
ಮಂಗಳೂರು: ‘ಯಕ್ಷಗಾನ ರಂಗದಲ್ಲಿ ಕಲಾವಿದರಷ್ಟೇ ಮಹತ್ವ ಕಲಾಭಿಮಾನಿಗಳು ಮತ್ತು ಕಲಾಪೋಷಕರಿಗೂ ಇದೆ.ಅಂಥವರಲ್ಲಿ ಗತಿಸಿಹೋದ ಕೆಲವು ಹಿರಿಯರನ್ನು ತಮ್ಮ ಸಪ್ತಾಹ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಸ್ಮರಿಸುತ್ತಿರುವುದು ಯಕ್ಷಾಂಗಣದ ಸಾರ್ಥಕ ಕಲಾಸೇವೆ’ ಎಂದು ಮೂಡಬಿದಿರೆ ಧನಲಕ್ಷ್ಮೀ ಕ್ಯಾಶ್ಯೂ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಶ್ರೀಪತಿ ಭಟ್ ಹೇಳಿದ್ದಾರೆ.
ಯಕ್ಷಾಂಗಣ ಮಂಗಳೂರು ಮತ್ತು ಕರ್ನಾಟಕ ಯಕ್ಷಭಾರತಿ ಪುತ್ತೂರು ವತಿಯಿಂದ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮದ ಪ್ರಯುಕ್ತ ನಗರದ ಎಸ್ ಡಿ ಎಮ್ ಲಾ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾದ ಆರನೇ ವರ್ಷದ ಕನ್ನಡ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ -2018’ ದ ಐದನೇ ದಿನ ಕಲಾಪೋಷಕರಾದ ದಿ.ಅಳಪೆ ಶ್ರೀನಿವಾಸ ಭಟ್ ಮತ್ತು ದಿ.ಎ.ಶಾರದಾ ದಂಪತಿಯ ಸಂಸ್ಮರಣಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡಿ ಅವರು ಮಾತನಾಡಿದರು.ಶ್ರೀಕೃಷ್ಣ ಯಕ್ಷಸಭಾದ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ ನುಡಿನಮನ ಸಲ್ಲಿಸಿದರು.

ಉದ್ಯಮಿ ಕರುಣಾಕರ ಶೆಟ್ಟಿ ಪಣಿಯೂರು,ನಿವೃತ್ತ ಬ್ಯಾಂಕ್ ಅಧಿಕಾರಿ ಕಮಲಾಕ್ಷ ಶೆಟ್ಟಿ ಕೋಡಿಕಲ್ ಮುಖ್ಯ ಅತಿಥಿಗಳಾಗಿದ್ದರು. ದಿ.ಶ್ರೀನಿವಾಸ ಭಟ್ ಅವರ ಮಕ್ಕಳಾದ ಎ.ರಾಘವೇಂದ್ರ ಪ್ರಸಾದ್, ಸೂರ್ಯನಾರಾಯಣ,ಅರವಿಂದ ಭಟ್ ಹಾಗೂ ಕುಟುಂಬ ಸದಸ್ಯರು ವೇದಿಕೆಯಲ್ಲಿದ್ದರು.
ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರ. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳಕುಮಾರ್ ಕಾರ್ಯಕ್ರಮ ಸಂಯೋಜಿಸಿದರು. ಉಮೇಶ ಆಚಾರ್ಯ ಗೇರುಕಟ್ಟೆ ವಂದಿಸಿದರು.
ಸಮಿತಿ ಪದಾಧಿಕಾರಿಗಳಾದ ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಸಿದ್ಧಾರ್ಥ ಅಜ್ರಿ, ಮಧುಸೂದನ ಅಲೆವೂರಾಯ,ಪೂರ್ಣೇಶ ಆಚಾರ್ಯ, ಶೋಭಾ ಕೇಶವ ಕಣ್ಣೂರು ಉಪಸ್ಥಿತರಿದ್ದರು.
ಬಳಿಕ ಪದ್ಯಾಣ ಗಣಪತಿ ಭಟ್ ಅವರ ಭಾಗವತಿಕೆಯಲ್ಲಿ ಪ್ರಸಿದ್ಧ ಕಲಾವಿದರಿಂದ ‘ರುಕ್ಮಿಣಿ ಕಲ್ಯಾಣ’ ಕಲ್ಯಾಣ ಸಪ್ತಕದ 5 ನೇ ತಾಳಮದ್ದಳೆ ಜರಗಿತು.
Comments are closed.