ಕರಾವಳಿ

ಜ,22ರಂದು ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ : ಉದ್ಯೊಗಾಂಕ್ಷಿಗಳಿಗೆ ಸುವರ್ಣಾವಕಾಶ

Pinterest LinkedIn Tumblr

ಮಂಗಳೂರು : ಕೇಂದ್ರ ಸರಕಾರದ “ಕೌಶಲ್ಯಾಭಿವೃದ್ಧಿ” ಸಚಿವಾಲಯದಿಂದ ದಿನಾಂಕ – 22/01/2019 ಮಂಗಳವಾರದಂದು ಬೆಳಿಗ್ಗೆ 9.00ರಿಂದ ಸಂಜೆ 5.00 ಘಂಟೆಯವರೆಗೆ ಮಂಗಳೂರಿನ ಕೆನರಾ ಕಾಲೇಜು ಆವರಣದಲ್ಲಿ ಉದ್ಯೋಗ ಮೇಳ ನಡೆಯಲಿದೆ.

ಈ ಮೇಳದಲ್ಲಿ SSLC ವರೆಗಿನ ವಿದ್ಯಾಭ್ಯಾಸ ಹೊಂದಿದ ಎಲ್ಲಾ ಉದ್ಯೋಗಾಂಕ್ಷಿಗಳು, ಎಲ್ಲಾ ಪದವೀಧರರು, ಸ್ನಾತಕೋತ್ತರ ಪದವೀಧರರು, ITI, ಡಿಪ್ಲೊಮಾ, ಇಂಜಿನಿಯರಿಂಗ್, ತಾಂತ್ರಿಕ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಮೂರು ವಿಭಾಗಗಳಲ್ಲಿ ಪ್ರತ್ಯೇಕ, ಪ್ರತ್ಯೇಕ ಸಂದರ್ಶನ ನಡೆಯುವ ಮೂಲಕ ಉದ್ಯೋಗಾವಕಾಶ ದೊರೆಯಲಿದೆ.

ದೇಶದ ವಿವಿಧ ಸುಮಾರು 500ರಿಂದ 600 ಕಂಪೆನಿಗಳು ಈ ಮೇಳದಲ್ಲಿ ಭಾಗವಹಿಸಲಿವೆ. ಎಲ್ಲಾ ನಿರುದ್ಯೋಗಿ ಉದ್ಯೊಗಾಂಕ್ಷಿಗಳು ಇದರ ಸದುಪಯೊಗ ಪಡೆದುಕೊಳ್ಳಬೇಕಾಗಿ ಪುತ್ತೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ ಹಾಗೂ ನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ಜೀವಂಧರ್ ಜೈನ್ ಜಂಟಿಯಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಸಂದರ್ಶನಕ್ಕೆ ಆಗಮಿಸುವ ಅಭ್ಯರ್ಥಿಗಳು ಜನವರಿ 22ರಂದು ಸೂಕ್ತ ದಾಖಲೆಗಳೊಂದಿಗೆ ಸ್ಥಳದಲ್ಲಿ ಹಾಜರಿರುವಂತೆ ಅವರು ತಿಳಿಸಿದ್ದಾರೆ.

Comments are closed.