ಕರಾವಳಿ

ಈ ಹಣ್ಣನು ಸೇವಸಿದರೆ ನಮ್ಮ ದೇಹಕ್ಕೆ ಯಾವೆಲ್ಲ ರೀತಿಯಲ್ಲಿ ಸಹಕಾರಿಯಾಗಲಿದೆ.. ತಿಳಿಯಿರಿ!

Pinterest LinkedIn Tumblr

ದೇಹದ ಆರೋಗ್ಯಕ್ಕೆ ದಾಳಿಂಬೆಯಲ್ಲಿ ಇದೆ ಉತ್ತಮವಾದ ಗುಣಗಳು. ಹೌದು, ದಾಳಿಂಬೆಯಲ್ಲಿ ಇಷ್ಟೊಂದು ಆರೋಗ್ಯಕಾರಿ ಗುಣ ಇದೆ. ಅಂದರೆ ಕೆಲವರು ನಂಬುವುದಿಲ್ಲ ಆದರೆ ಇದರ ಮಹತ್ವವನ್ನು ಸಂಶೋಧನೆಯ ಮೂಲಕ ತಿಳಿಯಲಾಗಿದೆ. ಈ ಹಣ್ಣುಯಾವೆಲ್ಲ ರೀತಿಯಲ್ಲಿ ನಮ್ಮ ದೇಹಕ್ಕೆ ಸಹಕಾರಿಯಾಗಿದೆ ಅನ್ನೋದನ್ನ ತಿಳಿಯೋಣ ಬನ್ನಿ.

ದಾಳಿಂಬೆಯು ನಿಮ್ಮ ಚರ್ಮ,ದೇಹ ಹಾಗೂ ಕೂದಲಿನ ರಕ್ಷಣೆಯಲ್ಲೂ ಮಹತ್ತರ ಪಾತ್ರವಹಿಸುತ್ತದೆ. ದಾಳಿಂಬೆಯಲ್ಲಿ ವಿಟಮಿನ್ ಎ, ಸಿ ಹಾಗೂ ಇ ಅಂಶಗಳು ಹೇರಳವಾಗಿದ್ದು ಇವು ರೋಗಗಳ ವಿರುದ್ಧದ ಹೋರಾಡುವ ಶಕ್ತಿಯನ್ನು ಮನುಷ್ಯನ ದೇಹಕ್ಕೆ ನೀಡುತ್ತದೆ. ಮುಖ್ಯವಾಗಿ ಖಿನ್ನತೆ ತಡೆಯುವ ಶಕ್ತಿಯೂ ದಾಳಿಂಬೆಗಿದೆ ಇದೆ.

ಈ ಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಕಬ್ಬಿಣ ಅಂಶಗಳು ಸಮೃದ್ಧವಾಗಿರುವ ದಾಳಿಂಬೆಯು ಕ್ಯಾನ್ಸರ್ ರೋಗವನ್ನು ನಿಯಂತ್ರಿಸಬಲ್ಲದು. ಮುಖ್ಯವಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ವಿವಿಧ ಬಗೆಯಕ್ಯಾನ್ಸರ್ ವಿರುದ್ಧ ಹೋರಾಡಿ ರೋಗವನ್ನು ಶೀಘ್ರ ಗುಣಮುಖಗೊಳಿಸುತ್ತದೆ. ದಾಳಿಂಬೆಯಲ್ಲಿರುವ ವಿಟಮಿನ್ ಅಂಶಗಳು ಕ್ಯಾನ್ಸರ್ ಉಂಟು ಮಾಡುವ ರೋಗಾಣುಗಳ ವಿರುದ್ಧ ಹೋರಾಡುವ ಚೈತನ್ಯವನ್ನು ಬಹಳ ಹೆಚ್ಚಿಸುತ್ತದೆ. ದಾಳಿಂಬೆಯು ಮನುಷ್ಯನಿಗೆ ನವ ಚೈತನ್ಯವನ್ನು ಹೆಚ್ಚಿಸುವ ಅಂಶಗಳನ್ನು ಹೊಂದಿದೆ. ಸಾಮಾನ್ಯವಾಗಿ ನಾವು ಖಾಯಿಲೆ ಬಿದ್ದರೆ ವೈದ್ಯರು ಸೇಬಿನ ಜತೆಗೆ ದಾಳಿಂಬೆ ರಸವನ್ನು ಸೇವಿಸಲು ಸೂಚಿಸುತ್ತಾರೆ.

ಅಮೆರಿಕದ ಜರ್ನಲ್ ಆಫ್ಕ್ಲಿನಿಕಲ್ ನ್ಯುಟ್ರಿಶನ್ ಸಂಸ್ಥೆ ನಡೆಸಿದ ಸಂಶೋಧನೆಯ ಪ್ರಕಾರ ದಾಳಿಂಬೆಯಲ್ಲಿ ಹೇರಳವಾಗಿ ಆ್ಯಂಟಿಆ್ಯಕ್ಸಿಡೆಂಟ್ಸ್ (ಉತ್ಕರ್ಷಣಗಳ) ಅಂಶದ ಪ್ರಮಾಣ ಕಂಡುಬಂದಿದ್ದು ಇದು ಮನುಷ್ಯನಲ್ಲಿ ಉತ್ಪತ್ತಿಯಾಗುವ ಕೊಬ್ಬಿನ ಅಂಶವನ್ನು ನಿಯಂತ್ರಿಸುವ ಮೂಲಕ ಹೃದಯಕ್ಕೆ ಸಂಬಂಧಿಸಿದ ರೋಗಗಳನ್ನು ತಡೆಗಟ್ಟಲು ಸಹಕರಿಸುತ್ತದೆ. ನಿಯಮಿತವಾಗಿ ದಾಳಿಂಬೆ ಜ್ಯೂಸ್ ಅನ್ನು ಕುಡಿಯುತ್ತಿದ್ದರೆ ರಕ್ತವು ತೆಳುವಾಗುವ ಮೂಲಕ ಆಪಧಮನಿಯಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ನಿಯಂತ್ರಿಸಿ ಹೃದಯಾಘಾತ ಹಾಗೂಸ್ಟ್ರೋಕ್ (ಪಾಶ್ರ್ವವಾಯು ಅಥವಾ ಲಕ್ವ) ಬರದಂತೆ ನಿಯಂತ್ರಿಸುತ್ತದೆ.

Comments are closed.