ಕರಾವಳಿ

ಯುಎಸ್ ಮಲ್ಯ ಪ್ರಶಸ್ತಿ ಘೋಷಣೆಗೆ ನಿರ್ಲಕ್ಷ್ಯ ವಹಿಸಿದ ಪಾಲಿಕೆ ಕ್ಷಮೆಯಾಚಿಸಲಿ : ಶಾಸಕ ಕಾಮತ್

Pinterest LinkedIn Tumblr

ಮಂಗಳೂರು : ಆಧುನಿಕ ಮಂಗಳೂರಿಗೆ ಭದ್ರ ಬುನಾದಿ ಹಾಕಿದ, ಮಂಗಳೂರು ವಿಮಾನ ನಿಲ್ದಾಣ, ಬಂದರು, ರಾಷ್ಟ್ರೀಯ ಹೆದ್ದಾರಿ, ರಸಗೊಬ್ಬರ ಕಾರ್ಖಾನೆಯಂತಹ ಯೋಜನೆಗಳನ್ನು ಮಂಗಳೂರಿಗೆ ತಂದಂತಹ, ಮಾದರಿ ಸಂಸದರಾಗಿದ್ದ ಉಳ್ಳಾಲ್ ಶ್ರೀನಿವಾಸ ಮಲ್ಯರ ಹೆಸರಿನಲ್ಲಿ ಕೊಡಲಾಗುತ್ತಿದ್ದ ಪ್ರಶಸ್ತಿಯನ್ನು ಈ ಬಾರಿ ಕೊಡಲು ಮರೆತಿರುವುದು ಮಂಗಳೂರು ಮಹಾನಗರ ಪಾಲಿಕೆಯ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಮಂಗಳೂರಿನ ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆಗೈದಿರುವ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿರುವ ಮನಪಾ ಕಳೆದ ಐದು ವರ್ಷಗಳಲ್ಲಿ ಕೇವಲ ಸುಳ್ಳು ಪ್ರಚಾರ ಮಾಡಿರುವುದನ್ನು ಬಿಟ್ಟರೆ ಬೇರೆ ಏನೂ ಮಾಡಿಲ್ಲ. ಅದರಲ್ಲಿಯೂ ಯು.ಎಸ್.ಮಲ್ಯ ಪ್ರಶಸ್ತಿ ಘೋಷಣೆಯನ್ನು ಕೂಡ ಮರೆತಿರುವುದು ಕಾಂಗ್ರೆಸ್ ಪಕ್ಷ ಪಾಲಿಕೆಯಲ್ಲಿ ನಿದ್ರೆಯಲ್ಲಿದೆ ಎನ್ನುವುದಕ್ಕೆ ಬೇರೆ ಉದಾಹರಣೆ ಬೇಕಿಲ್ಲ ಎಂದು ಶಾಸಕ ಕಾಮತ್ ಹೇಳಿದರು.

Comments are closed.