ಕರಾವಳಿ

ಕಾರ್ಕಳದಲ್ಲಿ ನದಿಗುರುಳಿದ ಬೊಲೆರೋ ಜೀಪ್: ಮಹಿಳೆ ದಾರುಣ ಸಾವು

Pinterest LinkedIn Tumblr

ಉಡುಪಿ: ಬೊಲೆರೋ ಜೀಪ್‌ ನದಿಗುರುಳಿದ ಪರಿಣಾಮ ಬೊಲೇರೋದಲ್ಲಿದ್ದ ಮಹಿಳೆ ಮೃತಪಟ್ಟ ಘಟನೆ ಶನಿವಾರ ಸಂಕಲಕರಿಯದಲ್ಲಿ ಸಂಭವಿಸಿದೆ. ಜೀಪಿನಲ್ಲಿದ್ದ ಇತರ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಬೋಳದ ಸ್ಟಾನಿ ಮಸ್ಕರೇನಸ್‌ ಅವರ ಪತ್ನಿ ಡಯಾನಾ (45) ನೀರಿನಲ್ಲಿ ಮುಳುಗಿ ಮೃತಪಟ್ಟವರು. ಜೀಪು ಚಲಾಯಿಸುತ್ತಿದ್ದ ಸ್ಟಾನಿ ಮಸ್ಕರೇನಸ್‌ (50) ಹಾಗೂ ಮಕ್ಕಳಾದ ಶಲ್ಟನ್‌ (21), ಶರ್ಮನ್‌ (18) ಅವರು ಅಪಾಯದಿಂದ ಪಾರಾದವರು. ಜೀಪ್‌ ಸಂಕಲಕರಿಯ ಶಾಂಭವಿ ನದಿ ಸೇತುವೆಯ ತಡೆಗೋಡೆಗೆ ಬಡಿದು ನದಿಗೆ ಉರುಳಿತ್ತು.

ಮದುವೆಗೆ ಹೊರಟ ಕುಟುಂಬ…
ಕಾರ್ಕಳ ತಾಲೂಕಿನ ಬೋಳ ಕೇಂದೊಟ್ಟು ಬರ್ಕೆಯ ಸ್ಟಾನಿ ಅವರು ಪತ್ನಿ, ಮಕ್ಕಳೊಂದಿಗೆ ಮಂಗಳೂರಿನ ಮಿಲಾಗ್ರಿಸ್‌ ಚರ್ಚ್‌ ಹಾಲ್‌ನಲ್ಲಿ ನಡೆಯಲಿದ್ದ ತನ್ನ ಸೊಸೆಯ ಮದುವೆಗೆ ಹೊರಟಿದ್ದರು. ಅವರು ಚಲಾಯಿಸುತ್ತಿದ್ದ ಜೀಪ್‌ ಸಂಕಲಕರಿಯ ಶಾಂಭವಿ ನದಿ ಸೇತುವೆಯ ಪಶ್ಚಿಮ ಭಾಗದ ತಡೆಗೋಡೆಗೆ ಢಿಕ್ಕಿ ಹೊಡೆದು ನದಿಗೆ ಮಗುಚಿತ್ತು. ಅಣೆಕಟ್ಟು ಹಾಕಿದ್ದರಿಂದ ನದಿ ತುಂಬಿ ತುಳುಕುತ್ತಿತ್ತು. ತತ್‌ಕ್ಷಣ ಸ್ಥಳೀಯರು ಮತ್ತು ಇತರ ವಾಹನಗಳ ಚಾಲಕರು ನೀರಿಗೆ ಧುಮುಕಿ ತಂದೆ-ಮಕ್ಕಳನ್ನು ಜೀಪ್‌ನಿಂದ ಹೊರಗೆಳೆದು ರಕ್ಷಿಸಿದರು. ಸ್ಟಾನಿ, ಮಕ್ಕಳಾದ ಶರ್ಮನ್‌ ಹಾಗೂ ಶಲ್ಟನ್‌ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಯಾನಾ ಅವರ ಮರಣೋತ್ತರ ಪ್ರಕ್ರಿಯೆ ಬೆಳ್ಮಣ್‌ ಸರಕಾರಿ ಆಸ್ಪತ್ರೆಯಲ್ಲಿ ನಡೆಯಿತು.

ಬೋಳದ ಕೇಂದೊಟ್ಟುವಿನ ಸ್ಟಾನಿ ಅವರು ಕೃಷಿಕರಾಗಿದ್ದು ಪತ್ನಿ ಡಯಾನಾ ಎಡಪದವು ಪೆರಾರದವರು. ಈ ದಂಪತಿ 4 ಮಕ್ಕಳಿದ್ದಾರೆ.

Comments are closed.