ಕರಾವಳಿ

ಸಮಾಜ ಕಲ್ಯಾಣ ಇಲಾಖೆಯ ವಾಹನಚಾಲಕರ ಮಗಳು ಕರಾಟೆಯಲ್ಲಿ ಸಾಧನೆ

Pinterest LinkedIn Tumblr

ಉಡುಪಿ: ಉಡುಪಿ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ 8 ನೇ ತರಗತಿ ವಿದ್ಯಾರ್ಥಿನಿ ದೀಕ್ಷಾ, ಉದ್ಯಾವರದಲ್ಲಿ ನಡೆದ 13 ನೇ ರಾಜ್ಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಫ್ನ ಕಟಾದಲ್ಲಿ ಪ್ರಥಮ ಸ್ಥಾನ, ಕುಮಿಟೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾಳೆ.

ಈಕೆ ಉಡುಪಿ ಸಮಾಜ ಕಲ್ಯಾಣ ಇಲಾಖೆಯ ವಾಹನಚಾಲಕ ದಾಮೋದರ ಮತ್ತು ಶಕುಂತಳ ದಂಪತಿಯ ಪುತ್ರಿಯಾಗಿದ್ದು, ಮೂಲ್ಕಿಯ ಚಂದ್ರಹಾಸ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Comments are closed.