ಕರಾವಳಿ

ಪತ್ರಕರ್ತರೊಂದಿಗೆ ಕ್ರಿಸ್ಮಸ್ ಸಂಭ್ರಮ : ಮಂಗಳೂರು ಬಿಷಪ್‌ ಡಾ ಪೀಟರ್ ಪಾವ್ಲ್ ಸಲ್ದಾನ್ಹರಿಂದ ಕ್ರಿಸ್ಮಸ್ ಸಂದೇಶ

Pinterest LinkedIn Tumblr

ಮಂಗಳೂರು, ಡಿಸೆಂಬರ್. 19: ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ ಪೀಟರ್ ಪಾವ್ಲ್ ಸಲ್ದಾನ್ಹ ಅವರು ಬುಧವಾರ ಮಂಗಳೂರು ಬಿಷಪ್ ಹೌಸ್ ನಲ್ಲಿ ಮಾಧ್ಯಮದವರೊಂದಿಗೆ ಕ್ರಿಸ್ಮಸ್ ಸಂಭ್ರಮಾಚರಣೆ ಮಾಡಿದರು.

ಬಿಷಪ್ ಹೌಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿದ ಬಳಿಕ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ ಪೀಟರ್ ಪಾವ್ಲ್ ಸಲ್ದಾನ್ಹ ಅವರು ಕ್ರಿಸ್ಮಸ್ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮ್ಯಾಕ್ಸಿಮ್ ನೊರೊನ್ಹಾ, ಚಾನ್ಸಲರ್ ವಿಕ್ಟರ್ ಜಾರ್ಜ್ ಡಿಸೋಜ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಕ್ಟರ್ ವಿಜೆಯ್ ಲೋಬೋ, ಮಾರ್ಸೆಲ್ ಮೊಂತೇರೋ, ಪಾಲಾನ ಮಂಡಳಿ ಕಾರ್ಯದರ್ಶಿ ಮೆಲ್ವಿನ್ ನೊರೊನ್ಹಾ ಉಪಸ್ಥಿತರಿದ್ದರು.

ಬಿಷಪ್ ಅವರ ಕ್ರಿಸ್ಮಸ್ ಸಂದೇಶ :

ಕ್ರಿಸ್‌ಮಸ್ ಹಬ್ಬವುದೇವರುಮಾನವನಾಗಿಹುಟ್ಟಿದಘಟನೆಯ ಸಂಭ್ರಮವಾಗಿದೆ. ಪ್ರತೀ ವರುಷಡಿಸೆಂಬರ್ ತಿಂಗಳು ಬಂದಾಗಯೇಸುವಿನ ಜನನದ ಹಬ್ಬವನ್ನು‌ಆಚರಿಸಲು ನಾವೆಲ್ಲಾತಯಾರಿ ಮಾಡುತ್ತೇವೆ. ಯಾಕಾಗಿದೇವರು ಈ ಧರೆಗೆ ಬಂದರು ಎಂಬ ಪ್ರಶ್ನೆಗೆನಾವೆಲ್ಲರೂ‌ಉತ್ತರ ಹುಡುಕುತ್ತೇವೆ.

ದೇವರು ಸೃಷ್ಟಿಸಿದ ಪೃತಿಯೊಬ್ಬ ಮನುಷ್ಯನುದೇವರನ್ನು‌ಅರಸುತ್ತಾನೆ. ಇದು‌ಒಂದು ನಿರಂತರ ಹುಡುಕಾಟ. ಮನುಷ್ಯನ ಈ ದೈವೀ ಹುಡುಕಾಟಕ್ಕೆ ತೃಪ್ತಿಸಿಗಲೆಂದು ದೇವರೇ ನಮ್ಮೆಡೆಗೆ ಬಂದಿದ್ದಾರೆ.

ಎರಡನೆಯದಾಗಿ, ನಮ್ಮ ಹೃದಯ ಪ್ರೀತಿಗಾಗಿ ನಿರಂತರ ಹಾತೊರೆಯುವಾಗ, ಮನಸ್ಸು ಸತ್ಯವನ್ನು ತಿಳಿಯಲು ತವಕ ಪಡುತ್ತದೆ. ನಾವು ಪ್ರೀತಿಯಲ್ಲಿ ಸಂಪೂರ್ಣತೆಯನ್ನುಹುಡುಕುತ್ತೇವೆ. ಈ ಸಂಪೂರ್ಣ ಪ್ರೀತಿಯ ಹುಡುಕಾಟಕ್ಕೆ ಕೊನೆ ಎಲ್ಲಿ? ನಿರಂತರ ಸತ್ಯವನ್ನು‌ಅನ್ವೇಷಿಸುವ ನಮ್ಮಮನಸ್ಸು‌ಅದೆಲ್ಲಿಸಂತೃಪ್ತ್ತಿ ಪಡೆಯುತ್ತಿದೆ?.

ಹೀಗೆ ನಮ್ಮೊಳಗಿನ ಮನಸ್ಸು, ಹೃದಯಗಳ ನಿರಂತರ ಹುಡುಕಾಟಕ್ಕೆ ಸ್ಪಂದಿಸಿ, ಸತ್ಯ – ಪ್ರೀತಿಯೇ‌ಆಗಿರುವದೇವರುತಮ್ಮನ್ನೆ ಈ ಭೂಲೋಕಕ್ಕೆ ಪ್ರಚುರಪಡಿಸುತ್ತಾರೆ. ದೇವರು ಹಾಗೂ ಮನುಷ್ಯನ ಸಮಾಗಮವೇಕ್ರಿಸ್ಮಸ್ ಹಬ್ಬದ ಸಾರ.

ಸಮಸ್ತ ಕ್ರೈಸ್ತಭಾಂದವರುಯೇಸು ಸ್ವಾಮಿಯನ್ನು ನಿಜ ದೇವರು, ನಿಜ ಮನುಷ್ಯರೆಂದು‌ಆರಾಧಿಸುತ್ತಾರೆ.ಸಂತ ಪಾವ್ಲಾರು, ಫಿಲಿಪ್ಪಿಯರಿಗೆ ಬರೆದ ಪತ್ರದಲ್ಲಿ ಹೇಳುವಂತೆ, “ದೇವ ಸ್ವರೂಪಿ ತಾನಾಗಿದ್ದರೂ ನಿರುತದೇವರಿಗೆ ಸಮನಾದ ಆ ಸಿರಿ ಪದವಿನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತತನ್ನನ್ನು ಬರಿದು ಮಾಡಿಕೊಂಡು. ಮನುಜನಾಕಾರದಲ್ಲಿ ಕಾಣಿಸಿಕೊಂಡು ನರಮಾನವರಿಗೆಸಮಾನಾದ”. (ಫಿಲಿಪ್ಪಿ ೨: ೬ ,೭)
ಮನುಷ್ಯರನ್ನುತನ್ನದೈವತ್ವದಲ್ಲಿಸೇರಿಸಿಕೊಳ್ಳಲು, ದೇವರುಮಾನವರಾದರು ಮತ್ತು ನಮ್ಮೊಡನೆ ಜೀವಿಸಿದರು-ಅವರೇ ‘ಇಮ್ಮಾನ್ವುಯೆಲ್’, ಅಂದರೆ, “ದೇವರು ನಮ್ಮ ಸಂಗಡ‌ಇದ್ದಾರೆ” ಎಂದು‌ಅರ್ಥ. ಈ ದೇವರಲ್ಲಿ ವಿಶ್ವಾಸವಿಟ್ಟು‌ ಅವರ ದೈವತ್ವದಲ್ಲಿ‌ ಒಂದಾಗುವುದೇ ನಮ್ಮ ಸೌಭಾಗ್ಯ. ಆದರೆ, ಮಾನವ ತನ್ನೊಳಗಿನ ಸೆಳೆತಗಳಿಗೆ ಒಳಗಾಗಿ, ಶಾಶ್ವತ ಸುಖ – ಶಾಂತಿ ನೀಡುವದೇವರನ್ನುತೊರೆದು, ಕ್ಷಣಿಕ ಸುಖದೆಡೆಗೆ ಮರಳುಗಾಡಿನಲ್ಲಿ ಮರಿಚ್ಚೀಕೆ ಬೆನ್ನಟ್ಟಿದಂತೆ ಹೋಗುತ್ತಿದ್ದಾನೆ.

ದಾರಿತಪ್ಪಿದ ಮನುಜನನ್ನುದೇವರೆಡೆಗೆ ಸೆಳೆಯಲು, ದೇವರೇ ಮನುಜನಾಗಿ ಬೆತ್ಲೆಹೆಮಿನಗೊದಲಿಯ ಮೇಲೆ, ಮಾತೆ ಮರಿಯಳ ಉದರದಲ್ಲಿ, ಪವಿತ್ರಾತ್ಮರ ಶಕ್ತಿಯಿಂದ ಹುಟ್ಟಿ ಬಂದರು. ಇವರೇ ಆ ಯೇಸುಸ್ವಾಮಿ. ದೇವಕುಮಾರನಜನನದಿಂದ ಸ್ವರ್ಗ – ಭೂಲೋಕಗಳು ಹರ್ಷಗೊಂಡಿವೆ. ಅವರಜನನದ ವಾರ್ತೆ ಸಮಾಜದಲ್ಲಿ‌ಅಲ್ಪವಾಗಿಕಾಣಲ್ಪಡುವಕುರುಬರಿಗೆದೂತರಿಂದ ಲಭಿಸಿತು.

“ಮಹೋನ್ನತದಲ್ಲಿದೇವರಿಗೆ ಮಹಿಮೆ, ಭೂಲೋಕದಲ್ಲಿದೇವರೊಲಿದ ಮಾನವರಿಗೆ ಶಾಂತಿ” ಎಂದುದೂತ ವೃಂದವುಕ್ರಿಸ್ತನಜನನದ ಸಮಯದಲ್ಲಿ ಹಾಡಿತು. ಈ ಭೂಲೋಕದಲ್ಲಿ ನಾವೆಲ್ಲರುಸುಮನಸ್ಕರಾಗಿ ಜೀವಿಸಿದಾಗ ಸಿಗುವ ಫಲವೇ “ಶಾಂತಿ”. ದೇವರ ಶಾಂತಿಯಲ್ಲಿ ಜೀವಿಸಿ, ಪರರನ್ನು ಆ ಶಾಂತಿಯಲ್ಲಿಜೀವಿಸಲು ಪ್ರೇರೇಪಿಸುವವರೇ‌ಒಬ್ಬರಿಗೊಬ್ಬರುಬಂಧುಗಳು. ಯಾಕೆಂದರೆಯೇಸುಸ್ವಾಮಿ ಹೇಳುತ್ತಾರೆ “ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು‌ಅವರುದೇವರ ಮಕ್ಕಳು ಎನಿಸಿಕೊಳ್ಳುವರು” (ಮತ್ತಾಯ೫ : ೯)
ಕ್ರೈಸ್ತ ವಿಶ್ವಾಸದ ಪ್ರಕಾರ, ದೇವರೆ ನಮ್ಮ ಆದಿ ಮತ್ತು‌ಅಂತ್ಯ (ಆಲ್ಫಾ ಮತ್ತು ಓಮೆಗಾ), ದೇವರಿಂದಲೇ ನಮ್ಮೆಲ್ಲರ‌ ಉಗಮ, ದೇವರಲ್ಲಿಯೇ ನಮ್ಮೆಲ್ಲರ ಸಮಾಗಮ, ಈ ನಡುವಿನ ನಮ್ಮಜೀವನವೇ ಬಂಧತ್ವದ ಸಂಗಮ. ಪ್ರತಿಯೊಬ್ಬರು ಸಹೋದರ – ಸಹೋದರಿಯಂತೆ (ಭ್ರಾತೃತ್ವ) ಈ ಸೃಷ್ಟಿಯಲ್ಲಿ, ಪರರನ್ನು ಪರಿಗಣಿಸಿ, ಗೌರವಿಸಿ ಜೀವಿಸಿದಾಗಲೇ ನಿಜವಾದ‌ಆತ್ಮಶಾಂತಿ ಪಡೆಯಲು ಸಾಧ್ಯ. ಇದೇ ನಿಜವಾದ ಬಂಧುತ್ವದ‌ಅನುಭವ.ಅಂತಹ ಮಾನವೀಯತೆಗೆ ಧರ್ಮಗಳ ಗೋಡೆಗಳಿಲ್ಲ.ನಿಜವಾದ‌ಆಧ್ಯಾತ್ಮಿಕತೆ, ಮಾನವೀಯತೆಯನೆಲೆ ಹಾಗೂ ಭದ್ರ ತಳಹದಿಯಾಗಿದೆ.

ದೇವಪುತ್ರಯೇಸುವಿನ ಜನನದಿಂದ ಸಮಸ್ತ ಸೃಷ್ಟಿಯೇ ಪುಳಕಗೊಂಡಿತು. ಸೃಷ್ಟಿ ಸಮಸ್ತವು ಬಹು ಉತ್ಸುಕತೆಯಿಂದತನ್ನ ಹೃದಯಾಂತರಾಳದ ನಿರೀಕ್ಷೆಗಳಿಗೆ ಯೇಸುವಿನಲ್ಲಿ ಫಲಕಂಡಿತು.ಸೃಷ್ಟಿಯ ಮುಕುಟವೇ ಮಾನವ; ಅದರಲ್ಲೂ ಪಾಪರಹಿತಕ್ರಿಸ್ತನು ಆ ಮುಕುಟದ ವಜ್ರವಿದ್ದಂv.ದುರಾದೃಷ್ಡವೆಂದರೆಮನುಷ್ಯತನ್ನ ಸ್ವಾರ್ಥದಿಂದಸೃಷ್ಡಿಯನ್ನುವಿಕಾರಗೊಳಿಸುತ್ತಿದ್ದಾನೆ. ಇತರ ಮನುಷ್ಯರ ವಿರುದ್ದ ಹಿಂಸೆಯದಾರಿಯನ್ನು ಹಿಡಿಯುತ್ತಾನೆ.ಪಾಪದ ಕೂಪಕ್ಕೆ ಬಿದ್ದಿರುವ ಮನುಕುಲವನ್ನುರಕ್ಷಿಸಲು, ಈ ಪ್ರಕೃತಿಯನ್ನು ಪುನರಶ್ಚೇತನಗೊಳಿಸಲು, ಧರೆಗೆ ಬಂದಯೇಸುಕಂದನಿಗೆ ನಮ್ಮ ಹೃನ್ಮನಗಳಲ್ಲಿ ನೆಲೆಸಲು ಅವಕಾಶಕೊಡೊಣ.

ಈ ಪ್ರಕೃತಿ ನಮ್ಮೆಲ್ಲರ ಸಾಮಾನ್ಯವಾಸ್ತವ್ಯದಮನೆ, ಇದರಂರಕ್ಷಣೆ ಮಾಡುವುದು ನಮ್ಮಕರ್ತವ್ಯ‌ಎಂದು ಪೋಪ್ ಫ್ರಾನ್ಸಿಸ್‌ರವರುತಮ್ಮ ವಿಶ್ವ-ಪತ್ರ ‘ಲಾವ್ದಾತೊಸಿ”ಯಲ್ಲಿ ಕರೆಕೊಟ್ಟಿದ್ದಾರೆ. ಆದುದರಿಂದ ಈ ಸುಂದರ ಸೃಷ್ಟಿಯ ವಿನಾಶಕ್ಕೆ ಕಾರಣಾವಾಗದೇ ಪ್ರಕೃತಿಯನ್ನು ಸಂರಕ್ಷಿಸುವದೂತರಾಗೋಣ.ಇಡೀ ಸೃಷ್ಟಿಯನ್ನೇ ಪರಿಪೂರ್ಣತೆಯೆಡೆಗೆಕೊಂಡೊಯ್ಯಲು ಸಹಕರಿಸೋಣ, ಮನುಕುಲವನ್ನೂ ಸಂರಕ್ಷಿಸೊಣ.

ಈ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ, ಗೋದಲಿಯ ಮೇಲೆ ಕಡುಬಡತನದಲ್ಲಿ ಜನಿಸಿದ ಯೇಸುಸ್ವಾಮಿತಮ್ಮನ್ನೇನಮಗೆ ಶ್ರೇಷ್ಟ‌ಉಡುಗೊರೆಯಾಗಿ ನೀಡುತ್ತಾರೆ. ಈ ಬಾಲ ಯೇಸುವನ್ನು ಮುದ್ದಿಸಿ, ಆರಾಧಿಸಿ, ಸಂತೊಷಿಸುವಾಗ, ನಾವು ಕೂಡ ಪರರಿಗೆ‌ಒಂದು‌ಉಡುಗೊರೆಯಾಗೋಣ. ಇದೇ ನಮ್ಮ ಆಸ್ಥಿತ್ವ, ಇದೇ ನಮ್ಮ ಬಂಧುತ್ವ. ಸಮಸ್ತ ಜನರಿಗೆಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ.

 

Comments are closed.