ಕರಾವಳಿ

ಮಂಗಳೂರು : ವಿ ವಿ ಕಾಲೇಜಿನಲ್ಲಿ ಪಕ್ಷಿಗಳ ದಿನಾಚರಣೆ

Pinterest LinkedIn Tumblr

ಮಂಗಳೂರು ಜನವರಿ 06: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿಜ್ಞಾನ ಸಂಘ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಜನವರಿ 4ರಂದು ಪಕ್ಷಿಗಳ ದಿನಾಚರಣೆಯನ್ನು ಆಚರಿಸಲಾಯಿತು.

ಕಾಲೇಜು ಪ್ರಾಂಶುಪಾಲ ಡಾ. ಉದಯ್ ಕುಮಾರ್, ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವಿಜ್ಞಾನ ಸಂಘದ ಸಹ ನಿರ್ದೇಶಕ ಡಾ. ಸಿದ್ಧರಾಜು ಪಕ್ಷಿಗಳ ಅದ್ಭುತ ಜೀವನ ಶೈಲಿಯ ಕಿರುಚಿತ್ರ ತೋರಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಪಕ್ಷಿಗಳ ಬಗ್ಗೆ ಅರಿವು ಮೂಡಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕ ಸುಹಾಸ್ ಕೃಷ್ಣ ವಿವಿಧ ಪಕ್ಷಿಗಳನ್ನು ಪರಿಚಯಿಸಿ ಅವುಗಳ ವೈಶಿಷ್ಟ್ಯಗಳನ್ನು ವಿವರಿಸಿದರು.

ಕಾಲೇಜಿನ ವಿಜ್ಞಾನ ಸಂಘದ ವಿದ್ಯಾರ್ಥಿನಿ ಪೂಜಾ ಕಾರ್ಯಕ್ರಮ ಸ್ವಾಗತಿಸಿ ಪ್ರಾಣಿಶಾಸ್ತ್ರ ವಿಭಾಗದ ಡಾ. ನಾಗರತ್ನ ವಂದಿಸಿದರು.

Comments are closed.