವಾರ ಮುಂಜಾನೆ ಅಗೆದು ತಿನ್ನಬೇಕು.

ಒಣಗಿಸಿದ ಅತ್ತಿಕಾಯಿ ಚೂರ್ಣ 6 ರಿಂದ 12 ಗ್ರಾಂ ಅನ್ನು 15 ಮಿಲಿ ಲೀಟರ್ ಜೇನುತುಪ್ಪದಲ್ಲಿ ಕಲಸಿ ದಿನಕ್ಕೆರಡು ಬಾರಿಯಂತೆ ಒಂದು ವಾರ ಸೇವಿಸಬೇಕು.

ಅರಿಶಿನವನ್ನು ನೀರಿನಲ್ಲಿ ಅರೆದು 1 ಲೋಟ ನೀರಿನಲ್ಲಿ ಕದಡಿ ನಿತ್ಯ ಬೆಳಿಗ್ಗೆ ಒಂದರಿಂದ ಎರಡು ವಾರ ಸೇವಿಸಬೇಕು.

Comments are closed.