ಕರಾವಳಿ

ಹೃದಯ ಸಂಬಂಧಿ ಸಮಸ್ಯೆ ದೂರವಾಗಲು ಅಶ್ವತ್ಥ ಎಲೆಯ ಕಷಾಯ ಉತ್ತಮ

Pinterest LinkedIn Tumblr

ಅಶ್ವತ್ಥ ಎಲೆಯನ್ನು ಹಾಲಿನಲ್ಲಿ ಹಾಕಿ ಕುದಿಸಿ ಸಕ್ಕರೆ ಹಾಕಿ ಬೆಳಗ್ಗೆ ಮತ್ತು ರಾತ್ರಿ ಕುಡಿದರೆ ಶೀತ -ಕೆಮ್ಮು ನಿವಾರಣೆಯಾಗುತ್ತದೆ. ಅಶ್ವತ್ಥ ಎಲೆಯ ರಸಕ್ಕೆ ಸಕ್ಕರೆ ಹಾಕಿ ಕುಡಿದರೆ ಕಾಮಾಲೆ ಕಾಯಿಲೆಗೆ ಒಳ್ಳೆಯದು.

ಅಶ್ವತ್ಥ ಮರದ ತೊಗಟೆಯನ್ನು ಪುಡಿ ಮಾಡಿ ಹಲ್ಲು ಉಜ್ಜುವುದರಿಂದ ಹಲ್ಲುಗಳು ಸ್ಟ್ರಾಂಗ್‌ ಆಗುತ್ತವೆ. ಜತೆಗೆ ಹೊಳಪು ಕೂಡ ಬರುತ್ತದೆ. ಅಷ್ಟೇ ಅಲ್ಲ ಹಲ್ಲು ನೋವು ಸಹ ನಿವಾರಣೆಯಾಗುತ್ತದೆ.

ಸುಮಾರು ಹತ್ತು ಅಶ್ವತ್ಥ ಎಲೆಗಳನ್ನು ಎರಡು ಗ್ಲಾಸ್‌ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ಅದನ್ನು ಒಂದು ಗ್ಲಾಸ್‌ ನೀರಿಗೆ ಬತ್ತಿಸಬೇಕು. ಈ ಕಷಾಯವನ್ನು ತಣಿಸಿ ಕುಡಿಯಬೇಕು. ಇದರಿಂದ ಹೃದಯ ಸಂಬಂಧಿ ಸಮಸ್ಯೆ ದೂರವಾಗುತ್ತದೆ.

ಅಶ್ವತ್ಥ ಮರದ ತೊಗಟೆಯನ್ನು ಒಣಗಿಸಬೇಕು. ಚೆನ್ನಾಗಿ ಒಣಗಿದ ನಂತರ ಅದನ್ನು ಪುಡಿ ಮಾಡಬೇಕು. ಈ ಪುಡಿಯನ್ನು ನೀರಿಗೆ ಹಾಕಿ ಕುಡಿಯುವುದರಿಂದ ಅಸ್ತಮಾ ನಿವಾರಣೆಯಾಗುತ್ತದೆ

Comments are closed.