ಕರಾವಳಿ

ಚಳಿಗೆ ದೇಹದ ಉಷ್ಣತೆಯನ್ನು ಹೆಚ್ಚಿಸಲು ಇದು ಸಹಕಾರಿ

Pinterest LinkedIn Tumblr

ನಾವು ನಮ್ಮ ಮನೆಗೆ ತೆಗೆದುಕೊಂಡು ಬರುವ ಪ್ರತಿಯೊಂದು ತರಕಾರಿಗಳಲ್ಲಿ ಒಂದೊಂದು ರೀತಿಯ ಆರೋಗ್ಯಕಾರಿ ಲಾಭಗಳು ಇರುತ್ತವೆ. ಆದರೆ ಅದು ನಮಗೆ ತಿಳಿದಿರುವುದಿಲ್ಲ ಅದೇ ರೀತಿ ಶುಂಠಿಯು ಸಹ ಅದರಿಂದ ಹೊರತಾಗೇನು ಇಲ್ಲ.ಶುಂಠಿ ಕೇವಲ ಅಡುಗೆಗೆ ಮಾತ್ರ ಸೀಮಿತವಾಗಿಲ್ಲ,ಇನ್ನು ಹಲವಾರು ರೀತಿಯ ಸಮಸ್ಯೆಗಳಿಗೆ ಪರಿಹಾರವಾಗಿದೆ ಅದೇನು ಅನ್ನುವುದನ್ನು ಈ ಕೆಳಗೆ ನೋಡೋಣ ಬನ್ನಿ.

ಸಾಮಾನ್ಯವಾಗಿ ಶುಂಠಿಯನ್ನು ಅಡುಗೆ ಮನೆಯಲ್ಲಿ ಮಸಾಲೆ ಪದಾರ್ಥವಾಗಿ ಉಪಯೋಗಿಸುತ್ತಾರೆ. ಕಾರಣ ಇದರಲ್ಲಿ ತಾಮ್ರ ಮತ್ತು ಮ್ಯಾಂಗನೀಸ್ ಅಂಶ ಹೆಚ್ಚಾಗಿರುತ್ತದೆ ಆದ್ದರಿಂದ ಇದನ್ನು ಚಳಿಗಾಲದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಏಕೆಂದರೆ ಇದು ಚಳಿಗೆ ನಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸಲು ಸಹಾಯವಾಗುತ್ತದೆ, ಅದಕ್ಕಾಗಿ ಕೆಲವರು ಟೀ ನಲ್ಲಿ ಶುಂಠಿ ಹಾಕಿಕೊಂಡು ಕುಡಿಯುವುದುಂಟು.

ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಿಸುತ್ತದೆ: ಹೌದು ಗ್ಯಾಸ್ ಸಮಸ್ಯೆಯಿದ್ದವರಿಗೆ ಶುಂಠಿ ರಾಮಬಾಣವಾಗಿದೆ. 125 ಗ್ರಾಂ ಒಣ ಶುಂಠಿ ಪುಡಿ ಮತ್ತು 250 ಗ್ರಾಂ ಎಳ್ಳಿನ ಪುಡಿಯನ್ನು ಬೆಲ್ಲದೊಂದಿಗೆ ಬೆರೆಸಿ ಉಂಡೆ ಮಾಡಿ ಪ್ರತಿದಿನ ಒಂದು ಉಂಡೆಯನ್ನು ಸೇವನೆ ಮಾಡುವುದರಿಂದ ಗ್ಯಾಸ್ ಸಮಸ್ಯೆ ನಿವಾರಿಸಿಕೊಳ್ಳಬಹುದು.

ಬಾಯಿ ವಾಸನೆಗೆ ಪರಿಹರವಾಗಿದೆ: ಹೌದು ಒಂದು ಚಮಚ ಶುಂಠಿ ಪುಡಿಯನ್ನು ನೀರಿನಲ್ಲಿ ಹಾಕಿ ಬಿಸಿ ಮಾಡಿದ ನಂತರ ಅದರಿಂದ ಬಾಯಿ ಮುಕ್ಕಳಿಸಿದರೆ ಬಾಯಿಯ ವಾಸನೆ ನಿವಾರಣೆಯಾಗುತ್ತದೆ.

ಹೊಟ್ಟೆ ಹುಳುವಿನ ಸಮಸ್ಯೆ ನಿವಾರಣೆ ಮಾಡುತ್ತದೆ: ಅರ್ಧ ಚಮಚ ಶುಂಠಿ ರಸವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಿ. ಪ್ರತಿದಿನ ಬೆಳಿಗ್ಗೆ ಈ ಮಿಶ್ರಣವನ್ನು ಕುಡಿಯುತ್ತ ಬಂದರೆ ಹೊಟ್ಟೆ ಹುಳುವಿನ ಸಮಸ್ಯೆ ಮಾಯವಾಗುತ್ತದೆ.

Comments are closed.