ಕರಾವಳಿ

ಎಣ್ಣೆಯಲ್ಲಿ ಈ ಎಲೆಯನ್ನು ಅರೆದು ಮೈಯಿಗೆ ಹಚ್ಚಿ ಸ್ನಾನ ಮಾಡಿದರೆ ಅಗುವ ಪ್ರಯೋಜನ ಬಲ್ಲಿರಾ..

Pinterest LinkedIn Tumblr

ನಮಗೆ ತಿಳಿದಿರುವ ಹಾಗೆ ತುರಿಕೆಯು ಎಲ್ಲರಲ್ಲೂ ಸಾಮಾನ್ಯವಾದ ಕಾಯಿಲೆಯಾಗಿದೆ. ಮತ್ತು ನಿಸ್ಸಂದೇಹವಾಗಿ ಹೇಳಬಹುದು ಇದು ನಮಗೆ ಆಗಾಗ ಹೆಚ್ಚು ಕಿರಿಕಿರಿ ಮಾಡುವ ಗೆಳೆಯನ ಹಾಗೆ. ಕಲುಷಿತ ನೀರಿನ ಬಳಕೆ,ಕೀಟ ಕಡಿತ, ರಾಸಯನಿಕ ಸುಗಂಧ ದ್ರವ್ಯಗಳ ಬಳಕೆ, ಅಲರ್ಜಿ, ಹುರಿದ-ಕರಿದ ತಿಂಡಿ ತಿನುಸುಗಳ ಸೇವನೆ,ಕಂಬಳಿ ಹುಳುವಿನ ಕೂದಲು ತಾಕುವುದು, ಶುಚಿಯಾಗಿಲ್ಲದಿರುವುದು ಮುಂತಾದ ಕಾರಣಗಳಿಂದ ತುರಿಕೆಯು ಉಂಟಾಗುವುದು. ಕೆಲವೊಮ್ಮೆ ಹೆಚ್ಚಿನ ತುರಿಕೆಯು ನಮ್ಮ ದೇಹದಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ವೈದ್ಯಕೀಯ ಸ್ಥಿತಿಯ ಸೂಚಕಗಳಾಗಿವೆ, ಇದಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಗಂಭೀರವಾದ ರೋಗಗಳೂ ಬರಬಹುದು.

ತುರಿಕೆಯ ಭಾಗವನ್ನು ಕೆರೆದಲ್ಲಿ ಸಮಸ್ಯೆ ಅಧಿಕವಾಗುವುದು. ಆದ್ದರಿಂದ ತುರಿಕೆಯನ್ನು ಕೆರೆಯದ್ದೇ ಆದಷ್ಟು ಹತ್ತಿ ಬಟ್ಟೆಯನ್ನು ಧರಿಸಿದ್ದಲ್ಲಿ ತುರಿಕೆ ನಿಯಂತ್ರಣಕ್ಕೆ ಬರುವುದು.ಆ ಸಂದರ್ಭದಲ್ಲಿ ವೈದ್ಯಕೀಯ ನೆರವು ಕಡ್ಡಾಯವಾಗುತ್ತದೆ. ಆದರೆ ಸಾಮಾನ್ಯವಾಗಿ, ಕಜ್ಜಿ ಸಮಸ್ಯೆಯಾಗಿದ್ದು ಅದನ್ನು ಮನೆಯಲ್ಲಿಯೇ ಸುಲಭವಾಗಿ ಪರಿಹರಿಸಬಹುದು. ಹಾಗಾದರೆ ಈ ತೊಂದರೆಗೆ ಇಲ್ಲಿದೆ ಮನೆಮದ್ದು.

ಬೇವಿನ ಎಲೆಯನ್ನು ಎಣ್ಣೆಯಲ್ಲಿ ಅರೆದು ಹಚ್ಚಿ ಸ್ನಾನ ಮಾಡಿದ್ದಲ್ಲಿ ತುರಿಕೆ ಕಡಿಮೆಯಾಗುತ್ತದೆ.
ಅರಿಶಿನದ ಬೇರನ್ನು ನಿಂಬೆರಸದಲ್ಲಿ ತೇದು ಲೇಪಿಸಿ 3-4  ಗಂಟೆಗಳು ಬಿಟ್ಟು ಸ್ನಾನ ಮಾಡಿದ್ದಲ್ಲಿ ತುರಿಕೆ ಗುಣವಾಗುತ್ತದೆ.
ಒಂದು ಹಿಡಿ ಗರಿಕೆ, ಎರಡು ಚಮಚ ಜೀರಿಗೆ ಮತ್ತು ಒಂದು ಚಮಚ ಕಾಲು ಮೆಣಸಿನ ಪುಡಿಯನ್ನು ಎರಡು ಲೋಟ ನೀರಿಗೆ ಹಾಕಿ ಕುದಿಸಿ ನೀರನ್ನು ಒಂದು ಲೋಟಕ್ಕೆ ಇಳಿಸಿ ದಿನಕ್ಕೆರಡು ಬಾರಿ ಕುಡಿದ್ದಲ್ಲಿ ಶಮನವಾಗುತ್ತದೆ.
ಆಡುಸೋಗೆ ಚಿಗುರೆಲೆಗೆ ಸ್ವಲ್ಪ ಅರಿಶಿನ, ಗೋಮೂತ್ರ ಸೇರಿಸಿ ನಯವಾಗಿ ಅರೆದು ಲೇಪಿಸಬೇಕು.
ಸೌತೆಕಾಯಿ ರಸವನ್ನು ತೆಗೆದು ಅದನ್ನು ಮೈಗೆ ಹಚ್ಚಿ ಸ್ನಾನ ಮಾಡಿದ್ದಲ್ಲಿ ತುರಿಕೆ ಗಣನೀಯವಾಗಿ ಇಳಿಯುತ್ತದೆ. ಅದರ ರಸವನ್ನು 3-4 ದಿನದ ವರೆಗೂ ಕುಡಿಯಬೇಕು.
ಅರಿಶಿನದ ಕೊಂಬನ್ನು ತೆಂಗಿನ ಎಣ್ಣೆಯಲ್ಲಿ ತೇದು ಹಚ್ಚಬೇಕು.
ನಾಲ್ಕು ಭಾಗ ಚಿತ್ರಮೂಲದ ಬೇರಿನ ತೊಗಟೆ ಹಾಗು ಒಂದು ಭಾಗ ಕಾಮಕಸ್ತೂರಿ ಬೇರಿನ ತೊಗಟೆಯನ್ನು ಒಣಗಿಸಿ ಪುಡಿ ಮಾಡಿದ 5 ಗ್ರಾಂ ಚೂರ್ಣವನ್ನು 100 ಗ್ರಾಂ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ತುರಿಕೆಯ ಭಾಗಕ್ಕೆ ಹಚ್ಚಬೇಕು.
ದೊಡ್ಡಪತ್ರೆ ಎಳೆಯ ರಸವನ್ನು ಹಚ್ಚಿದ್ದಲ್ಲಿ ಸಹ ತುರಿಕೆ ಕಡಿಮೆಯಾಗುತ್ತದೆ.

Comments are closed.