ಕರಾವಳಿ

ಮಸೀದಿ ಆವರಣದೊಳಗೆ ಹಂದಿ ಮಾಂಸ ಎಸೆದ ಪ್ರಕರಣ: ಐವರು ಕಿಡಿಗೇಡಿಗಳ ಬಂಧನ

Pinterest LinkedIn Tumblr

ಉಡುಪಿ: ಕಿರಿಮಂಜೇಶ್ವರದ ನಾಗೂರಿನ ನೂರ್ ಜಾಮೀಯಾ ಮಸೀದಿಯ ಆವರಣಕ್ಕೆ ಜ.14ರ ರಾತ್ರಿ ವೇಳೆ ಕಿಡಿಗೇಡಿಗಳು ಹಂದಿಯ ಕಿವಿ ಮತ್ತು ಕಾಲುಗಳನ್ನು ಎಸೆದು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೈಂದೂರು ಪರಿಸರದ ನವೀನ ಖಾರ್ವಿ, ರಾಘವೇಂದ್ರ ಖಾರ್ವಿ, ಶ್ರೀಧರ ಖಾರ್ವಿ, ರವಿಚಂದ್ರ ಹಾಗೂ ನಾಗರಾಜ ಎಂಬವರನ್ನು ಬಂಧಿತ ಆರೋಪಿಗಳು.

ಜ.14 ರ ರಾತ್ರಿ 10.50 ಸುಮಾರಿಗೆ ಅಪರಿಚಿತ ವ್ಯಕ್ತಿಗಳು ಮಸೀದಿಯ ಆವರಣಕ್ಕೆ ಹಂದಿ ಕಿವಿ ಹಾಗೂ ಕಾಲು ಎಸೆದು ಹೋಗಿದ್ದು ಬೆಳಿಗ್ಗೆ ಬೆಳಕಿಗೆ ಬಂದಿದ್ದಲ್ಲದೇ ಈ ದುಷ್ಕ್ರತ್ಯ ಸಿಸಿ ಟಿವಿಯಲ್ಲಿ ದಾಖಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡ ಬೈಂದೂರು ಪೊಲೀಸರು ತನಿಖೆ ಮುಂದುವರೆಸಿದ್ದರು. ಉಡುಪಿ ಜಿಲ್ಲಾ ಎಸ್ಪಿ ಲಕ್ಷ್ಮಣ್. ಬ. ನಿಂಬರಗಿ ವಿಶೇಷ ತಂಡವನ್ನು ರಚನೆ ಮಾಡಿದ್ದರು. ಉಡುಪಿ ಜಿ‌ಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ನೇತೃತ್ವದಲ್ಲಿ ಕುಂದಾಪುರ ಡಿವೈ‌ಎಸ್‌ಪಿ ಬಿ.ಪಿ. ದಿನೇಶ್ ಕುಮಾರ್, ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಆರ್ ಗುನಗಾ, ಬೈಂದೂರು ಠಾಣಾ ಉಪನಿರೀಕ್ಷಕ ತಿಮ್ಮೇಶ್ ಬಿ.ಎನ್ ಹಾಗೂ ಸಿಬ್ಬಂದಿಯವರುಗಳನ್ನೊಳಗೊಂಡ ತಂಡವು ಪ್ರಕರಣವನ್ನು ಭೇಧಿಸಿದೆ.

ಆರೋಪಿತರ ಬಂಧನಕ್ಕೆ ರಚಿಸಿದ್ದ ತಂಡದಲ್ಲಿ ಕುಂದಾಪುರ ಉಪವಿಭಾಗದ ಸಿಬ್ಬಂದಿಯವರಾದ ಸಂತೋಷ್ ಕುಮಾರ್, ಸಂತೋಷ್ ಖಾರ್ವಿ, ಶ್ರೀಧರ, ನಾಗರಾಜ ಖಾರ್ವಿ, ಪ್ರಿನ್ಸ್ ಶಿರೂರು, ರಮೇಶ್, ಕೃಷ್ಣ ದೇವಾಡಿಗ, ಮೋಹನ ಪೂಜಾರಿ, ಚಂದ್ರಶೇಖರ, ನಾಗೇಂದ್ರ ಹಾಗೂ ತಾಂತ್ರಿಕ ವಿಭಾಗದ ಶಿವಾನಂದ ಮೊದಲಾದವರು ಭಾಗವಹಿಸಿರುತ್ತಾರೆ. ತಂಡಕ್ಕೆ ಉಡುಪಿ ಜಿ‌ಲ್ಲಾ ಪೊಲೀಸ್ ಅಧೀಕ್ಷಕರು 10,000/-ರೂಗಳ ಬಹುಮಾನವನ್ನು ಘೋಷಿಸಿದ್ದಾರೆ.

Comments are closed.