ಕರಾವಳಿ

ತುಪ್ಪಕ್ಕೆ ಹಲವು ರೋಗಗಳನ್ನು ಹೋಗಲಾಡಿಸುವ ಗುಣಯಿದೆ…ನಿಜಾನಾ?

Pinterest LinkedIn Tumblr

ಹೌದು ತುಪ್ಪ ಅನ್ನೋದು ಮಾನವನ ದೇಹಕ್ಕೆ ಹೆಚ್ಚು ಪೌಷ್ಟಿಕ ಅಂಶವನ್ನು ಒದಗಿಸುತ್ತದೆ ಮತ್ತು ಇದರಿಂದ ಹಲವಾರು ರೋಗಗಳಿಗೆ ಮುಕ್ತಿ ಸಿಗುತ್ತದೆ. ಯಾವ ರೀತಿಯಲ್ಲಿ ನೀವು ತುಪ್ಪದಿಂದ ನಿಮ್ಮ ರೋಗಗಳನ್ನು ಹೋಗಲಾಡಿಸಬಹುದು ಅಂನ್ನೋದು ಇಲ್ಲಿದೆ ನೋಡಿ.

ರಾತ್ರಿ ಮಲಗುವ ಮುನ್ನ 2 ಚಮಚ ತುಪ್ಪ ಸೇವಿಸಿ ಬಿಸಿ ಹಾಲು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ತುಪ್ಪದಲ್ಲಿರುವ ಗುಣಗಳು ಕರುಳಿನ ಆರೋಗ್ಯವನ್ನು ಕಾಪಾಡಿ ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಸಹಾಯ ಮಾಡುತ್ತದೆ.

ತುಪ್ಪದಲ್ಲಿ ಅಗತ್ಯ ಪ್ರಮಾಣದ ಅಮಿನೋ ಆ್ಯಸಿಡ್​ ಅಂಶವಿದೆ. ಇದು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ನಿತ್ಯ ಒಂದು ಚಮಚ ಮನೆಯಲ್ಲೇ ತಯಾರಿಸಿದ ತುಪ್ಪವನ್ನು ಆಹಾರದ ಜೊತೆ ಸೇವಿಸುವುದರಿಂದ ತೂಕ ಇಳಿಸಲು ಸಹಾಯ ಮಾಡುತ್ತದೆ.

ಚಳಿಗಾಲದ ಸಮಯದಲ್ಲಿ ತುಟಿ ಡ್ರೈ ಆಗಿ ಸೀಳುವುದು ಸಾಮಾನ್ಯ. ಆದರೆ ಇದಕ್ಕೆ ಉತ್ತಮ ಪರಿಹಾರ ಕಂಡುಕೊಳ್ಳುವುದು ಅಗತ್ಯ. ಮಲಗುವ ಮುನ್ನ ಸ್ವಲ್ಪ ತುಪ್ಪವನ್ನು ಬಿಸಿ ಮಾಡಿ ತುಟಿಗೆ ಹಚ್ಚಿ ಮಲಗಿ, ಇದರಿಂದ ತುಟಿ ಸಾಫ್ಟ್​ ಆಗುತ್ತದೆ.

Comments are closed.