ಕರಾವಳಿ

ಪ್ರತಿದಿನ ಚಹಾಕ್ಕೆ ಏಲಕ್ಕಿ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ರಕ್ತಭೇದಿ ನಿವಾರಣೆ

Pinterest LinkedIn Tumblr

ಹೌದು ನಮ್ಮನ್ನ ಹಲವಾರು ಸಮಸ್ಯೆಗಳು ಕಾಡುತ್ತವೆ ಆದರೆ ಪ್ರತಿಯೊಂದಕ್ಕೂ ವೈದ್ಯರ ಬಳಿ ಹೋಗುವುದಕ್ಕಾಗಲ್ಲ ಆದ್ದರಿಂದ ಕೆಲವೊಂದು ನಮ್ಮ ಮನೆಯಲ್ಲಿರುವ ಪದಾರ್ಥಗಳಲ್ಲೇ ನೈಸರ್ಗಿಕವಾಗಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಕೊಳ್ಳಬಹುದಾಗಿದೆ. ಅದೇ ರೀತಿ ರಕ್ತ ಭೇಧಿ ಸಮಸ್ಯೆಗೆ ಏಲಕ್ಕಿ ಯಲ್ಲಿ ಪರಿಹಾರವಿದೆ ಅದು ಹೇಗೆ ನೋಡೋಣ ಬನ್ನಿ:

ಪ್ರತಿದಿನ ಕುಡಿಯುವ ಚಹಾಕ್ಕೆ ಏಲಕ್ಕಿ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ರಕ್ತಭೇದಿ ಕಡಿಮೆಯಾಗಿ ರೋಗಗಳು ನಿವಾರಣೆ ಆಗುವುದು. ಅಷ್ಟೇ ಅಲ್ಲದೆ ಊಟವಾದ ನಂತರ ಓಂ ಕಾಳುಗಳನ್ನು ಚೆನ್ನಾಗಿ ಜಗಿದು ತಿನ್ನುವುದರಿಂದ ಸಹ ರಕ್ತಬೇಧಿ ಕಡಿಮೆಯಾಗುವುದು.

ಪ್ರತಿನಿತ್ಯ ಖರ್ಜೂರವನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಆಮಶಂಕೆ ಅಂದರೆ ರಕ್ತ ಭೇದಿ ಆಗುವ ಸಂಭವವೇ ಇರುವುದಿಲ್ಲ ಮತ್ತು ಒಂದು ಟೀ ಸ್ಪೂನಿನಷ್ಟು ಮೆಂತ್ಯಯನ್ನು ಗಟ್ಟಿ ಮೊಸರಿನಲ್ಲಿ ಕಲಸಿ, ದಿನಕ್ಕೆ ಎರಡು ಬಾರಿ ನುಂಗುತ್ತಿದ್ದರೆ ಆಮಶಂಕೆ ನಿಲ್ಲುತ್ತದೆ ಹಾಗು ಮೆಂತ್ಯಯನ್ನು ಪುಡಿ ಮಾಡಿ, ಒಂದು ಟೀ ಸ್ಪೂನಿನಷ್ಟು ಪುಡಿಯನ್ನು ಒಂದು ಗ್ಲಾಸ್‌ ಮಜ್ಜಿಗೆಯಲ್ಲಿ ಬೆರೆಸಿ ದಿನವೂ ಎರಡು ಬಾರಿ ಕುಡಿಯುತ್ತಿದ್ದರೂ ರಕ್ತಭೇದಿ ನಿಲ್ಲುವುದು.

ಕುರಿಯ ಹಾಲಿಗೆ ಅರ್ಧ ಹೋಳು ನಿಂಬೆಹಣ್ಣನ್ನು ಹಿಂಡಿಕೊಂಡು ಕುಡಿಯುವುದರಿಂದ ಸಹ ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದಾಗಿದೆ ಮತ್ತು ಬೀಜ ತೆಗೆದ ಸೀಬೆಹಣ್ಣಿನ ತಿರುಳನ್ನು ಹಾಲಿಗೆ ಹಾಕಿ, ಜೇನುತುಪ್ಪವನ್ನು ಬೆರೆಸಿ ಸೇವಿಸಿದರೆ ಉತ್ತಮ.ಮಾವಿನಕಾಯಿಯನ್ನು ಮಿತವಾಗಿ ಸೇವಿಸುವುದರಿಂದಲೂ ಆಮಶಂಕೆಯ ದೂರವಾಗುವುದು.ಬಾಳೆಕಾಯಿಯನ್ನು ಬಿಸಿ ಬೂದಿಯಲ್ಲಿ ಸುಟ್ಟು ತಿನ್ನುವುದು ಕೂಡ ರಕ್ತ ಬೇಧಿ ಸಮಸ್ಯೆಗೆ ಉತ್ತಮ ಔಷಧವಾಗಿದೆ.

Comments are closed.