ಕರಾವಳಿ

ಕೊಂಚಾಡಿ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದಲ್ಲಿ “ಸ್ವರ್ಣ ರಥೋತ್ಸವ”

Pinterest LinkedIn Tumblr

ಮಂಗಳೂರು : ಶ್ರೀ ಕಾಶೀ ಮಠ ಸಂಸ್ಥಾನದ ಶಾಖಾ ಮಠವಾದ ಕೊಂಚಾಡಿ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಪ್ರಯುಕ್ತ ಮಂಗಳವಾರ ಶ್ರೀ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಯವರ ದಿವ್ಯ ಹಸ್ತಗಳಿಂದ ಶ್ರೀದೇವರ ವಿಜೃಂಭಣೆಯಿಂದ ಜರಗಿತು.

ಕಾಸರಗೋಡು ಮೊಕ್ಕಾಂ ನಿಂದ ಆಗಮಿಸಿದ ಶ್ರೀಗಳವರಿಗೆ ಸಕಲ ಬಿರುದು ಬಾವಳಿ ಗಳೊಂದಿಗೆ ಗೌರವ ಪೂರ್ವಕವಾಗಿ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಮಹಾಲಸಾ ದೇವಸ್ಥಾನದ ಆಡಳಿತ ಮಂಡಳಿಯವರು ಪೂರ್ಣ ಕುಂಭ ಸ್ವಾಗತ ನೀಡಿದರು.

ಬಳಿಕ ಶ್ರೀ ದೇವರ ದರ್ಶನ , ಗುರುಗಳ ಪಾದ ಪೂಜೆ ನೆರವೇರಿತು. ಸರ್ವಾಲಂಕೃತ ಶ್ರೀ ದೇವಿಯ ವಿಗ್ರಹವನ್ನು ಸ್ವರ್ಣರಥದಲ್ಲಿ ಪ್ರತಿಷ್ಠಾಪಿಸಿ ಶ್ರೀಗಳವರಿಂದ ಮಹಾ ಮಂಗಳಾರತಿ ನಡೆಯಿತು . ರಾತ್ರಿ ಸ್ವರ್ಣ ರಥವನ್ನು ದೇವಳದ ಪ್ರಾಂಗಣದಲ್ಲಿ ಎಳೆಯಲಾಯಿತು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿಯ ಕಸ್ತುರಿ ಸದಾಶಿವ ಪೈ , ಜಿ . ರತ್ನಕರ ಕಾಮತ್ , ಅಚ್ಚುತ್ ಪೈ , ಸುರೇಶ್ ಕಾಮತ್ , ಶಶಿಧರ್ ಪೈ ಮಾರೂರ್ , ಗೋಕುಲದಾಸ್ ನಾಯಕ್ , ಎಂ . ವಿಜಯ್ ಪೈ , ಉರ್ವಿ ರಾಧಾಕೃಷ್ಣ ಶೆಣೈ , ಜಿ . ಅನಿಲ್ ಕಾಮತ್ , ಅರುಣ್ ಕಾಮತ್ , ಸೂರಜ್ ಕಾಮತ್ , ಪ್ರಶಾಂತ್ ಪೈ, ಯು . ವಿ . ಕಿಣಿ ಹಾಗೂ ಸಾವಿರಾರು ಭಗವತ್ ಭಕ್ತರು ಉಪಸ್ಥಿತರಿದ್ದರು .

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.