ಕರಾವಳಿ

ಚೇತನಾ ಬಾಲ ವಿಕಾಸ ಕೇಂದ್ರದ ವಿಶೇಷ ಮಕ್ಕಳಿಂದ ವಿಶಿಷ್ಟ ದೀಪಾವಳಿ ಆಚರಣೆ

Pinterest LinkedIn Tumblr

ಮಂಗಳೂರು : ಸೇವಾ ಭಾರತಿಯ ಅಂಗ ಸಂಸ್ಥೆಯಾದ ಚೇತನಾ ಬಾಲ ವಿಕಾಸ ಕೇಂದ್ರ, ವಿ.ಟಿ. ರೋಡ್, ಮಂಗಳೂರು ಇಲ್ಲಿ ಜಿ.ಎಸ್.ಬಿ. ಮಹಿಳಾ ಮಂಡಳಿ, ಮಂಗಳೂರು ಇವರ ಸಹಭಾಗಿತ್ವದಲ್ಲಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಮಹಿಳಾ ಮಂಡಳಿಯ ಅಧ್ಯಕ್ಷೆಯಾದ ಶ್ರೀಮತಿ ಪ್ರಭಾ ಪೈ ಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮಕ್ಕಳೂ ದೀಪಗಳನ್ನು ಬೆಳಗಿಸಿದರು. ಭಜನೆ ಹಾಡು ಹೇಳುತ್ತಾ ದೀಪದ ಸುತ್ತ ಸುತ್ತಿ ಮಕ್ಕಳು, ಚೇತನಾ ಶಾಲೆಯ ಸಿಬ್ಬಂದಿಗಳು ಹಾಗೂ ಮಹಿಳಾ ಮಂಡಳಿಯ ಸದಸ್ಯೆಯರು ಸಂತೋಷದಿಂದ ಕುಣಿದರು. ಪಟಾಕಿಯನ್ನು ಸಿಡಿಸಿ ಮಕ್ಕಳು ಖುಷಿ ಪಟ್ಟರು.

ಲಕ್ಷ್ಮೀ ದೇವಿಯ ಪೂಜೆಯನ್ನು ಈ ಸಮಯದಲ್ಲಿ ನಡೆಸಲಾಯಿತು. ಪ್ರಸಾದ ರೂಪವಾಗಿ ಎಲ್ಲರಿಗೂ ಸಿಹಿತಿಂಡಿಯನ್ನು ಹಂಚಲಾಯಿತು.
ಸೇವಾ ಭಾರತಿಯ ಕಾರ್ಯದರ್ಶಿ, ಶ್ರೀ ನಾಗರಾಜ ಭಟ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಪ್ರೀತಾ, ಸ್ವಯಂ ಸೇವಕರು, ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Comments are closed.