ಕರಾವಳಿ

ಉಡುಪಿಯಲ್ಲಿ ಹೆಚ್ಚಿದ ಭಿಕ್ಷಾಟನೆ: ಭಿಕ್ಷಾಟನೆ ನಿರತ ಬಾಲಕಿಯ ರಕ್ಷಣೆ

Pinterest LinkedIn Tumblr

ಉಡುಪಿ: ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ಇದರ ಜಂಟಿ ಆಶ್ರಯದಲ್ಲಿ ಉಡುಪಿಯ ಸಿಟಿ ಬಸ್ಸ್ಸ್ಟಾಂಡ್, ಸರ್ವೀಸ್ ಬಸ್ಸ್ಸ್ಟಾಂಡ್ ಮತ್ತು ಶ್ರೀ ಕೃಷ್ಣ ಮಠದ ಆಸುಪಾಸುಗಳಲ್ಲಿ ಭಿಕ್ಷಾಟನೆ ಮಾಡದಂತೆ ಅರಿವು ಮೂಡಿಸಲಾಗಿದ್ದು, ಇಂದು(ಜ.14) ಸಿಟಿ ಬಸ್ಸ್ಸ್ಟಾಂಡ್ನಲ್ಲಿ ಭಿಕ್ಷಾಟನೆ ನಿರತ ಬಾಲಕಿಯನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು.

ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಭಾಕರ್ ಆಚಾರ್, ಕಾನೂನು ಪರಿವೀಕ್ಷಣಾಧಿಕಾರಿ, ಕಪಿಲಾ.ಬಿ, ರಕ್ಷಣಾಧಿಕಾರಿ(ಸಾಂಸ್ಥಿಕ), ಯೋಗೀಶ್ ಸಮಾಜಕಾರ್ಯಕರ್ತ, ಸಂದೇಶ್ ಕೆ, ಸುನಂದ ಔಟ್ರೀಚ್ ವರ್ಕರ್ ಭಾಗವಹಿಸಿದ್ದರು.

Comments are closed.