ಕರಾವಳಿ

ಪಡೀಲ್-ಶಾಂತಿನಗರ ರಸ್ತೆ ಕಾಂಕ್ರೀಟಿಕರಣಕ್ಕೆ ಶಾಸಕ ಕಾಮತ್ ಚಾಲನೆ

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 51 ನೇ ಅಳಪೆ ಉತ್ತರ ವಾರ್ಡಿನ ಪಡೀಲ್ ಶಾಂತಿ ನಗರದಲ್ಲಿ ರಸ್ತೆ ಕಾಂಕ್ರೀಟಿಕರಣಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಈ ಬಗ್ಗೆ ಮಾತನಾಡಿದ ಶಾಸಕರು, ಪಡೀಲ್-ಶಾಂತಿ ನಗರದ ಈ ರಸ್ತೆಯನ್ನು 9.80 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣ ಮಾಡಲಾಗುವುದು. ತಕ್ಷಣ ಕಾಮಗಾರಿ ಆರಂಭಿಸಲು ಸೂಚನೆ ನೀಡಿದ್ದೇನೆ. ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು ಎಂದು ತಿಳಿಸಿದ್ದೇನೆ. ಇದು ಈ ಭಾಗದ ಮುಖ್ಯರಸ್ತೆಯಾಗಿರುವುದರಿಂದ ಕೆಲವು ಸಮಯ ಈ ಭಾಗದಲ್ಲಿ ವಾಹನ ಓಡಾಟಕ್ಕೆ ಕಷ್ಟವಾಗಬಹುದು. ಅದಕ್ಕೆ ಜನರು ಸಹಕರಿಸಬೇಕು ಎಂದು ಹೇಳಿದರು.

ಶಾಸಕರೊಂದಿಗೆ ಮನಪಾ ಸದಸ್ಯ ವಿಜಯಕುಮಾರ್ ಶೆಟ್ಟಿ, ಡಾ|ರಾಮಕೃಷ್ಣ, ಸ್ಥಳೀಯ ಬಿಜೆಪಿ ಮುಖಂಡರಾದ ವಿಜಯ ಪಡೀಲ್, ಲಕ್ಷ್ಮಣ ನಾಯ್ಕ್, ಅಕ್ಷಯ ಗರೋಡಿ, ಸಂಜೀವ್ ಗರೋಡಿ, ಪ್ರವೀಣ್ ಶೆಟ್ಟಿ, ಗೀತಾ ಶೆಟ್ಟಿ, ಗಾಯತ್ರಿ, ಸರಿತಾ ಮತ್ತಿತರರು ಉಪಸ್ಥಿತರಿದ್ದರು.

Comments are closed.