ಕರಾವಳಿ

ಸುರತ್ಕಲ್‌ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಸೆರೆ – ಚಿನ್ನಾಭರಣ ಹಾಗೂ ವಾಹನ ವಶ

Pinterest LinkedIn Tumblr

ಮಂಗಳೂರು, ಜನವರಿ.06: ಸುರತ್ಕಲ್‌ನ ಮಧ್ಯ ಎಂಬಲ್ಲಿರುವ ಎನ್‌ಎಂಪಿಟಿ ಕಾಲನಿಯ ಮನೆಯೊಂದರಲ್ಲಿ ನಡೆದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದು, ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು ನಿವಾಸಿ ಅಬೂಬಕ್ಕರ್ ಯಾನೆ ಅಬ್ದುಲ್ ಖಾದರ್ ಯಾನೆ ಇತ್ತೆ ಬರ್ಪೆ ಅಬೂಬಕ್ಕರ್ ಬಂಧಿತ ಆರೋಪಿ.

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುರತ್ಕಲ್ ನ ಮಧ್ಯದ ಎನ್.ಎಂ.ಪಿ.ಟಿ ಕಾಲೋನಿಯ ನಿವಾಸಿ ಮೇಶ್ ಪೂಜಾರಿ ಎಂಬವರ ಮನೆಯಲ್ಲಿ ಮನೆಯ ಒಳ ಪ್ರವೇಶಿಸಿ ಮನೆಯ ಬೆಡ್ ರೂಮನಿನ ಕಪಾಟಿನಲ್ಲಿರಿಸಿದ ಸುಮಾರು 208 ಗ್ರಾಂ ತೂಕದ ವಿವಿಧ ರೀತಿಯ ಚಿನ್ನಾಭರಣಗಳನ್ನು ಹಾಗೂ ನಗದು ಹಣ ರೂ. 25,000 ವನ್ನು ಕಳ್ಳತನ ಮಾಡಿರುವ ಕುರಿತು ಸುರತ್ಕಲ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ಬಂಧಿತ ಆರೋಪಿಯಿಂದ ಕಳವುಗೈದ ಒಡವೆಗಳ ಪೈಕಿ ಒಟ್ಟು 121 ಗ್ರಾಂ ತೂಕದ ಸುಮಾರು 3,50,000 ರೂ. ಮೌಲ್ಯದ ಒಡವೆಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡ ಮತ್ತೊಬ್ಬ ಆರೋಪಿಯ ಪತ್ತೆಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿಯು 2017ನೇ ಸಾಲಿನಿಂದ ಮೂಡುಬಿದಿರೆ, ಬಜ್ಪೆ, ವೇಣೂರು, ಮುಲ್ಕಿ ಪೊಲೀಸ್ ಠಾಣೆ ಸರಹದ್ದಿನಲ್ಲಿ ಕೃತ್ಯವೆಸಗಿರುವ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರ ನಿರ್ದೇಶನದಂತೆ, ಪೊಲೀಸ್ ಉಪ- ಆಯುಕ್ತರು ( ಕಾ ಮತ್ತು ಸು) ಹಾಗೂ ಪೊಲೀಸ್ ಉಪ- ಆಯುಕ್ತರು ( ಅ ಮತ್ತು ಸ ) ರವರ ಮಾರ್ಗದರ್ಶನದಂತೆ , ಪಣಂಬೂರು ಉಪ- ವಿಭಾಗದ ಪ್ರಭಾರ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಮಂಜುನಾಥ್ ಶೆಟ್ಟಿ , ಪಣಂಬೂರು ಉಪ- ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶೀನಿವಾಸ್ ಗೌಡ ನವ ಅವರ ಮಾರ್ಗದರ್ಶನದಲ್ಲಿ ನಡೆದ ಪತ್ತೆಕಾರ್ಯದಲ್ಲಿ ಸುರತ್ಕಲ್ ಪೊಲೀಸ್ ನಿರೀಕ್ಷಕರಾದ ರಾಮಕೃಷ್ಣ ಕೆ ಜಿ ಪಣಂಬೂರು ರೌಡಿ ನಿಗ್ರಹ ಧಳ ಮತ್ತು ಸುರತ್ಕಲ್ ಪೊಲೀಸ್ ಠಾಣಾ ಸಿಬ್ಬಂದಿಗಳ ಭಾಗವಹಿಸಿದ್ದರು.

Comments are closed.