ರಾಷ್ಟ್ರೀಯ

ಸಮುದ್ರ ಸೇರುತ್ತಿರುವ ಪ್ಲಾಸ್ಟಿಕ್​ ತ್ಯಾಜ್ಯವನ್ನು ತೆಗೆಯಲು ಹಡಗು ಕಂಡುಹಿಡಿದ 12 ರ ಪೋರ ಹಾಜಿಕ್ !

Pinterest LinkedIn Tumblr

ಪುಣೆ: ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿರುವ ಮಾನವ ಇಂದು ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ನದಿಗಳಿಗೆ ಕೈಗಾರಿಕೆ ತ್ಯಾಜ್ಯಗಳನ್ನು ಬಿಟ್ಟು, ಅವು ಸಮುದ್ರ ಸೇರುವುದರಿಂದ ನದಿಗಳ ಜೊತೆಗೆ ಸಮುದ್ರಗಳು ಸಹ ಕಲುಷಿತಗೊಳ್ಳುತ್ತಿವೆ. ಪ್ಲಾಸ್ಟಿಕ್​ ತ್ಯಾಜ್ಯ ಜೀವಿಗಳಿಗೆ ವಿಷವಾಗಿ ಪರಿಣಮಿಸುತ್ತಿದೆ. ಪರಿಸರ ಉಳಿಸುವ ಸಲುವಾಗಿ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಆದರೆ ದಿನೇ ದಿನೇ ಪರಿಸರ ಕಲುಷಿತಗೊಳಿಸುವ ಕೃತ್ಯಗಳು ನಡೆಯುತ್ತಲೇ ಇವೆ.

ಇದಕ್ಕೆ ಪರಿಹಾರ ಕಂಡು ಹಿಡಿಯಲು ಹೊರಟ ಪುಣೆಯ 12 ವರ್ಷದ ಬಾಲಕ ಒಂದು ಹಡಗನ್ನೇ ಆವಿಷ್ಕಾರ ಮಾಡಿದ್ಧಾನೆ. ಹಡಗಿನಿಂದ ಹೇಗೆ ಪರಿಸರ ಉಳಿಸಬಹುದು ಅಂತೀರಾ.? ಸಮುದ್ರ ಸೇರುತ್ತಿರುವ ಕಲುಷಿತ ತ್ಯಾಜ್ಯವನ್ನು ಈ ಹಡಗು ಹೊರತೆಗೆಯುತ್ತದೆ. ಹಾಜಿಕ್​ ಕಾಜಿ ಎಂಬ ಬಾಲಕ ಹೊಸ ಸಂಶೋಧನೆ ಮಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ.

‘ಕಲುಷಿತ ತ್ಯಾಜ್ಯ ಸಮುದ್ರಕ್ಕೆ ಸೇರಿ ಕುಲುಷಿತಗೊಳ್ಳುತ್ತಿದ್ದ ಕೆಲವಾರು ಡಾಕ್ಯುಮೆಂಟ್ರಿಗಳನ್ನು ನೋಡಿದ ನಾನು, ಇದಕ್ಕೆ ಏನಾದರೂ ಪರಿಹಾರ ಹುಡುಕಬೇಕೆಂದು ಬಯಸಿದೆ. ನಾವು ತಿನ್ನುವ ಮೀನುಗಳು ಸಮುದ್ರದಲ್ಲಿ ಪ್ಲಾಸ್ಟಿಕ್​ ತ್ಯಾಜ್ಯ ತಿಂದಿರುತ್ತವೆ. ಅದಕ್ಕಾಗಿಯೇ ನಾನು ‘ಎರ್ವಿಸ್​’ ಎಂಬ ಹಡಗನ್ನು ಕಂಡುಹಿಡಿದೆ’ ಎಂದು ಎಎನ್​ಐ ಜೊತೆ ಹಾಜಿಕ್​ ಮಾತನಾಡಿದ್ದಾನೆ.

ಈ ಹಡಗು ನೀರಿನಲ್ಲಿ ಚಲಿಸುವಾಗ ಸಮುದ್ರದ ನೀರು ಮತ್ತು ಜೀವಿಗಳು ಹಿಂದೆ ಹೋಗುತ್ತದೆ. ಕಲುಷಿತ ತ್ಯಾಜ್ಯ, ಪ್ಲಾಸ್ಟಿಕ್​ ಎಲ್ಲವೂ ಹಡಗಿನ 5 ಕ್ಕಿಂತ ಹೆಚ್ಚು ಭಾಗಗಳಲ್ಲಿ ಶೇಖರಣೆಯಾಗುತ್ತದೆ ಎಂದು ಹಾಜಿಕ್​ ತಿಳಿಸಿದ್ದಾನೆ.

ಹಾಜಿಕ್​ 9 ವರ್ಷದವನಾಗಿದ್ದಾಗಲೇ ಈ ಯೋಚನೆ ಆತನ ಮನಸ್ಸಿಗೆ ಬಂದಿತ್ತು. ನಂತರ ಈತ ಸಂವಹನ ಸಂಸ್ಥೆಗಳ ಜೊತೆ ಚರ್ಚಿಸಿ, ಕಲುಷಿತ ತ್ಯಾಜ್ಯದಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು ಈ ಹೊಸ ಆವಿಷ್ಕಾರ ಮಾಡಿದ್ದಾನೆ. ಇದರಿಂದ ಸಮುದ್ರ ಸೇರುತ್ತಿರುವ ಪ್ಲಾಸ್ಟಿಕ್​ ತ್ಯಾಜ್ಯವನ್ನು ಹೊರತೆಗೆದು ಮಾಲಿನ್ಯವನ್ನು ನಿಯಂತ್ರಿಸಬಹುದಾಗಿದೆ.

Comments are closed.