ಕರಾವಳಿ

ಕಾಣೆಯಾದ ಮೀನುಗಾರರನ್ನು ಪತ್ತೆಗೆ ಇಸ್ರೋ ಬಾಹ್ಯಾಕಾಶ ತಂತ್ರಜ್ಞಾನದ ಮೊರೆ: ಸಚಿವ ನಾಡಗೌಡ

Pinterest LinkedIn Tumblr

ಉಡುಪಿ: ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ಕಣ್ಮೆರೆಯಾದ ಇಬ್ಬರ ಮನೆಗೆ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಭೇಟಿಕೊಟ್ಟು ಸಾಂತ್ವಾನ ಹೇಳಿದರು. ಡಿಸೆಂಬರ್ 13ರಂದು ಮೀನುಗಾರಿಕೆಗೆ ತೆರಳಿದ್ದು ಡಿ. 15 ರಿಂದ ಯಾರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಘಟನೆ ನಡೆದು ತಿಂಗಳಾಗುತ್ತಾ ಬರುತ್ತಿದ್ದು ಸಚಿವರು ಚಂದ್ರಶೇಖರ್ ಮತ್ತು ದಾಮೋದರ್ ಮನೆಗೆ ಭೇಟಿಕೊಟ್ಟರು.

 

ಈ ಸಂದರ್ಭ ಕುಟುಂಬಸ್ಥರು ಮತ್ತು ಮೀನುಗಾರರು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಇಷ್ಟು ದಿನ ನೀವು ಎಲ್ಲಿ ಹೋಗಿದ್ರಿ.. ಈಗ ಯಾಕೆ ಬಂದ್ರಿ ಎಂದು ಪ್ರಶ್ನೆ ಮಾಡಿದ್ರು. ಸರಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದರೂ ಕುಟುಂಬಸ್ಥರು ಸಚಿವರ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು. ಮತ್ತಷ್ಟು ತೀವ್ರ ಹುಡುಕಾಟ ಮಾಡುವುದಾಗಿ ನಾಡಗೌಡ ಭರವಸೆ ನೀಡಿದರು. ರಾಜ್ಯ ಮತ್ತು ಕೇಂದ್ರ ಸರಕಾರದ ಮಟ್ಟದಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದೇವೆ. ಮಹರಾಷ್ಟ್ರ ಮತ್ತು ಗೋವಾದಲ್ಲಿ ನಮ್ಮ ಮೀನುಗಾರರು ಒತ್ತೆಯಾಳುಗಳಾಗಿದ್ದರೆ ಅಲ್ಲೂ ಹುಡುಕುವ ಪ್ರಯತ್ನ ಮಾಡುತ್ತೇವೆ ಎಂದರು. ಮೊಗವೀರ ಸಮುದಾಯ ದೇವರ ಮೊರೆ ಹೋಗಿದ್ದು ಗಮನಕ್ಕೆ ಬಂದಿದೆ. ದೈವದ ನುಡಿಯ ಪ್ರಕಾರ ಉತ್ತರ ಭಾಗದಲ್ಲೂ ಹುಡುಕಾಟ ನಡೆಸುತ್ತೇವೆ. ಎಲ್ಲಿದ್ದಾರೆ ಎಂಬ ಬಗ್ಗೆ ಒಂದು ಸೂಚನೆ ನೀಡಿದರೆ ಆ ಬಗ್ಗೆಯೂ ಕ್ರಮ ಕೈಗೊಳ್ಳುತ್ತೇವೆ ಎಂದು ಮೀನುಗಾರಿಕಾ ಸಚಿವರು ಭರವಸೆ ನೀಡಿದರು.

ನಾನು ಸಮುದ್ರಕ್ಕೆ ಹಾರುತ್ತೇನೆ ಎಂದು ಹೇಳಿಲ್ಲ.. ನಾನೂ ಸಮುದ್ರಕ್ಕೆ ಇಳಿಯಲು ಸಿದ್ಧ ಎಂದು ಹೇಳಿದ್ದೇನೆ. ಇಡೀ ಸರ್ಕಾರ ಮೀನುಗಾರರನ್ನು ಕಡೆಗಣನೆ ಮಾಡಿಲ್ಲ ಎಂದರು. ಡಿಸಿ ಎಸ್ಪಿ ಜೊತೆ ಸಂಪರ್ಕದಲ್ಲಿದ್ದೇನೆ ಎಂದರು. ಇಸ್ರೋ ಮತ್ತಿತರ ಬಾಹ್ಯಾಕಾಶ ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದೇವೆ. ಉತ್ತರಕನ್ನಡ ಜಿಲ್ಲೆಯ ಮೀನುಗಾರ ಸಮಸ್ಯೆ ತಿಳಿದಿದೆ. ಅವರ ಪರಿಸ್ಥಿತಿ ನೋಡಿ ಮೊದಲು ಒಂದು ಲಕ್ಷ ರುಪಾಯಿ ಪರಿಹಾರ ಕೊಟ್ಟಿದ್ದೇವೆ.ಅದನ್ನು ಅಪಾರ್ಥ ಮಾಡಿಕೊಳ್ಳಬಾರದು ಎಂದು ಹೇಳಿದರು.

Comments are closed.