ಕರಾವಳಿ

ರಕ್ತ ಶುದ್ಧಿಗೆ ಹುಣಸೆ ಹಣ್ಣು ಬೆಸ್ಟ್ ಮದ್ದು.

Pinterest LinkedIn Tumblr

ಅಡುಗೆ ರುಚಿ ಹೆಚ್ಚಿಸುವ ಹುಣಸೆ ಹಣ್ಣಿನಲ್ಲಿ ಅನೇಕ ಔಷಧೀಯ ಗುಣಗಳಿನೆ. ಕ್ಯಾನ್ಸರ್‌, ಮೂಲವ್ಯಾಧಿಗೂ ಮದ್ದಾಗುವ ಇದರಲ್ಲಿ ಇನ್ಯಾವ ಔಷಧೀಯ ಗುಣಗಳಿವೆ?

– ನೀರಿನಲ್ಲಿ ಹುಣಸೆಹುಳಿ ಬೆರೆಸಿದ ನಿಂಬೆ ಚರಟವನ್ನು ನೆನೆಸಿ, ಕೂದಲ ಬುಡಕ್ಕೆ ಹಚ್ಚಿ. ಇದು ಕೂದಲನ್ನು ಬೇರಿನಿಂದಲೇ ಗಟ್ಟಿಗೊಳಿಸಿ, ಕೂದಲುದುರುವಿಕೆಯನ್ನು ತಡೆಯುತ್ತದೆ.
– ಹುಣಸೆ ತಿಂದರೆ ಆ್ಯಂಟಿಸೆಪ್ಟಿಕ್‌ನಂತೆ ಕೆಲಸಮಾಡಿ, ಗಾಯಗಳು ಬೇಗ ಮಾಯುವಂತೆ ಮಾಡುತ್ತದೆ.
– ದೇಹದೊಳಗೆ ಇನ್ಫೆಕ್ಷನ್ ಆಗದಂತೆ ನೋಡಿಕೊಳ್ಳುತ್ತದೆ.
– ಕೊಲೆಸ್ಟೆರಾಲ್ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
– ಹುಣಸೆಹುಳಿಯನ್ನು ಟೀಯೊಂದಿಗೆ ಬೆರೆಸಿ ಕೊಡುವುದು ಮಲೇರಿಯಾ ನಿಯಂತ್ರಣಕ್ಕೆ ಸಹಕಾರಿ.
– ಜಾಂಡೀಸ್ ಹಾಗೂ ಅಲ್ಸರ್ ಔಷಧಿ ತಯಾರಿಕೆಯಲ್ಲಿ ಹುಣಸೆ ರಸವನ್ನು ಬಳಸಲಾಗುತ್ತದೆ.
– ಆ್ಯಂಟಿಆಕ್ಸಿಡೆಂಟ್ಸ್ ಹೆಚ್ಚಿದ್ದು, ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ಕುಂಠಿಸುತ್ತದೆ.
– ಹುಣಸೆ ಹೂವಿನಿಂದ ತೆಗೆದ ರಸವು ಮೂಲವ್ಯಾಧಿಯನ್ನು ನಿವಾರಿಸುತ್ತದೆ.
-ರಕ್ತ ಶುದ್ಧಿಗೂ ಹುಣಸೆ ಹಣ್ಣು ಬೆಸ್ಟ್ ಮದ್ದು.

Comments are closed.