ಕರಾವಳಿ

ನವಜಾತ ಶಿಶು ಹುಟ್ಟಿದ ಎರಡನೇ ದಿನದಿಂದಲೇ ಆರಂಭವಾಗುವ ಕೆಲವು ಕಾಯಿಲೆಗಳು

Pinterest LinkedIn Tumblr

ನವಜಾತ ಶಿಶುಗಳಲ್ಲಿ ಪಿತ್ತಕೋಶ ಸಮಪರ್ಕವಾಗಿ ಬೆಳವಣಿಗೆ ಹೊಂದದ ಪರಿಣಾಮವಾಗಿ ಮತ್ತು ಕೆಂಪು ರಕ್ತ ಕಣಗಳು ಕಡಿಮೆ ಬಿಡುಗಡೆಯಾಗುವುದರಿಂದ ನವಜಾತ ಶಿಶುಗಳಲ್ಲಿ ಕಾಮಲೆ ಕಂಡು ಬರುವುದು ಸಹಜ. ಈ ಕಾಮಲೆ 2- 5 ದಿನಗಳಲ್ಲಿ ಕಾಣಿಸಿಕೊಂಡು, ಕೆಲ ಕಾಲದ ನಂತರ ವಾಸಿಯಾಗುತ್ತದೆ. ನವಜಾತ ಶಿಶುಗಳ ಈ ಕಾಮಾಲೆಯನ್ನು ನವಜಾತ ಶಿಶುಗಳ ಫಿಸಿಯೋಲಜಿಕ್ ಕಾಮಾಲೆ ಎಂದೂ ಕರೆಯಲಾಗುತ್ತದೆ. ಈ ರೀತಿ ಕಾಮಲೆ ಕಾಣಿಸಕೊಂಡರೆ ಯಾವುದೇ ತೊಂದರೆಯಿಲ್ಲ.

ಜನನದ ಎರಡನೇ ದಿನದಲ್ಲಿ ಆರಂಭವಾಗುವ ಈ ಕಾಯಿಲೆ ಸುಮಾರು 8 ದಿನಗಳ ವರೆಗೆ (ಅವಧಿಪೂರ್ವ ಮಕ್ಕಳಲ್ಲಿ 14 ದಿನ) ಇದ್ದು ನಂತರ ಗುಣವಾಗುತ್ತದೆ. ಕೆಂಪುರಕ್ತ ಕಣಗಳಿಂದ ಬಿಲಿರುಬಿನ್ ಎಂಬ ಹಳದಿ ವರ್ಣದ್ರವ್ಯ ಬಿಡುಗಡೆಯಾಗುತ್ತದೆ. ಇದನ್ನು ಪಿತ್ತಕೋಶ ಹಾಗೂ ಮೂತ್ರಪಿಂಡಗಳು ವಿಲೇವಾರಿ ಮಾಡುತ್ತವೆ. ಆದರೆ ಪಿತ್ತಕೋಶಗಳು ಪೂರ್ಣಪ್ರಮಾಣದಲ್ಲಿ ಬೆಳೆದಿರುವುದಿಲ್ಲವಾದ್ದರಿಂದ , ದೇಹದಲ್ಲಿ ಪಿತ್ತಕೋಶದ ಕಾರ್ಯ ಸರಿಯಾಗಿ ನಡೆಯದೇ ನವಜಾತ ಶಿಶುವಿನ ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ರೀತಿ ಉಂಟಾದರೆ ಗಾಬರಿಯಾಗುವ ಅಗತ್ಯವಿಲ್ಲ.

ಈ ಕಾಮಲೆ ಕಾಯಿಲೆಯ ಲಕ್ಷಣಗಳು:
* ಹಳದಿ ಚರ್ಮ
* ಕಣ್ಣುಗಳ ಬಿಳಿ ಭಾಗದಲ್ಲಿ ಹಾಗೂ ಉಗುರಿನ ತಳಭಾಗದಲ್ಲಿ ಹಳದಿ ಬಣ್ಣ
* ಮಗು ಜಾಸ್ತಿ ಹೊತ್ತು ನಿದ್ದೆ ಮಾಡುವುದು
* ಹಳದಿ ಬಣ್ಣದಲ್ಲಿ ಮಲವಿಸರ್ಜನೆ

ಕಾಮಲೆಗೆ ಚಿಕಿತ್ಸೆ: ಚಿಕ್ಕ ಪ್ರಮಾಣದಲ್ಲಿ ಕಾಮಾಲೆಯಾಗಿದ್ದರೆ ಅದು ತನ್ನಷ್ಟಕ್ಕೆ ತಾನೇ ಕೇವಲ 10 ದಿನಗಳಲ್ಲಿ ವಾಸಿಯಾಗುತ್ತದೆ. ಆದರೆ, ಅದರ ತೀವ್ರತೆಯನ್ನು ತಗ್ಗಿಸಲು ಈ ಕೆಳಕಂಡ ಚಿಕಿತ್ಸೆಯನ್ನು ಕಡ್ಡಾಯವಾಗಿ ಕೈಗೊಳ್ಳಬೇಕು.

1. ಮಗುವಿಗೆ ಸಾಧ್ಯವಿದ್ದಷ್ಟೂ ಹೆಚ್ಚು ಬಾರಿ ಮೊಲೆಯುಣಿಸಿ
2. ಬೆಳಗ್ಗೆ ಸೂರ್ಯನ ಬೆಳಕಿಗೆ ಮಗುವನ್ನು ಸ್ವಲ್ಪ ಹೊತ್ತು ಹಿಡಿಯಿರಿ .ತೆಳುವಾದ ಪರದೆಯನ್ನು ಕಿಟಕಿಗೆ ಹಾಕಿ ಸೂರ್ಯನ ಕಿರಣಗಳು ತಾಗುವಂತೆ ಮಗುವನ್ನು ಮಲಗಿಸಬೇಕು.
3. ಪಿತ್ತಕೋಶವನ್ನು ಉತ್ತೇಜಿಸುವ ಕೆಲ ನಿರ್ದಿಷ್ಟ ಔಷಧಗಳನ್ನು ನೀಡದರೆ ಕಾಯಿಲೆ ಗುಣಮುಖವಾಗುತ್ತದೆ.

ಮಗುವಿಗೆ ತೇಗು ಬರದೇ ಇರುವ ಸಮಸ್ಯೆ
ನಿಮ್ಮದು ಚೊಚ್ಚಲ ಹೆರಿಗೆಯಾಗಿದ್ದರೆ ಮಗುವಿನ ಬಗ್ಗೆ ಸಾಕಷ್ಟು ವಿಷಯಗಳು ಗೊತ್ತಿರುವುದಿಲ್ಲ. ಹೇಗೆ ಮಲಗಿಸಬೇಕು? ಹೇಗೆ ಎತ್ತಿಕೊಳ್ಳಬೇಕು? ಮಗುವಿಗೆ ಎಷ್ಟು ಬಾರಿ ಹಾಲು ಕೊಡಬೇಕು? ಈ ಎಲ್ಲಾ ವಿಷಯಗಳು ಗೊತ್ತಿರುವುದಿಲ್ಲ. ಮಗು ಅಳುತ್ತಿದ್ದರೆ ಮಗು ಹೊಟ್ಟೆ ನೋವಿನಿಂದ ಅಳುತ್ತಿದೆಯೇ? ಅಥವಾ ತಲೆನೋವಿನಿಂದ ಅಳುತ್ತಿದೆಯೇ? ಎಂದು ತಿಳಿಯದೆ ಕಂಗಾಲಾಗಿ ಬಿಡುತ್ತಾರೆ.

ಮಗುವಿಗೆ ಹಾಲು ಕುಡಿಸಿದ ತಕ್ಷಣ ಎತ್ತಿ ಆಟ ಆಡಿಸಿದರೆ ವಾಂತಿ ಮಾಡುತ್ತದೆ. ಆದ್ದರಿಂದ ಹಾಲು ಕೊಟ್ಟ ನಂತರ ಮಗುವನ್ನು ನಿಮ್ಮ ಬೆನ್ನಿಗೆ ಹಾಕಿ ಬೆನ್ನು ನೀವಬೇಕು. ಅಲ್ಲದೆ ಮಗುವಿಗೆ ತೇಗು ಬಂದರೆ ಒಳ್ಳೆಯದು. ಏಕೆಂದರೆ ಮಗು ಹಾಲು ಕುಡಿಯುವಾಗ ಗಾಳಿಯೂ ಹೊಟ್ಟೆಗೆ ಹೋಗಿರುತ್ತದೆ. ತೇಗು ಬಂದರೆ ಅಧಿಕ ಗ್ಯಾಸ್ ಹೊರಬರಲು ಸಹಾಯ ಮಾಡುತ್ತದೆ. ಮಗು ತೇಗಿದರೆ ನಂತರ ಸುಖವಾಗಿ ನಿದ್ದೆ ಮಾಡುತ್ತದೆ.

ಮಗುವಿಗೆ 8-10 ತಿಂಗಳಾದ ಹೊಟ್ಟೆಯಲ್ಲಿ ಗ್ಯಾಸ್ ತುಂಬುವ ಸಮಸ್ಯೆ ಅಷ್ಟೇನು ಇರುವುದಿಲ್ಲ. ಏಕೆಂದರೆ ಆ ಸಮಯದಲ್ಲಿ ಮಗು ಸರಿಯಾಗಿ ಹಾಲು ಕುಡಿಯುವುದನ್ನು ಕಲಿತಿರುತ್ತದೆ, ಆಗ ಗಾಳಿ ಹೊಟ್ಟೆ ಸೇರುವುದು ಕಮ್ಮಿಯಾಗುತ್ತದೆ. ಮಗುವಿಗೆ ತೇಗು ಬರಲು ಏನು ಮಾಡಬೇಕು? ಮಗುವನ್ನು ತೋಳಿಗೆ ಹಾಕಿ ಮೆಲ್ಲಗೆ ಅದರ ಬೆನ್ನು ನೀವಿ. ಇಲ್ಲದಿದ್ದರೆ ಮಗುವನ್ನು ಕಮುಚಿ ನಿಮ್ಮ ತೊಡೆಯಲ್ಲಿ ಮಲಗಿಸಿ. ಈ ರೀತಿ ಮಾಡಿದರೆ ಮಗುವಿಗೆ ತೇಗು ಬರುತ್ತದೆ. ಇದರಿಂದ ಹೊಟ್ಟೆಯಲ್ಲಿರುವ ಗ್ಯಾಸ್ ಹೊರ ಬರುವುದು.

ಮಗುವಿನ ಕಾಡುವ GERD(gastroesophageal reflux disease),ಕ್ಯಾಲ್ಸಿಯಂ, ವಿಟಮಿನ್ ಡಿ, ಹಿಮಗ್ಲೋಬಿನ ಕೊರತೆಯ ಸಮಸ್ಯೆ :

ಅವಧಿಗಿಂತ ಮುಂಚಿತವಾಗಿ ಹುಟ್ಟಿದ ಹಲವು ಮಗುವಿನಲ್ಲಿ ಈ GERD ಕ್ಯಾಲ್ಸಿಯಂ, ವಿಟಮಿನ್ ಡಿ, ಹಿಮಗ್ಲೋಬಿನ ಕೊರತೆಯ ಸಮಸ್ಯೆಗಳ ಕಾಡುವುದು ಸಾಮ್ಯಾನ.ಇದಕ್ಕೆ ಕಾರಣ ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯಲ್ಲಿ ಗರ್ಭದಲ್ಲಿನ ಮಗುವಿಗಾಗಿ ಬೇಕಾದ ಪೋಷಾಂಶಗಳನ್ನು ಸರಿಯಾದ ರೀತಿಯಲ್ಲಿ ಸೇವಿಸದೆ ಇರುವುದು ಹಾಗೂ ತಮ್ಮ ಬಗ್ಗೆ ಕಾಳಜಿ ವಹಿಸದೆ ಇರುವುದು

ಈ ರೀತಿ ಕಾಣಿಸಿಕೊಂಡಾಗ ಈ ಕೆಳಗಿನ ವಿಧಾನಗಳನ್ನು ಅನುಸರಿಸಿದರೆ ಮಕ್ಕಳಲ್ಲಿ ಗ್ಯಾಸ್ ಸಮಸ್ಯೆ ಕಡಮೆಯಾಗುವುದು.

1. ಬೆನ್ನಿಗೆ ತಟ್ಟುವುದು: ಹಾಲು ಕುಡಿಸಿದ ನಂತರ ತಾಯಿಯು ಮಗುವನ್ನು  ತೊಡೆಯ ಮೇಲೆ ಬೋರಲು ಮಲುಗಿಸಿ 1-2 ನಿಮಿಷದವರೆಗೆ ಮೆಲ್ಲನೆ ಬೆನ್ನಿಗೆ ತಟ್ಟಬೇಕು. ಈ ರೀತಿ ಮಾಡಿದರೆ ಮಗುವಿನಲ್ಲಿ ಗ್ಯಾಸ್ ಸಮಸ್ಯೆ ಕಾಣಿಸುವುದಿಲ್ಲ. ಹೀಗೆ ಮಾಡದಿದ್ದರೆ ಕೆಲವೊಮ್ಮೆ ಕುಡಿದ ಹಾಲು ವಾಪಸ್ಸು ಬರುವುದುಂಟು.

2. ಮಗುವಿನ ಹೊಟ್ಟೆ ಉಜ್ಜುವುದು: ಮಗುವಿನ ಹೊಟ್ಟೆ ಗ್ಯಾಸ್‌ನಿಂದ ಉಬ್ಬಿದರೆ ಮಗುವನ್ನು ಅಗಾಂತ ಮಲುಗಿಸಿ ಮಗುವಿನ ಹೊಟ್ಟೆಗೆ ಮೆದುವಾಗಿ ಮಸಾಜ್ ಮಾಡಬೇಕು.

 

3. ಬಿಸಿ ನೀರು ಕುಡಿಸುವುದು: ಮಗುವಿಗೆ ಗ್ಯಾಸ್ ಹೊಟ್ಟೆ ನೋವು ಕಾಣಿಸಿಕೊಂಡರೆ ಹದ ಬಿಸಿನೀರು ಕುಡಿಸಬೇಕು. ತುಂಬಾ ಬಿಸಿ ಕುಡಿಸಬಾರದು. ಹದ ಬಿಸಿ ನೀರು ಹೊಟ್ಟೆ ಸೇರಿದಾಗ ಗ್ಯಾಸ್ ಹೊರಬಂದು ಮಗುವಿಗೆ ಸಮಧಾನ ದೊರೆಯುತ್ತದೆ.

4. ಫಾರ್ಮುಲಾ ಹಾಲು ಕುಡಿಸಬೇಡಿ: ಈ ರೀತಿಯ ಹಾಲ ಕುಡಿಸಿದರೆ ಮಕ್ಕಳಿಗೆ ವಾಂತಿ, ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಏಕೆಂದರೆ ಈ ಹಾಲು ಕುಡಿದರೆ ಸರಿಯಾಗಿ ಜೀರ್ಣವಾಗದೆ ಈ ರೀತಿ ಉಂಟಾಗುತ್ತದೆ.

 

5. ವ್ಯಾಯಾಮ: ಮಗುವನ್ನು ಚಾಪೆ ಮೇಲೆ ಮಲಗಿಸಿ, ಮಗುವಿನ ಕಾಲುಗಳನ್ನು ನಿಮ್ಮ ಕೈಯಲ್ಲಿ ತೆಗೆದುಕೊಂಡು ಮೆಲ್ಲನೆ ಸೈಕಲ್ ತುಳಿಯುವಂತೆ ಮಾಡಿಸಿ, ಈ ರೀತಿ ಮಾಡಿದರೆ ನೋವು ಕಡಿಮೆಯಾಗುವುದು.

 

Comments are closed.