ಕರಾವಳಿ

ಮಂಗನ ಕಾಯಿಲೆಯಿಂದ ಸಾಗರ ಮೂಲದ ಮಹಿಳೆ ಸಾವು

Pinterest LinkedIn Tumblr

ಉಡುಪಿ: ಮಣಿಪಾಲ ಆಸ್ಪತ್ರೆಗೆ ದಾಖಲಾದ ಸಾಗರ ತಾಲೂಕು ಅರಲಗೋಡಿನ ಲಕ್ಷ್ಮೀದೇವಿ (82) ಸಾವನ್ನ ಪ್ಪಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಯಿಂದ ಮೃತಪಟ್ಟ ಪ್ರಕರಣ ಇದೇ ಮೊದಲ ಬಾರಿ ಸಂಭವಿಸಿದೆ.

(ಸಾಂದರ್ಭಿಕ ಚಿತ್ರ)

ಇದುವರೆಗೆ ನೂರು ಮಂದಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು ಅವರೆಲ್ಲರೂ ಸಾಗರ ಆಸುಪಾಸಿನವರು. 40 ಮಂದಿಗೆ ಮಂಗನ ಕಾಯಿಲೆ ಇರುವ ಬಗ್ಗೆ ಮತ್ತು 59 ಜನರಿಗೆ ಇರದ ಬಗ್ಗೆ ವರದಿಯಾಗಿದೆ. ಒಬ್ಬರ ವರದಿ ಬರಬೇಕಾಗಿದೆ. 76 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 23 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments are closed.