ಕರಾವಳಿ

ಖೇಲೋ ಇಂಡಿಯಾ: ಮಿಂಚಿದ ಮಂಗಳೂರಿನ ಪ್ರತಿಭೆ ರಚನಾ ರಾವ್

Pinterest LinkedIn Tumblr

ಮಂಗಳೂರು: ಪುಣೆಯ ಬಾಳೇವಾಡಿಯಲ್ಲಿ ನಡೆಯುತ್ತಿರುವ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ಪ್ರತಿಭೆ ಮಂಗಳಾ ಈಜು ಕ್ಲಬ್‍ನ ಉದಯೋನ್ಮುಖ ತಾರೆ ಕುಮಾರಿ ರಚನಾ ಎಸ್. ಆರ್. ರಾವ್ ಇವರು ಬಾಲಕಿಯರ 17ನೇ ವಯೋಮಾನ ವಿಭಾಗದಲ್ಲಿ ಇಂದು ನಡೆದ 50 ಮೀ. ಬ್ರೆಸ್ಟ್‍ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದು (35.88) ಮಂಗಳೂರಿಗೆ ಕೀರ್ತಿ ತಂದಿದ್ದಾಳೆ.

ಈಕೆ ಜ.13 ರಂದು ನಡೆದ 4 x 100 ಮೀಟರ್ ಮೆಡ್ಲೆ ರಿಲೆಯಲ್ಲಿ 100 ಮೀ. ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ಅತ್ಯುತ್ತಮವಾಗಿ ಈಜಿ ಕರ್ನಾಟಕ ತಂಡಕ್ಕೆ ಚಿನ್ನದ ಪದಕ ಸಿಗುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾಳೆ ಅಲ್ಲದೇ 100 ಮೀ. ಬ್ರೆಸ್ಟ್ ಸ್ಟ್ರೋಕ್ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಜಯಸಿದ್ದಾಳೆ.

ಈಕೆ ಮಂಗಳೂರಿನ ರಾಮಕೃಷ್ಣ ಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದು ಶ್ರೀ ರಾಧಾಕೃಷ್ಣ ರಾವ್ ಹಾಗೂ ಸುಮಿತ್ರ ರಾವ್ ಇವರ ಪುತ್ರಿ, ಇವಳು ಮಂಗಳಾ ಈಜು ಕ್ಲಬ್ಬಿನ ಮುಖ್ಯ ತರಬೇತುದಾರರಾದ ಶ್ರೀ ಲೋಕರಾಜ್ ವಿಟ್ಲ ಮತ್ತು ಸಹಾಯಕ ತರಬೇತುದಾರರಾದ ಶ್ರೀ ಎಂ. ಶಿವಾನಂದ ಗಟ್ಟಿ, ಪುಂಡಲೀಕ್ ಖಾರ್ವಿ, ಶಿಶಿರ್ ಎಸ್. ಗಟ್ಟಿ ಮತ್ತು ಶುಭಂ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

ಇದಲ್ಲದೇ ಈ ಸ್ಪರ್ಧೆಯಲ್ಲಿ ಮಂಗಳಾ ಈಜು ಕ್ಲಬ್‍ನ ಆರಾಧನಾ ಬೇಕಲ್ ಹಾಗೂ ಸಾನಿಯಾ ಶೆಟ್ಟಿ ಇವರು ಖೇಲೋ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾದ ಕ್ಲಬ್ಬಿನ ಇತರ ಸದಸ್ಯರು.

Comments are closed.