ಕರಾವಳಿ

ಉಡುಪಿ ಜಿಲ್ಲೆಯ 5 ದಿಬ್ಬಗಳಲ್ಲಿ ಮರಳುಗಾರಿಕೆ ಆರಂಭ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಸಿಆರ್‌ಝಡ್‌ ವ್ಯಾಪ್ತಿಯ ಉಪ್ಪೂರು, ಹಾವಂಜೆ ಮತ್ತು ಮೂಡುತೋನ್ಸೆಯ ಐದು ದಿಬ್ಬಗಳಲ್ಲಿ ಮರಳುಗಾರಿಕೆ ಆರಂಭಗೊಂಡಿದೆ.

ರಾಜಧನ ಪಾವತಿಸಿರುವ 33 ಮಂದಿ ಪರವಾನಿಗೆದಾರರ ಪೈಕಿ 12 ಮಂದಿ ಮರಳು ದಿಬ್ಬ ತೆರವು (ಮರಳುಗಾರಿಕೆ) ಆರಂಭಿಸಿದ್ದು, ಈ ಪೈಕಿ ಓರ್ವರು ನಿರ್ಮಿತಿ ಕೇಂದ್ರಕ್ಕೆ ವಿತರಣೆ ಮಾಡಿದ್ದಾರೆ. ಉಳಿದವರು ವಿತರಣೆ ಇನ್ನಷ್ಟೇ ಆರಂಭಿಸ ಬೇಕಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ತಿಳಿಸಿದ್ದಾರೆ.

ಐದು ದಿಬ್ಬಗಳಲ್ಲಿ 16,910 ಮೆಟ್ರಿಕ್‌ ಟನ್‌ ಮರಳು ಲಭ್ಯವಿದೆ. ಇದು ಸುಮಾರು 1,691 ಲೋಡ್‌ಗಳಷ್ಟಾಗುತ್ತದೆ. ಇದರಲ್ಲಿ ಶೇ. 10ರಷ್ಟನ್ನು ಅಂದರೆ 169 ಲೋಡ್‌ ಸರಕಾರಿ ಯೋಜನೆಗಳ ಕಾಮಗಾರಿ ನಡೆಸುವ ನಿರ್ಮಿತಿ ಕೇಂದ್ರಕ್ಕೆ ಮೀಸಲಿಡಬೇಕಾಗಿದೆ.

Comments are closed.