ಕರಾವಳಿ

ಮಲ್ಪೆಯಿಂದ ಡಿ.13ಕ್ಕೆ ಮೀನುಗಾರಿಕೆ ತೆರಳಿದ್ದ 8 ಮಂದಿ ಮೀನುಗಾರರು ನಾಪತ್ತೆ

Pinterest LinkedIn Tumblr

ಉಡುಪಿ: ಕಳೆದ ಎಂಟು ದಿನಗಳ ಹಿಂದೆ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ 8 ಮಂದಿ ಮೀನುಗಾರರು ನಾಪತ್ತೆಯಾಗಿದ್ದು, ಕರಾವಳಿ ಕಾವಲು ಪಡೆಯಿಂದ ಕಾರ್ಯಾಚರಣೆ ನಡೆಯುತ್ತಿದೆ.

(ಸಾಂದರ್ಭಿಕ ಚಿತ್ರ)

ಸುವರ್ಣ ತ್ರಿಭುಜ ಎಂಬ ಹೆಸರಿನ ಬೋಟ್ ಮೂಲಕ ಡಿ.13 ರಂದು ರಾತ್ರಿ 11 ಗಂಟೆಗೆ ಮೀನುಗಾರಿಕೆಗೆ ತೆರಳಿದ್ದ ಚಂದ್ರಶೇಖರ, ದಾಮೋದರ, ಲಕ್ಷ್ಮಣ್, ಸತೀಶ್, ರವಿ, ಹರೀಶ್, ರಮೇಶ್, ಜೋಗಯ್ಯ ಮೀನುಗಾರರು ಬೋಟ್ ಸಮೇತ ನಾಪತ್ತೆಯಾಗಿದ್ದಾರೆ. ಈ ಪೈಕಿ ಚಂದ್ರಶೇಖರ್ ಬೋಟ್ ಮಾಲಕರು ಎನ್ನಲಾಗುತ್ತಿದೆ. ಡಿ.15 ರಾತ್ರಿಯವರೆಗೆ ಸಂಪರ್ಕದಲ್ಲಿದ್ದವರು. ಆದರೆ ಆ ಬಳಿಕ ಬೋಟ್‍ನಲ್ಲಿದ್ದ ಜಿಪಿಎಸ್ ಸಂಪರ್ಕವೂ ಕಳೆದುಕೊಂಡಿದ್ದು ಯಾವುದೇ ಸಂಪರ್ಕ ಸಾಧ್ಯವಾಗುತ್ತಿಲ್ಲ.

ನಾಪತ್ತೆ ಆಗಿರುವ ಮೀನುಗಾರರ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Comments are closed.