ಕರಾವಳಿ

ಸಿಪ್ಪೆಯಿಂದ ಆರೋಗ್ಯ ಹಾಗೂ ಸೌಂದರ್ಯ ನಿಮ್ಮದಾಗಿಸಿ…!

Pinterest LinkedIn Tumblr

ಹಣ್ಣು ತರಕಾರಿಗಳನ್ನು ತಿನ್ನುವುದು ಒಂದು ಅತ್ಯುತ್ತಮ ಅಭ್ಯಾಸವಾಗಿದೆ.ನಿರಂತರವಾಗಿ ತಿನ್ನುವ ಹವ್ಯಾಸ ಉಳ್ಳವರಾಗಿದ್ದರೆ ನೀವು ಸಿಪ್ಪೆಗಳನ್ನು ಎಸೆಯುತ್ತಿರಾ… ನಿಲ್ಲಿ ನಿಲ್ಲಿ ಎಸೆಯಬೇಡಿ ಆ ಸಿಪ್ಪೆಗಳ ಉಪಯೋಗ ನಾವು ಹೇಳ್ತೀವಿ ನಿಮ್ಮ ಸೌಂದರ್ಯ ಕಾಂತಿ ಹೆಚ್ಚಿಸೋಕೆ ಈ ಸಿಪ್ಪೆಗಳು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ತಿಳಿಯಿರಿ…..

ತರಕಾರಿ ಸಿಪ್ಪೆಗಳನ್ನು ಒಟ್ಟಿಗೆ ನೀರಿನಲ್ಲಿ ನೆನೆಸಿಡಿ ಅದನ್ನು ಬಿಸಿಮಾಡಿ ಸೂಪ್ ರೀತಿಯಲ್ಲಿ ಕುಡಿಯಬಹುದು.

ನಿಂಬೆಹಣ್ಣಿನ ಸಿಪ್ಪೆಗಳನ್ನು ಚರ್ಮಕ್ಕೆ ಲೇಪಿಸಿಕೊಳ್ಳುವುದರಿಂದ ಕಾಂತಿಯನ್ನು ಹೆಚ್ಚಿಸಬಹುದು.

ಬಾಳೆಹಣ್ಣಿನ ಸಿಪ್ಪೆಯನ್ನು ಕಣ್ಣಿನ ಕೆಳಭಾಗದಲ್ಲಿ ಲೇಪಿಸಿಕೊಳ್ಳುವುದರಿಂದ ಕಪ್ಪು ವರ್ತುಲಗಳ ಕಲೆ ಹೋಗಲಾಡಿಸಬಹುದು.

ನಿಂಬೆಹಣ್ಣ ಸಿಪ್ಪೆಯಿಂದ ಪಾತ್ರೆಗಳಲ್ಲಿನ ಹಳೆಯ ಕಲೆಯನ್ನು ಹೋಗಲಾಡಿಸಬಹುದು.
ಉಪ್ಪು ಮತ್ತು ನಿಂಬೆ ಹಣ್ಣಿನ ಸಿಪ್ಪೆಯಿಂದ ಹಲ್ಲಿನಲ್ಲಿನ ಹಳದಿ ಅಂಶವನ್ನು ಹೋಗಿಸಬಹುದು ನಾಲಿಗೆಯ ಕೊಳೆಯನ್ನೂ ಹೋಗಲಾಡಿಸಬಹುದು.

ಹಣ್ಣುಗಳ ಸಿಪ್ಪೆಯ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದಲ್ಲಿ ಕಾಂತಿ ಹೆಚ್ಚಿಸಿಕೊಳ್ಳಬಹುದು.

Comments are closed.