ಕರಾವಳಿ

ಮಂಗಳೂರಿನಲ್ಲಿ ನಿರ್ಮಾಣವಾಗಲಿದೆ 2.10 ಕೋಟಿ ವೆಚ್ಚದ ಪಶುವೈದ್ಯ ಪಾಲಿಕ್ಲಿನಿಕ್ : ಶಾಸಕ ಕಾಮತ್

Pinterest LinkedIn Tumblr

ಮಂಗಳೂರು : ಅಂದಾಜು ರೂ 2.10 ಕೋಟಿ ವೆಚ್ಚದಲ್ಲಿ ಮಂಗಳೂರಿನಲ್ಲಿ ಪಶುವೈದ್ಯ ಪಾಲಿಕ್ಲಿನಿಕ್ ನಿರ್ಮಿಸುವ ಕಾಮಗಾರಿಯನ್ನು ಕೈಗೊಳ್ಳಲು ಕರ್ನಾಟಕ ಗೃಹ ಮಂಡಳಿ ಇವರಿಗೆ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಮಂಗಳೂರು ನಗರ ದಕ್ಷಿಣದಲ್ಲಿ ಹೊಸ ಪಶುವೈದ್ಯ ಪಾಲಿಕ್ಲಿನಿಕ್ ತೆರೆಯಲಾಗುತ್ತದೆ. ಪಾಲಿಕ್ಲಿನಿಕ್ ನಲ್ಲಿ ಜಾನುವಾರುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಉಪ ನಿರ್ದೇಶಕರು, ಮುಖ್ಯ ಪಶುವೈದ್ಯಾಧಿಕಾರಿ, ತಜ್ಞ ಪಶುವೈದ್ಯರು, ಎಕ್ಸ್-ರೇ ಟೆಕ್ನೀಷಿಯನ್, ಪ್ರಥಮ ದರ್ಜೆ ಸಹಾಯಕರು, ಡಿ ದರ್ಜೆ ನೌಕರರ ಹುದ್ದೆ ಮಂಜೂರಾಗಿರುತ್ತದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಪಾಲಿಕ್ಲಿನಿಕ್ ನಲ್ಲಿ ಬರುವ ಜಾನುವಾರುಗಳಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಎಕ್ಸ್ ರೇ ಸೌಲಭ್ಯ, ಸ್ಕ್ಯಾನಿಂಗ್ ಸೌಲಭ್ಯವನ್ನು ಒದಗಿಸಲಾಗಿರುತ್ತದೆ. ನೂತನ ಕಟ್ಟಡ ನಿರ್ಮಾಣವಾದ ನಂತರ ಸಣ್ಣ ಪ್ರಾಣಿಗಳ ಶಸ್ತ್ರಚಿಕಿತ್ಸಾ ಕೊಠಡಿ, ದೊಡ್ಡ ಪ್ರಾಣಿಗಳ ಚಿಕಿತ್ಸಾ ಕೊಠಡಿ ಸೌಲಭ್ಯವಿರುತ್ತದೆ ಎಂದು ಶಾಸಕ ಕಾಮತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments are closed.