ಕರಾವಳಿ

ಬಾಯಿ ಹುಣ್ಣು ನಿವಾರಣೆಗೆ ಕಲ್ಲು ಸಕ್ಕರೆ ಸಹಕಾರಿ

Pinterest LinkedIn Tumblr

ಹೌದು ಕಲ್ಲು ಸಕ್ಕರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಲ್ಲು ಸಕ್ಕರೆಯನ್ನು ಹಲವಾರು ಸಮಸ್ಯೆಗಳಿಗೆ ವಿವಿಧ ರೀತಿಯಲ್ಲಿ ಬಳಕೆ ಮಾಡುವ ಮೂಲಕ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಅದೇಗೆ ಅನ್ನೋದನ್ನ ಮತ್ತು ಅದರ ಲಾಭಗಳನ್ನು ತಿಳಿದುಕೊಳ್ಳೋಣ.

ಕಣ್ಣುಗಳಲ್ಲಿ ಉರಿ ಮತ್ತು ಕೆಂಪಾಗಿದ್ದರೆ ಕಲ್ಲು ಸಕ್ಕರೆಯನ್ನು ನೀರಲ್ಲಿ ಕಲಸಿ ಆ ನೀರಲ್ಲಿ ಹತ್ತಿ ನೆನೆಸಿ ಕಣ್ಣುಗಳ ಮೇಲೆ ಇಟ್ಟರೆ ಉರಿ ಮತ್ತು ಕೆಂಪಾಗಿರುವುದು ಶಮನವಾಗುತ್ತದೆ.

ಈರುಳ್ಳಿ ರಸಕ್ಕೆ ಕಲ್ಲು ಸಕ್ಕರೆ ಬೆರೆಸಿ ಸೇವಿಸಿದರೆ ಮೂತ್ರ ಮಾರ್ಗದಲ್ಲಿ ಕಲ್ಲು ಇದ್ದರೆ ಕರಗುತ್ತದೆ. ಮತ್ತು ಹೊಟ್ಟೆ ನೋವು ಹೆಚ್ಚಿದ್ದರೆ ಬೇವಿನ ಚಿಗುರನ್ನು ಕಲ್ಲು ಸಕ್ಕರೆ ಜತೆ ತಿಂದರೆ ನೋವು ಬೇಗ ಶಮನವಾಗುತ್ತದೆ.

50 ಗ್ರಾಂ ಬಾದಾಮಿ, 50 ಗ್ರಾಂ ಕಲ್ಲು ಸಕ್ಕರೆ, 25 ಗ್ರಾಂ ಸೋಂಪು ಮತ್ತು 10 ಗ್ರಾಂ ಕರಿಮೆಣಸಿನ ಕಾಳುಗಳನ್ನು ಹಾಕಿ ಮಾಡಿದ ಒಂದು ಚಮಚ ಪುಡಿಯನ್ನು ಹಾಲಿಗೆ ಸೇರಿಸಿ ಪ್ರತಿ ದಿನ ರಾತ್ರಿ ಮಲಗುವ ಮುನ್ನ ಕುಡಿದರೆ ದೃಷ್ಟಿ ಹೆಚ್ಚುತ್ತದೆ.

ಪದೇ ಪದೆ ಬಾಯಿ ಹುಣ್ಣಾಗುತ್ತಿದ್ದರೆ ಏಲಕ್ಕಿ ಮತ್ತು ಕಲ್ಲು ಸಕ್ಕರೆ ಪೇಸ್ಟ್‌ ಮಾಡಿ ಲೇಪ ಮಾಡಿದರೆ ಹುಣ್ಣು ನಿವಾರಣೆಯಾಗುತ್ತದೆ ಮತ್ತು ಕಲ್ಲು ಸಕ್ಕರೆಯನ್ನು ಸೋಂಪು ಜತೆ ಬಾಯಿಗೆ ಹಾಕಿ ಅಗಿದರೆ ಬಾಯಿ ವಾಸನೆ ದೂರಾಗುತ್ತದೆ.

ನಿಮಗೆ ಪದೇ ಪದೇ ಉಷ್ಣ ಹಾಗುತ್ತಿದ್ದರೆ ಅದರಿಂದ ಹೊಟ್ಟೆ ನೋವು ಬರುತ್ತಿದ್ದರೆ ಕಲ್ಲು ಸಕ್ಕರೆಗೆ ಉತ್ತುತ್ತೆ ಹಣ್ಣಿನ ಜೊತೆಗೆ ತುಪ್ಪ ಬೆರೆಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ.

Comments are closed.