ಕರಾವಳಿ

ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ಇದರ 25ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ ಹಾಗೂ ಬೆಳ್ಳಿ ಹಬ್ಬ ಸಮಾರಂಭ

Pinterest LinkedIn Tumblr

ಮುಂಬಯಿ : ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡಿನ ಆಯ್ಯಪ್ಪ ಸ್ವಾಮಿಯ ಮಂಡಲ ಪೂಜಾ ಬೆಳ್ಳಿ ಹಬ್ಬದ ಸಂಭ್ರಮ. 25ನೇ ಹರೆಯಕ್ಕೆ ಕಾಲಿಸಿರಿದ ನವೋಲ್ಲಾಸದ ಸಡಗರ. ಹಾಗಾಗಿ ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ( ರಿ ), ಸಂಸ್ಥಾಪಕ ಶ್ರೀ ರಮೇಶ್ ಗುರುಸ್ವಾಮಿ , ಬೆಳ್ಳಿ ಹಬ್ಬದ ಉತ್ಸವ ಕಮಿಟಿಯ ಅಧ್ಯಕ್ಷ ಹಾಗೂ ಟ್ರಸ್ಟಿ ಯೂ ಆದ ಪತ್ರಕರ್ತ ದಿನೇಶ್ ಕುಲಾಲ್, ಶ್ರೀ ಅನ್ನಪೂರ್ಣಶ್ವರಿ ಮಹಿಳಾ ಮಂಡಳಿ, ಪಾರುಪತ್ಯಗಾರರು, ಮಧುಸೂದನ್ ಮಿಲ್ ಕಂಪೌಂಡಿನ ಸದಸ್ಯರು, ಸರ್ವ ಅಯ್ಯಪ್ಪ ಭಕ್ತರು, ದಾನಿಗಳ ಸಹಭಾಗಿತ್ವದಲ್ಲಿ ಇತ್ತೀಚಿಗೆ ಪ್ರಾತ :ಕಾಲ 5ಗಂಟೆಯಿಂದ ರಾತ್ರಿ 12ಗಂಟೆಯ ವರೆಗೂ ಎಡೆಬಿಡದ ಪೂಜಾ ಕಾರ್ಯಕ್ರಮಗಳು ನಡೆದವು.

ಬೆಳಿಗ್ಗೆ ಸ್ಥಳ ಶುದ್ಧೀಕರಣದ ಬಳಿಕ ಮೊದಲು ವಿನಾಯಕನಿಗೆ ಗಣ ಹೋಮ, ಅನಂತರ ಕಾರ್ಕಳದ ಶಾಸಕ ಸುನಿಲ್ ಕುಮಾರ್ ಅಪ್ಪಾಜಿ ಬೀಡಿನಿಂದ ಅಂದಿನ ಸಂಭ್ರಮ ನಡೆಯುವ ಕಾಮಗಾರ್ ಮೈದಾನದತ್ತ ವೈಭವದ ಮೆರವಣಿಗೆಯನ್ನು ಉದ್ಘಾಟಿಸಿದರು.

ಆನಂತರ 9.30ರಿಂದ ಕುಣಿತ, ಭಜನಾ ಸ್ಪರ್ಧೆ,11.30ರಿಂದ 1ರ ತನಕ ಅಂದಿನ ಮುಖ್ಯವಾದ ಪೂಜೆ ಶ್ರೀ ಅಯ್ಯಪ್ಪ ಸ್ವಾಮಿಯ ಮಂಡಲ ಪೂಜೆ. ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ . 1ರಿಂದ 2ರ ವರೆಗೆ ನಗರದ ಸುಮಧುರ ಗಾಯಕ-ಗಣೇಶ್ ಎರ್ಮಾಳ್ ಹಾಗೂ ಸೆಕ್ಸೋ ಫೋನ್ ವಾದಕ ಶ್ರೀ ದಿನೇಶ್ ಕೋಟ್ಯಾನ್ ರಿಂದ ಸಂಗೀತ ಮನೋರಂಜನೆ (ಭಕ್ತಿ ಲಹರಿ)ನಡೆಯಿತು.

ಮಧ್ಯಾಹ್ನ ಪೂಜ್ಯ ಶ್ರೀ ಈಶ ವಿಠಲದಾಸ ಸ್ವಾಮಿಜೀಯವರಿಂದ ನಂತರ ಕುಣಿತ ಹಾಗೂ ಭಜನೆ ಸಂಜೆ 4ರಿಂದ 6.30ರ ವರೆಗೆ ಧಾರ್ಮಿಕ ಸಭೆ, ಸಂಜೆ –ದೀಪೋತ್ಸವ, ಅನಂತರ ಸಾಂಸ್ಕ್ರುತಿಕ ಕಾರ್ಯ ಕ್ರಮ “ನಗು ನಗುತ ನಲಿ ನಲಿ” ಕನ್ನಡ -ತುಳು ಹೆಸರಾಂತ ಕಲಾವಿದರಿಂದ ಹಾಸ್ಯ ಪ್ರಹಸನ ರಾತ್ರಿ 10.30 ಕ್ಕೆ ಮಹಾ ಮಂಗಳಾರತಿ ಹಾಗೂ ಹರಿವರ್ಷನಮ್.

ಶ್ರೀ ಅಪ್ಪಾಜಿ ಬೀಡು ಪೌಂಡೇಶನಿನ ಸ್ಥಾಪಕರಾದ, ರಮೇಶ ಗುರುಸ್ವಾಮಿ ಯವರ ಉಪಸ್ಥಿತಿಯಲ್ಲಿ ಅಂದಿನ ಕಾರ್ಯಕ್ರಮಗಳ ಉದ್ಘಾಟನೆಯಾಗಿದ್ದು ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನ, ಮುಂಬಯಿ ಸ್ಥಾಪಕರಾದ ವಿದ್ವಾನ್ ವಿಶ್ವನಾಥ ಭಟ್, ಮುಂಬಯಿ ಜ್ಯೋತಿಷ್ಯ, ಪುರೋಹಿತ ಸಾತ್ ರಸ್ತ ಅಕ್ಷಯ ತಂತ್ರಿ, , ಮಲಾಡ್ ಶ್ರೀ ಮೂಕಾಂಭಿಕ ದೇವಸ್ಥಾನದ ವೇದಾನಂದ ಸ್ವಾಮೀಜಿ, ವಾಸ್ತು ತಜ್ನ, ಜ್ಯೋತಿಷ್ಯ ಅಶೋಕ ಪುರೋಹಿತ್, ಸಂತಾಕ್ರೂಸ್ ಶ್ರೀ ಮಂತ್ರದೇವಿ ಚಾರಿಟೇಬಲ್ ಟ್ರಷ್ಟನ ಮೆನೆಜಿಂಗ್ ಟ್ರಷ್ಟಿ ವಾಸುದೇವ ಬಂಜನ್, ಇವರು ಉಪಸ್ಥಿತರಿದ್ದರು.

ಮಧ್ಯಾಹ್ನದ ಸತ್ಸಂಗ ಸಮಾರಂಭದಲ್ಲಿ ಕೇಮಾರು ಸಂದೀಪನಿ ಸಾದನ ಆಶ್ರಮದ ಶ್ರೀ ಈಶ ವಿಠಲ ದಾಸ ಸ್ವಾಮೀಜಿ ಯವರು ಆಶೀರ್ವಚನ ಮಾಡಿದರು.

ಗೌರವ ಅಥಿತಿಗಳಾಗಿ, ಬೋಂಬೆ ಬಂಟ್ಸ ಅಸೋಷಿಯೇಶನಿನ ಅಧ್ಯಕ್ಷ ನ್ಯಾ. ಸುಭಾಶ್ ಶೆಟ್ಟಿ, ಟ್ರಿಕೋನ್ ಪೋಲಿಮರ್ಸ್ ನ ಸಿ.ಎಂ.ಡಿ. ಅನಿಲ್ ಶೆಟ್ಟಿ ಎಳಿಂಜೆ, ಬಂಟ್ಸ್ ಸಂಘ ಮುಂಬಯಿ ಸಿಟಿ ರೀಜಿಯನ್ ನ ಕಾರ್ಯಾಧ್ಯಕ್ಷ ಪ್ರಕಾಶ್ ಶೆಟ್ಟಿ ನಲ್ಯಗುತ್ತು, ಥಾಣೆ ಧೀರಜ್ ಹೋಟೇಲಿನ ಕಡಂದಲೆ ಪರಾರಿ ಶೇಖರ ಎಲ್. ಶೆಟ್ಟಿ, ಮೀರಾ-ದಹಾಣು ಬಂಟ್ಸ ನ ಟ್ರಷ್ಟಿ ಸುರೇಶ್ ಶೆಟ್ಟಿ ಗಂಧರ್ವ, ಬಂಟರ ಸಂಘ ವಸಯಿ-ದಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ ಪಕ್ಕಳ, ಸಾಯನ್ ಎಸ್. ವಿ. ಎಂಟರ್ ಪ್ರೈಸಸ್ ನ ನಿರ್ದೇಶಕ ಮಧುಕರ್ ಬೋಸ್ಲೆ , ಬಂಟರ ಸಂಘ ಮುಂಬಯಿ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಗದೀಶ ಶೆಟ್ಟಿ ನಂದಿಕೂರು, , ಮುಂಬಯಿ ಅಜಂತಾ ಕ್ಯಾಟರರ್ಸ್ ನ ಜಯರಾಮ ಶೆಟ್ಟಿ ಇನ್ನ, ಹೋಟೇಲು ಪ್ರಿಯದ ಯಶವಂತ ಶೆಟ್ಟಿ ಬನ್ನಂಜೆ, ಕುಲಾಲ ಸಂಘ ಮುಂಡ್ಕೂರ್ ನ ಗೌರವ ಅಧ್ಯಕ್ಷ ಐತು ಮೂಲ್ಯ ಮುಂಡ್ಕೂರ್, ಸಾಕೀನಾಕ ಬ್ರಮರಿ ದೇವಸ್ಥಾನದ ಗೌರವ ಅಧ್ಯಕ್ಷ ಕೃಷ್ಣ ಶೆಟ್ಟಿ. ಬಿಲ್ಲವ ಚೇಂಬರ್ ಆಫ್ ಕಾಮರ್ಸ ನ ನಿರ್ದೇಶಕ ಗಂಗಾಧರ ಅಮೀನ್ ಕರ್ನಿರೆ, ಸತೀಶ್ ಶೆಟ್ಟಿ ಪೂನಾ, ಕರ್ನಾಟಕ ಮಲ್ಲದ ದಾಮೋದರ ಪೂಜಾರಿ ಬಂಟ್ವಾಳ್, ಜ್ಯೋತಿ ಕ್ರೇಡಿಟ್ ಸೊಸೈಟಿಯ ಅಧ್ಯಕ್ಷ ಗಿರೀಶ್ ಸಾಲ್ಯಾನ್, ಶ್ರೀದೇವಿ ಪ್ರಿಂಟರ್ಸ್ ನ ಪ್ರಸನ್ನ ಶೆಟ್ಟಿ ಕುರ್ಕಾಲ್, ಅಣ್ಣಿ ಶೆಟ್ಟಿ, ಸಾಧು ಶೆಟ್ಟಿ, ಎಣ್ಣೆಹೊಳೆ, ವಸಾಯಿ ಅಶೋಕ ಇಂಡಷ್ಟೀಸ್ ನ ಅಶೋಕ್ ಶೆಟ್ಟಿ. ಕುಲಾಲ ಪ್ರತಿಷ್ಥಾನದ ಅಧ್ಯಕ್ಷ ಸುರೇಶ್ ಕುಲಾಲ್, ವರ್ಲಿ ಹೋಟೇಲು ಕಲ್ಪನಾದ ಶ್ರೀಮತಿ ಸುಜಯ ಆರ್ ಶೆಟ್ಟಿ, ರವೀಂದ್ರ ಪೂಂಜಾ, ಬಿಲ್ಲವರ ಅಸೋಷಿಯೇಶನ್ ಮಲಾಡ್ ಸ್ಥಳೀಯ ಸಮಿತಿಯ ಉಪಕಾರ್ಯಾಧ್ಯಕ್ಷ ಶೇಖರ ಪೂಜಾರಿ, ಗಜಾನನ ಭಂಡಾರಿ, ಕುಲಾಲ ಸಂಘ ಮುಂಬಯಿಯ ಉಪಾಧ್ಯಕ್ಷ ರಘು ಮೂಲ್ಯ, ಬಂಟರ ಸಂಘ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ, ಕಲಾಪ್ರಕಾಶ ಪ್ರತಿಷ್ಥಾನ ಮುಂಬಯಿಯ ಪ್ರಕಾಶ್ ಎಂ ಶೆಟ್ಟಿ, ಶ್ರೀ ಮದ್ಭಾರತ ಮಂಡಳಿಯ ಅಧ್ಯಕ್ಷರಾದ ಜಗನ್ನಾಥ ಪುತ್ರನ್ ಆಗಮಿಸಿದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ದಿನೇಶ್ ಶೆಟ್ಟಿ ಅಪ್ಪಾಜಿ ಬೀಡು, ವಿಜಯ್ ಕೆ ಶೆಟ್ಟಿ ಸಹರ್ ಗಾಂವ್ ಮತ್ತು ಮಂಜುನಾಥ ಶೆಟ್ಟಿ ರೇ ರೋಡ್ ಇವರನ್ನು ಈ ಸಂಧರ್ಭದಲ್ಲಿ ಗೌರವಿಸಲಾಯಿತು. ದಿನೇಶ್ ಕುಲಾಲ್, ರಘುನಾಥ ಎನ್. ಶೆಟ್ಟಿ, ಅರ್ಪಿತಾ ಶೆಟ್ಟಿ, ಶಶಿಕಲಾ ಶೆಟ್ಟಿ, ಶಕುಂತಳ ಶೆಟ್ಟಿ ಅತ್ತು ಪ್ರಮೀಳಾ ವಿ. ಕುಲಾಲ್ ಕಾರ್ಯಕ್ರಮವನ್ನು ನಿರ್ವಹಿಸಿದರು.

ಅಪರಾಹ್ನ ಧಾರ್ಮಿಕ ಸಭೆಯಲ್ಲಿ ಒಡಿಯೂರಿನಿ ಶೀ ಗುರುದೇವಾನಂದ ಸ್ವಾಮೀಜಿಯವರು ಆಶ್ರೀರ್ವಚನ ಮಾಡಿದರು.

ಸಮಾರಂಭದಲ್ಲಿ ಗೌರವ ಅಥಿತಿಗಳಾಗಿ ಪೊವಾಯಿಯ ಶ್ರೀ ರುಂಡಮಾಲಿನ ದೇವಸ್ಥಾನದ ಶ್ರೀ ಸುವರ್ಣ ಬಾಬ, ಜನಪ್ರಿಯ ಜ್ಯೋತಿಷ್ಯ ಹಾಗೂ ಪುರೋಹಿತರಾದ ಡಾ. ಎಂ. ಜೆ. ಪ್ರವೀಣ್ ಭಟ್, ಜಾಗತಿಕ ಬಂಟ್ಸ ಅಸೋಷಿಯೇಶನ್ ಪೆಡರೇಶನ್ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ, ವಿಕೆ ಸಮೂಹ ಸಂಸ್ಥೆಯ ಸಿಎಂಡಿ ಕರುಣಾಕರ ಎಂ ಶೆಟ್ಟಿ, ಹೋಟೇಲ್ ಕೃಷ್ಣ ಪ್ಯಾಲೇಸ್ ನ ಸಿಎಂಡಿ ಕೃಷ್ಣ ವೈ ಶೆಟ್ಟಿ, ಕ್ಲಾಸಿ ಗ್ರೂಪ್ ಹೋಟೇಲಿನ ಸಿಎಂಡಿ ಸುರೇಶ್ ಕಾಂಚನ್, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಶೆಟ್ಟಿ, ಬಂಟ್ಸ ಸಂಘ ಪಡುಬಿದ್ರೆಯ ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ ಪಡುಬಿದ್ರೆ, ಮಹೇಶ್ ಶೆಟ್ಟಿ ತೆಲ್ಲಾರ್, ಬಂಟರ ಸಂಘ ಮುಂಬಯಿ ಸೋಶಿಯಲ್ ವೆಲ್ಪೇರ್ ಸಮಿತಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿ , ಮುಳೂಂಡ್ ಬಂಟ್ಸ ನ ಉಪಾಧ್ಯಕ್ಷ ವಸಂತ ಪಾಲಿಮಾರ್, ಪುಣೆ ಬಂಟ್ಸ್ ಸಂಘದ ಅಧ್ಯಕ್ಷ ಇನ್ನ ಕುರ್ಕಿಬೆಟ್ಟು ಸಂತೋಶ್ ಶೆಟ್ಟಿ, ಗ್ಯಾನ ಮಂದಿರ ಬಂಟ್ಸ್ ಸಂಘದ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಷ್ಟ ನ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ, ಅಡ್ವೆ ಕಾಂತಲಗುಟ್ಟು ಸುಧಾಕರ ವೈ ಶೆಟ್ಟಿ, ವಿರಾರ್ ಹೋಟೇಲು ಎಂ. ಎಂ. ನ ಹರೀಶ್ ಶೆಟ್ಟಿ ಗುರ್ಮೆ, ಬೋಂಬೆ ಬಂಟ್ಸ್ ಅಸೋಷಿಯೇಶನಿನ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಕೆ. ಶೆಟ್ಟಿ, ಪ್ರಭಾದೇವಿ ಹೋಟೇಲು ಸಾರತಿ ಯ ದೀಪಕ್ ರಾಮದೇವ್ ತ್ಯಾಗಿ, ಭಾರತ್ ಬ್ಯಾಂಕಿನ ನಿರ್ದೇಶಕ ಗಂಗಾಧರ ಜೆ. ಪೂಜಾರಿ, ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ ಎಲ್ ಕುಲಾಲ್, ಪುಣೆ ಶ್ರೀ ಅಸ್ಥವಿನಾಯಕ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಮಿರಾ ದಹಾಣು ಬಂಟ್ಸ ವಸಾಯಿ-ನಾಯಗಾಂವ್ ಪ್ರಾದೆಶಿಕ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ ಕೆ, ಶೆಟ್ಟಿ, , ಮಂಗಳೂರು ಶ್ರೀ ವೀರ ನಾರಾಯಣ ದೇವಸ್ಥಾನದ ಕಾರ್ಯಾಧ್ಯಕ್ಷ ಬಿ. ಪ್ರೇಮಾನಂದ ಕುಲಾಲ್, ಗುರುಪ್ರಸಾದ್ ಭಟ್, ಗಣೇಶ್ ಶೆಟ್ಟಿ ತೆಲ್ಲಾರ್, ರವಿ ದೇವಾಡಿಗ, ಇವರನ್ನು ಒಡಿಯೂರು ಶ್ರೀ ಗಳು ಸನ್ಮಾನಿಸಿದರು.

ವೇದಿಕೆಯಲ್ಲಿ ಮದನ್ ಹರಿಣಿ (ಚಲನ ಚಿತ್ರ ಕೋರಿಯೋಗ್ರಾಫರ್), ಕರ್ನಿರೆ ವಿಶ್ವನಾಥ ಶೆಟ್ಟಿ (ಟ್ರಷ್ಟಿ, ಬಂಟರ ಸಂಘ ಮುಂಬಯಿ), ಶಶಿಧರ ಕೆ. ಶೆಟ್ಟಿ (ಬಂಟರ ಸಂಘ ಮುಂಬಯಿ ವಸಯಿ-ದಹಾಣು ಪ್ರಾದೇಶಿಕ ಸಮಿತಿಯ ಸಂಚಾಲಕರು), ಗಿರೀಶ್ ಶೆಟ್ಟಿ ತೆಲ್ಲಾರ್ (ಬಂಟರ ಸಂಘ ಮುಂಬಯಿ ಮೀರಾ-ಬಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರು), ಸುರೇಶ್ ಭಂಡಾರಿ ಕಡಂದಲೆ (ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಟ್ರಷ್ಟಿ), ಸತಿಶ್ ಗುರುಸ್ವಾಮಿ (ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ, ರೇ ರೋಡ್), ಪ್ರೇಮನಾಥ ಸಾಲ್ಯಾನ್ (ಆಡಳಿತ ನಿರ್ದೇಶಕ, ಅಬ್ಯುದಯ ಬ್ಯಾಂಕ್), ಮೋಹನ ಪೂಜಾರಿ (ಸಿಎಂಡಿ, ವೈಷ್ನವಿ ಅಸೋಶಿಯೇಟ್ಸ ಮುಂಬಯಿ), ಸುನಿಲ್ ಶೆಟ್ಟಿ ದುಬಾಯಿ, ಗುಲಾಬಿ (ಬೈಲುಮನೆ, ಮುದ್ರಾಡಿ) ಮೊದಲಾದವರು ಉಪಸ್ಥಿತರಿದ್ದು ಸನ್ಮಾನ ಸ್ವೀಕರಿಸಿದರು.

ವೇದಿಕೆಯಲ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ನ ಸ್ಥಾಪಕ ರಮೇಶ್ ಗುರುಸ್ವಾಮಿ, ಟ್ರಷ್ಟಿಗಳಾದ ಶ್ರೀಮತಿ ಶಾಂಭವಿ ಆರ್. ಶೆಟ್ಟಿ, ರತ್ನಾಕರ ಜಿ. ಶೆಟ್ಟಿ, ರಘುನಾಥ ಎನ್. ಶೆಟ್ಟಿ, ಸುಧಾಕರ್ ಎನ್. ಶೆಟ್ಟಿ, ಪುಷ್ಪರಾಜ್ ಎಸ್. ಶೆಟ್ಟಿ, ರತ್ನಾಕರ್ ಆರ್. ಶೆಟ್ಟಿ, ಮೊಹನ್ ಟಿ. ಚೌಟ, ಟ್ರಷ್ಟಿ ಹಾಗೂ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಬಿ. ದಿನೇಶ್ ಜಿ. ಕುಲಾಲ್ ಕಾರ್ಯಾಕಾರಿ ಸಮಿತಿಯ ಅಧ್ಯಕ್ಷ ಸುರೇಶ್ ಎಸ್. ಶೆಟ್ಟಿ ಕೇದಗೆ, ಟ್ರಷ್ಟಿ, ಪ್ರಧಾನ ಕಾರ್ಯದರ್ಶಿ ವಸಂತ ಕೆ. ಪೂಜಾರಿ, ಕೋಶಾಧಿಕಾರಿ ಹರೀಶ್ ಶೆಟ್ಟಿ ನಲ್ಲೂರು, ಉಪಾಧ್ಯಕ್ಷರಾದ ಸಂತೋಶ್ ವಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಅಪ್ಪಾಜಿ ಬೀಡು ಪೌಂಡೇಶನ್ ನ ಕಾರ್ಯಾಕಾರಿ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಬೆಳ್ಳಿ ಹಬ್ಬ ಸಮಿತಿಯ ಎಲ್ಲಾ ಸದಸ್ಯರು, ಮಹಿಳಾ ವಿಭಾಗದ ಎಲ್ಲಾ ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಕಾರ್ಯಕ್ರಮದ ಯಸ್ಸಸ್ಸಿಗೆ ಸಹಕರಿಸಿದರು.

ವರದಿ : ಈಶ್ವರ ಎಂ. ಐಲ್

Comments are closed.